ಬೆಳ್ಳಾರೆ ಎಂಡೋ ಪಾಲನಾ ಕೇಂದ್ರಕ್ಕೆ ರೋಟರಿ ಕ್ಲಬ್, ಕಾಮದೇನು ಸಹಕಾರ ಸಂಘದಿಂದ ಚಪ್ಪಲಿ ಸ್ಟ್ಯಾಂಡ್ ಕೊಡುಗೆ

ಬೆಳ್ಳಾರೆ: ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಹಾಗೂ ಕಾಮದೇನು ಕ್ರೆಡಿಟ್ ಸಹಕಾರ ಸಂಘ ನಿಯಮಿತ, ಬೆಳ್ಳಾರೆ ಇವರ ಜಂಟಿ ಆಶ್ರಯದಲ್ಲಿ ಬೆಳ್ಳಾರೆಯ ಎಂಡೋ ಪಾಲನಾ ಕೇಂದ್ರಕ್ಕೆ ಚಪ್ಪಲಿ ಸ್ಟ್ಯಾಂಡ್ ಕೊಡುಗೆಯಾಗಿ ನೀಡಲಾಯಿತು.

. . . . . . . . .

ನ. 24ರಂದು ನಡೆದ ಕಾರ್ಯಕ್ರಮದಲ್ಲಿ ಎಂಡೋ ಪಾಲನಾ ಕೇಂದ್ರದ ಬೇಡಿಕೆಯಂತೆ ಅಗತ್ಯವಿದ್ದ ಚಪ್ಪಲಿ ಸ್ಟ್ಯಾಂಡ್ ಅನ್ನು ಕೇಂದ್ರದ ಮೇಲ್ವಿಚಾರಕಿ ಶರ್ಮಿಳಾ ಅವರಿಗೆ ಹಸ್ತಾಂತರಿಸಲಾಯಿತು.

. . . . . . .

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ರೋಟರಿಯನ್ ಆರಿಫ್ ಬೆಳ್ಳಾರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸೇವಾ ಕಾರ್ಯದ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.

ಕಾಮದೇನು ಕ್ರೆಡಿಟ್ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ ಮಾಧವ ಗೌಡ ಎಂ. ಹಾಗೂ ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಉಪಸ್ಥಿತರಿದ್ದರು. ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ರವೀಂದ್ರ ಗೌಡ, ರೋಟರಿಯನ್ನರಾದ ಹನೀಫ್, ಹರ್ಷಿತ್, ಪ್ರಶಾಂತ್ ಟಿ., ಎಂಡೋ ಪಾಲನಾ ಕೇಂದ್ರದ ಸಿಬ್ಬಂದಿಗಳು ಹಾಗೂ ಮಕ್ಕಳು ಭಾಗವಹಿಸಿದ್ದರು.

ಚಪ್ಪಲಿ ಸ್ಟ್ಯಾಂಡ್ ಖರೀದಿಗೆ ಆರ್ಥಿಕ ಸಹಕಾರ ನೀಡಿದ ಕಾಮದೇನು ಕ್ರೆಡಿಟ್ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ರೋಟರಿ ಕ್ಲಬ್ ವತಿಯಿಂದ ಗೌರವಿಸಲಾಯಿತು.

ಈ ಸೇವಾ ಕಾರ್ಯಕ್ಕೆ ಎಂಡೋ ಪಾಲನಾ ಕೇಂದ್ರದ ವತಿಯಿಂದ ಮೆಚ್ಚುಗೆ ವ್ಯಕ್ತವಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading