ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಎಸ್ ಅಂಗಾರ ಇಂದು ಮೊದಲ ಬಾರಿಗೆ ಸುಳ್ಯಕ್ಕೆ ಆಗಮಿಸಲಿದ್ದು, ಅದ್ದೂರಿ ಸ್ವಾಗತಕ್ಕೆ ಸುಳ್ಯ ಮಂಡಲ ಸಿದ್ದತೆ ಮಾಡಿಕೊಂಡಿದೆ. ಜ.15 ರಂದು ಆಗಮಿಸುವ ಸಚಿವರು ಪೂ.ಗಂ 10.30 ಕ್ಕೆ-ಬೆಂಗಳೂರಿನಿಂದ ವಿಮಾನ ಮೂಲಕ ಮಂಗಳೂರಿಗೆ ಬರಲಿದ್ದಾರೆ. ಪೂ.ಗಂ 11.30 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದಮ.ಗಂ 12.00 ಕ್ಕೆ ಮಂಗಳೂರು ಕದ್ರಿ ಶ್ರೀ ಮಂಜುನಾಥ ದೇವರ ದರ್ಶನ ಪಡೆದು ಮ.ಗಂ 12.15 ಮಂಗಳೂರಿನ ಸಂಘದ ಕಾರ್ಯಾಲಯ ಸಂಘನಿಕೇತನ ಭೇಟಿ ನೀಡಲಿದ್ದಾರೆ. ಮ.ಗಂ 12.30 ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ, ಮ.ಗಂ 2.30 ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಭೇಟಿ, ಸಂ.ಗಂ 3.00 ಪುತ್ತೂರು ಮಹಾಲಿಂಗೇಶ್ವರ ದೇವರ ದರ್ಶನ, ಸಂ.ಗಂ 4.00 ಜಾಲ್ಸೂರಿಗೆ ತಲುಪಲಿದ್ದಾರೆ. ಅಲ್ಲಿಂದ ಸುಳ್ಯ ಕ್ಷೇತ್ರದ ಪರವಾಗಿ ಅದ್ಧೂರಿಯಾಗಿ ಸ್ವಾಗತಿಸಲು ಸುಳ್ಯ ಬಿಜೆಪಿ ಸಜ್ಜಾಗಿದೆ. ಅಲ್ಲಿಂದ ವಾಹನ ಜಾಥಾದ ಮೂಲಕ ಸಂ.ಗಂ 4.15 ಕ್ಕೆ ಸುಳ್ಯಕ್ಕೆ ಕರೆತರಲಾಗುವುದು. ಜ್ಯೋತಿ ವೃತ್ತದಿಂದ ತೆರೆದ ವಾಹನದ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದು ಸಂ.ಗಂ 4.30 ಸುಳ್ಯ ಶ್ರೀ ಚೆನ್ನಕೇಶವ ದೇವರ ದರ್ಶನ ಪಡೆದು ಸಂ.ಗಂ 5.00 ಸುಳ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದಾರೆಂದು ಮಂಡಲ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024