ರಾಜ್ಯ ಸಚಿವ ಸಂಪುಟ ಇಂದು ವಿಸ್ತರಣೆಯಾಗಿದ್ದು ಸುಳ್ಯ ಶಾಸಕ ಅಂಗಾರರವರು ಸಚಿವವಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ಅಪರಾಹ್ನ 4 ಗಂಟೆಗೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜ್ಯಪಾಲರು ಪ್ರತಿಜ್ಞಾವಿಧಿ ಭೋದಿಸಿದರು. ದೇವರ ಹೆಸರಿನಲ್ಲಿ ಅಂಗಾರರವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸುಳ್ಯದಲ್ಲಿ 6 ಬಾರಿ ಶಾಸಕರಾದ ಅಂಗಾರರಿಗೆ ಅರ್ಹವಾಗಿದೆ ಸಚಿವ ಸ್ಥಾನ ಒದಗಿ ಬಂದಿರುವುದು ಸುಳ್ಯದ ಬಿಜೆಪಿ ಹಾಗೂ ಕಾರ್ಯಕರ್ತರಿಗೆ ಸಂಭ್ರಮ ತಂದುಕೊಟ್ಟಿದೆ.
- Saturday
- November 23rd, 2024