Ad Widget

ಮಡಿಕೇರಿ : ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ ಸುಬ್ರಹ್ಮಣ್ಯ ಉಪಾಧ್ಯಾಯ

ಅಕ್ರಮ ಸಕ್ರಮ ಸಮಿತಿಗೆ ಸಮಿತಿ ಸದಸ್ಯರಾಗಿ ಚೆಂಬು ಗ್ರಾಮದ ಸುಬ್ರಹ್ಮಣ್ಯ ಉಪಾಧ್ಯಾಯ ರವರನ್ನು ಸರಕಾರ ನೇಮಕ ಮಾಡಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಡಿಕೇರಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ – ಸಕ್ರಮ ಸಮಿತಿಯ ಅಧ್ಯಕ್ಷರಾಗಿ ಶಾಂತೆಯಂಡ ರವಿಕುಶಾಲಪ್ಪರವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಇದೀಗ ಅಕ್ರಮ ಸಕ್ರಮ ಸಮಿತಿಯಲ್ಲಿ ವಿಲೇವಾರಿಗೆ ಬಾಕಿಯಿರುವ ಸಾರ್ವಜನಿಕರ ನೂರಾರು ಅರ್ಜಿಗಳ ವಿಲೇವಾರಿಯ ಜವಾಬ್ದಾರಿಯನ್ನು ರವಿಕುಶಾಲಪ್ಪ ನೇತೃತ್ವದ ಸಮಿತಿ ನಿಭಾಯಿಸಲಿದೆ.
ಸಮಿತಿ ಕಾರ್ಯದರ್ಶಿಯಾಗಿ ತಾಲ್ಲೂಕು ತಹಶೀಲ್ದಾರ್, ಸದಸ್ಯರುಗಳಾಗಿ ಕವಿತಾ ಪ್ರಭಾಕರ್ , ಮಿಟ್ಟು ಹಾಗೂ ಸುಬ್ರಮ್ಮಣ್ಯ ಉಪಾಧ್ಯಾಯ ಇವರುಗಳನ್ನು ಸರಕಾರ ನೇಮಕ ಮಾಡಿದೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!