ರೆಂಜಾಳ: ವಿಜೃಂಭಣೆಯಿಂದ ಜರುಗಿದ ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆ – ಶಾಸ್ತಾವು ಯುವಕ ಮಂಡಲದ ವತಿಯಿಂದ ನೂತನ ಆಂಬ್ಯುಲೆನ್ಸ್ ಖರೀದಿಯ ಘೋಷಣೆ

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ಶಾಸ್ತಾವು ಯುವಕಮಂಡಲ(ರಿ.) ರೆಂಜಾಳ ಇದರ ವತಿಯಿಂದ 6ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕ ಮೊಸರುಕುಡಿಕೆ ಉತ್ಸವವು ಸೆ. 20ರಂದು ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

. . . . . . . . .

ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನ ಕಾರ್ಯಕ್ರಮ ಉದ್ಘಾಟಿಸಿದರು. ಯುವಕಮಂಡಲದ ಅಧ್ಯಕ್ಷ ಮಹೇಶ ಹೈದಂಗೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀದೇವಳದ ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು, ಕಾರ್ಯದರ್ಶಿ ಸತೀಶ್ ರಾವ್ ದಾಸರಬೈಲು, ವ್ಯವಸ್ಥಾಪನ ಸಮಿತಿ ಸದಸ್ಯ ಮೋಹಿತ್ ಹರ್ಲಡ್ಕ, ಗಜಾನನ ಯುವತಿ ಮಂಡಲ(ರಿ.) ಬೊಮ್ಮಾರು ಇದರ ಅಧ್ಯಕ್ಷೆ ಚಿತ್ರಲೇಖ ಬಾಣೂರು, ಮರ್ಕಂಜ ಪ್ರೌಢಶಾಲಾ ಕನ್ನಡ ಶಿಕ್ಷಕಿ ವಿಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಾಜೇಶ್ ರೆಂಜಾಳ ಸ್ವಾಗತಿಸಿ, ಹರ್ಷಿತ್ ಮಿತ್ತಡ್ಕ ವಂದಿಸಿದರು. ನವೀನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾರ್ವಜನಿಕರಿಗೆ ವಿವಿಧ ಸ್ಪರ್ದೆಗಳು ನಡೆದವು. ಪುರುಷರ ವಾಲಿಬಾಲ್ ಪಂದ್ಯಾಟಕ್ಕೆ ಮೋನಪ್ಪ ಪೂಜಾರಿ ಹೈದಂಗೂರು ಹಾಗೂ ನವೀನ್ ದೊಡ್ಡಿಹಿತ್ಲುರವರು ಚಾಲನೆ ನೀಡಿದರು.

. . . . . . .

ಕಾರ್ಯಕ್ರಮದ ಮಧ್ಯದಲ್ಲಿ ಆಗಮಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು ಯುವಕಮಂಡಲದ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಅಲ್ಲದೆ ಮಹತ್ವಾಕಾಂಕ್ಷೆಯ ಯೇಜನೆಯಾದ ಆಂಬುಲೆನ್ಸ್ ಖರೀದಿಸಲು ಸಹಕಾರ ನೀಡುವುದಾಗಿ ಹೇಳಿದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಕಮಂಡಲದ ಅಧ್ಯಕ್ಷ ಮಹೇಶ್ ಹೈದಂಗೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಚಸ್ಥಾಪನೆಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಕಾಯರ, ಔಘಡ್ ಫೀರ್ ರಾಜೇಶ್ ನಾಥ್ ಜೀ, ಧರ್ಮದರ್ಶಿಗಳು ಅನ್ನಪೂರ್ಣೇಶ್ವರಿ ಯೋಗೀಶ್ವರ ಸಿದ್ಧಮಠ ಮರ್ಕಂಜ, ಮಾಧವ ಗೌಡ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ, ಪ್ರಭಾಕರ ರೈ ಪೆರಾಜೆ ಪ್ರಗತಿಪರ ಕೃಷಿಕರು, ಚಿನ್ನಪ್ಪ ಗೌಡ ಬೇರಿಕೆ ಸಂಚಾಲಕರು ಅನ್ನಪೂರ್ಣ ಸಮಿತಿ ಶ್ರೀಕ್ಷೇತ್ರ ರೆಂಜಾಳ, ದಯಾನಂದ ಪುರ ಅಧ್ಯಕ್ಷರು ಸಿಎ ಬ್ಯಾಂಕ್ ಮರ್ಕಂಜ, ವೆಂಕಟೇಶ್ ಉಪವಲಯಾರಣ್ಯಾಧಿಕಾರಿ ಸಂಪಾಜೆ ಶಾಖೆ, ಮಹೇಶ್ ಮೇರ್ಕಜೆ ಉಪಸ್ಥಿತರಿದ್ದರು. ಲೋಹಿತ್ ರೆಂಜಾಳ ಸ್ವಗತಿಸಿ, ಜಯಪ್ರಕಾಶ ಬೇರಿಕೆ ವಾರ್ಷಿಕ ವರದಿ ವಾಚಿಸಿದರು, ಹರ್ಷಿತ್ ಮಿತ್ತಡ್ಕ ವಂದಿಸಿದರು. ರಾಜೇಶ್ ರೆಂಜಾಳ ನಿರೂಪಿಸಿದರು.

ನೂತನ ಆಂಬ್ಯುಲೆನ್ಸ್ ಖರೀದಿ,ಜನವರಿಯಲ್ಲಿ ಲೋಕಾರ್ಪಣೆಗೆ ಸಿದ್ಧತೆ

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಾಸ್ತಾವು ಯುವಕಮಂಡಲವು ಕಳೆದ ಐದಾರು ವರ್ಷಗಳಿಂದ ಅನೇಕ ಸಮಾಜಮುಖಿ,ಜನಪರ ಕೆಲಸಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದು ಇವರ ಇನ್ನೊಂದು ಮಹತ್ವಾಕಾಂಕ್ಷೆಯ ಯೋಜನೆಯಾದ ನೂತನ ಆಂಬ್ಯುಲೆನ್ಸ್ ಖರೀದಿಸಿ ಮುಂದಿನ ಜನವರಿ ತಿಂಗಳಲ್ಲಿ ಲೋಕಾರ್ಪಣೆ ಮಾಡುವ ವಿಚಾರವನ್ನು ಸಭೆಯಲ್ಲಿ ಘೋಷಿಸಲಾಯಿತು. ಶಾಸಕರಿಗೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಯೋಜನಾಧಿಕಾರಿಗಳಿಗೆ ಆರ್ಥಿಕ ಸಹಕಾರಕ್ಕಾಗಿ ಯುವಕಮಂಡಲದ ವತಿಯಿಂದ ಮನವಿ ಸಲ್ಲಿಸಲಾಯಿತು.

ಅಟ್ಟಿ ಮಡಿಕೆ ಸ್ಪರ್ಧೆಯಲ್ಲಿ ಬಂದ ಬಹುಮಾನ ಬಡ ವಿದ್ಯಾರ್ಥಿನಿಯ ಶೈಕ್ಷಣಿಕ ಶುಲ್ಕ ಭರಿಸಲು ಕೊಡುಗೆ

ಈ ವರ್ಷ ಅಟ್ಟಿಮಡಕೆ ಸ್ಪರ್ಧೆಯಲ್ಲಿ ಬಂದ ಬಹುಮಾನದಲ್ಲಿ ರೂ.15,000.ವನ್ನು ತೀರಾ ಬಡತನದಲ್ಲಿರುವ ಸುಳ್ಯದ ಅಂಬಟೆಡ್ಕ ನಿವಾಸಿ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ರಿಯಾ ಸಂದೀಪ್ ಯಾದವ್ ರವರಿಗೆ ಸಭೆಯಲ್ಲಿ ನೀಡಲಾಯಿತು. ಇದು ಯುವಕಮಂಡಲದ ಮಾನವೀಯತೆಗೆ ಸಾಕ್ಷಿಯಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading