Ad Widget

ಪಂಜ : ಜನ ಔಷಧಿ ಸಪ್ತಾಹ ಕಾರ್ಯಕ್ರಮ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಜನ ಔಷಧಿ ಕೇಂದ್ರದ ಆಶ್ರಯದಲ್ಲಿ ಜನ ಔಷಧಿ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾ.3 ರಂದು ಜನ ಔಷಧಿ ಮಾಹಿತಿ ಕಾರ್ಯಗಾರ ನಡೆಯಿತುಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ, ಪಂಜ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ,...

ಪಂಜ : ರಿಕ್ಷಾ ಚಾಲಕರಿಂದ ನೆರವು

ಪಂಜದಲ್ಲಿ ಹಲವು ವರ್ಷಗಳಿಂದ ರಿಕ್ಷಾ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕಿಶೋರ್ ಕಮಿಲ ಇವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರು ತೀರ ಬಡತನದಲ್ಲಿರುವುದನ್ನು ಗಮನಿಸಿ ಬಿಎಂಎಸ್ ಸಂಘದ ಸದಸ್ಯರೆಲ್ಲರೂ ಸೇರಿ ಸಂಗ್ರಹಿಸಿದ 7,410 ರೂಪಾಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
Ad Widget

ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗದ ಅಧ್ಯಕ್ಷರಾಗಿ ಕವನ್ ಪಲ್ಲೋಡಿ, ಕಾರ್ಯದರ್ಶಿಯಾಗಿ ಪ್ರದೀಪ್ ಪಲ್ಲೋಡಿ

ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ -ಪಂಜ ಇದರ ನೂತನ ಅಧ್ಯಕ್ಷರಾಗಿ ಕವನ್ ಪಲ್ಲೋಡಿ, ಕಾರ್ಯದರ್ಶಿ ಯಾಗಿ ಪ್ರದೀಪ್ ಪಲ್ಲೋಡಿ, ಗೌರವಾಧ್ಯಕ್ಷರಾಗಿ ನೇಮಿರಾಜ್ ಪಲ್ಲೋಡಿ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಪಲ್ಲೋಡಿ, ಕೋಶಾಧ್ಯಕ್ಷರಾಗಿ ಮಹೇಶ್ ಪಲ್ಲೋಡಿ, ಜತೆ ಕಾರ್ಯದರ್ಶಿ ಅಶೋಕ್ ದೇರಾಜೆ ಆಯ್ಕೆಯಾಗಿದ್ದಾರೆ.

ಕೊಲ್ಲಮೊಗ್ರದಲ್ಲಿ ಲಾಸ್ಯ ಕಲಾಶಾಲೆಯ ನೃತ್ಯ ತರಬೇತಿ ಆರಂಭ

ಕೊಲ್ಲಮೊಗ್ರದಲ್ಲಿ ಲಾಸ್ಯ ಕಲಾಶಾಲೆಯ ನೇತೃತ್ವದಲ್ಲಿ ಮಾ.7 ರಿಂದ ನೃತ್ಯ ತರಬೇತಿ ಆರಂಭವಾಗಲಿದೆ. ಪ್ರತಿ ಆದಿತ್ಯವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಮಯೂರ ಕಲಾ ಮಂದಿರದಲ್ಲಿ ತರಬೇತಿ ನಡೆಯಲಿದೆ ಎಂದು ಸಂಯೋಜಕಿ ರೇಷ್ಮಾ ಕಡ್ಯ ತಿಳಿಸಿದ್ದಾರೆ.

ಮಾ.11 : ಬೆಳ್ಳಾರೆ ಅಜಪಿಲ ದೇವಾಲಯದಲ್ಲಿ ಮಹಾಶಿವರಾತ್ರಿ ಉತ್ಸವ – ಬೂಡುದ ಭಂಡಾರ ತುಳು ಯಕ್ಷಗಾನ ಬಯಲಾಟ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.11 ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದೆ. ಸಂಜೆ ಗಂಟೆ 5.00 ರಿಂದ ಶತರುದ್ರಾಭಿಷೇಕ, ರಾತ್ರಿ ಗಂಟೆ 9.30 ಕ್ಕೆ ಮಹಾಪೂಜೆ ನಡೆಯಲಿದೆ. ರಾತ್ರಿ ಗಂಟೆ 10.00 ರಿಂದ ಮಹತೋಭಾರ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ " ಬೂಡುದ ಭಂಡಾರ ” ತುಳು ಯಕ್ಷಗಾನ ಬಯಲಾಟ...

ಮಾ.11 : ಕಾಂಚೋಡು ದೇವಾಲಯದಲ್ಲಿ ಮಹಾಶಿವರಾತ್ರಿ ಉತ್ಸವ

ಕಾಂಚೋಡು ಶ್ರೀ ಮಂಜುನಾಥೇಶ್ವರದೇವಾಲಯದಲ್ಲಿ ಮಾ. 11 ರಂದು ಮಹಾಶಿವರಾತ್ರಿ ಉತ್ಸವ ಜರುಗಲಿದೆ. ಉತ್ಸವದ ಅಂಗವಾಗಿ ಸಂಜೆ ಗಂಟೆ 6 ರಿಂದ ಶತರುದ್ರಾಭಿಷೇಕ, ರಂಗಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಯಸ್.ಬಿ.ದಳರವರು ತಿಳಿಸಿದ್ದಾರೆ.

ದಕ್ಷಿಣ ನೈರುತ್ಯ ರೈಲ್ವೇ ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ ವೆಂಕಟ್ ದಂಬೆಕೋಡಿ ನೇಮಕ

ಭಾರತ ಸರ್ಕಾರದ ದಕ್ಷಿಣ ನೈರುತ್ಯ ರೈಲ್ವೇಯ ವಿಭಾಗೀಯ ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ ( Zonal Railway User Consultative Commitee of South Western) ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ನೇಮಕಗೊಂಡಿದ್ದಾರೆ.ಈ ಬಗ್ಗೆ ರೈಲ್ವೇ ಸಚಿವಾಲಯ ಕಾರ್ಯಾಲಯದಿಂದ ಅಧಿಸೂಚನೆ ಬಂದಿದ್ದು ಮುಂದಿನ ಎರಡು ವರ್ಷಗಳ ಕಾಲ ಇವರು...
error: Content is protected !!