ನ.ಪಂ.ನ ಆವರಣದಲ್ಲಿರು ಪ್ಲಾಸ್ಟಿಕ್ ಕಸ ವಿಲೇವಾರಿಗೆ ಬರ್ನಿಂಗ್ ಮೆಷಿನ್ ಪಂಚಾಯತ್ ಆವರಣ ತಲುಪಿದ್ದು ಶೀಘ್ರವೇ ಕಸ ವಿಲೇವಾರಿ ಆಗಲಿದೆ ಎಂದು ನ.ಪಂ.ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಆದರೇ ನ.ಪಂ.ಆವರಣಕ್ಕೆ ಪ್ಲಾಸ್ಟಿಕ್ ಪ್ರೆಸ್ಸಿಂಗ್ ಮೆಷಿನ್ ನಂತೆ ಕಂಡುಬರುತ್ತಿದ್ದು ಹಾಗೂ ಹಳೆಯದಾಗಿದ್ದು ಈ ಯಂತ್ರದಿಂದ ಎಲ್ಲಾ ತ್ಯಾಜ್ಯ ವಿಲೇವಾರಿ ಸಾಧ್ಯವೇ ಅಥವಾ ಎಲ್ಲಾ ತ್ಯಾಜ್ಯ ನಿರ್ವಹಣೆಗೆ ಬೇರೆ ಯಂತ್ರ ಇದೇ ವರ್ಷ ಬರಲಿದೆಯೇ ? ಎಂಬ ಸಂಶಯ ಕಾಡುತ್ತಿದೆ. ಅತೀ ಶೀಘ್ರ ಕಸ ವಿಲೇವಾರಿಗಾಗಿ ಜನ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದಷ್ಟು ಬೇಗ ವಿಲೇವಾರಿ ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ಡಿ.ಎಂ.ಶಾರಿಖ್ ಒತ್ತಾಯಿಸಿದ್ದಾರೆ.
- Thursday
- November 21st, 2024