ಅಡ್ಡಬೈಲ್ – ಬೀದಿಗುಡ್ಡೆ – ಬೋಗಾಯನಕೆರೆ ರಿಂಗ್ ರೋಡ್ ಹೋರಾಟ ಸಮಿತಿ ವತಿಯಿಂದ ಮಾರ್ಚ್ 8 ರಂದು ನಡೆಯಬೇಕಿದ್ದ ರಸ್ತೆತಡೆ, ಬಳ್ಪ ಗ್ರಾಮ ಪಂಚಾಯತ್ ಮುತ್ತಿಗೆಯಂತಹ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಕಳೆದ ವಾರ ಸಚಿವರಾದ ಎಸ್. ಅಂಗಾರ, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬಳ್ಪ ಗ್ರಾಮಕ್ಕೆ ಭೇಟಿ ನೀಡಿ ಈ ರಸ್ತೆಯ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು ಹಾಗೂ ಮಾರ್ಚ್ 25ರ ಒಳಗೆ ಕಾಮಗಾರಿ ಪ್ರಾರಂಭಿಸುವ ಭರವಸೆ ನೀಡಿರುವುದರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.
- Thursday
- November 21st, 2024