ಸುಳ್ಯ ನ.ಪಂ. ಮುಂಭಾಗದ ಶೆಡ್‌ನಲ್ಲಿರುವ ಕಸ ತೆರವುಗೊಳಿಸಿ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ | ಆರೋಗ್ಯ ಸಚಿವ ಯು. ಟಿ. ಖಾದರ್ ರವರಿಗೆ ಸಾಮಾಜಿಕ ಕಾರ್ಯಕರ್ತ ಸುಪ್ರೀತ್ ಮೋಂಟಡ್ಕ ಮನವಿ

ಸುಳ್ಯ ನಗರ ಪಂಚಾಯತ್ ಮುಂಭಾಗದ ಶೆಡ್‌ನಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿರುವ ಕಸವನ್ನು ತೆರವುಗೊಳಿಸಿ, ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಸುಪ್ರೀತ್ ಮೋಂಟಡ್ಕ ಆರೋಗ್ಯ ಸಚಿವ ಯು.ಟಿ ಖಾದರ್ ರವರಿಗೆ ಇಂದು ಮನವಿ ಸಲ್ಲಿಸಿದ್ದಾರೆ. ಪ್ರಾಕೃತಿಕ ವಿಕೋಪ ಪ್ರಗತಿ ಪರಿಶೀಲನಾ ಸಭೆಗೆ ಇಂದು ಸುಳ್ಯಕ್ಕೆ ಆಗಮಿಸಿದ ವೇಳೆ ಸುಪ್ರೀತ್ ರವರು ಸಚಿವರಿಗೆ  ಈ...

ಮುಂಚಿತವಾಗಿ ಅರಿವು ಮೂಡಿಸುವುದೇ ಕ್ಯಾನ್ಸರ್ ತಡೆಗಟ್ಟುವ ಏಕೈಕ ಮಾರ್ಗ – ಆರೋಗ್ಯ ಸಚಿವ ಯು.ಟಿ.ಖಾದರ್

ಸುಳ್ಯ: ಕ್ಯಾನ್ಸರ್ ಬಗ್ಗೆ ಮುಂಚಿತವಾಗಿ ಅರಿವು ಮೂಡಿಸುವುದೇ ಇದನ್ನು ತಡೆಗಟ್ಟುವ ಏಕೈಕ ಮಾರ್ಗ. ಇಂತಹ ಅಭಿಯಾನಗಳು ಪ್ರತಿ ಮನೆಗೂ ತಲುಪಬೇಕು" ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅಭಿಪ್ರಾಯಪಟ್ಟರು.ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ರೋಟರಿ ಕ್ಲಬ್ ಸುಳ್ಯ ಮತ್ತು ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ...
Ad Widget

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದ ತೋಟದಲ್ಲಿ ಬೆಳೆದ 4.5 ಅಡಿ ಎತ್ತರದ 35 ಕೆಜಿ ತೂಕದ ಬಾಳೆಗೊನೆ

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ತೋಟದಲ್ಲಿ 4.5 ಅಡಿ ಎತ್ತರದ 35 ಕೆಜಿ ತೂಕದ ಬೃಹತ್ ಕದಳಿ ಬಾಳೆಗೊನೆ ಬೆಳೆದಿದ್ದು, ಇದನ್ನು ಶ್ರೀದೇವರ ಪೂಜೆಗೆ ಸಮರ್ಪಿಸಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

ಇಂದಿನ(ಆಗಸ್ಟ್ 06) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಕಾಳುಮೆಣಸು, ರಬ್ಬರ್ ಹಾಗೂ ಕೊಬ್ಬರಿ ದರದಲ್ಲಿ ಏರಿಕೆ ; ಅಡಿಕೆ ಧಾರಣೆ ಸಂಪೂರ್ಣ ಸ್ಥಿರ! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 06 ಆಗಸ್ಟ್ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 06) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ಸಂಪಾಜೆ : ಕಾಡುಕೋಣ ಬೇಟೆ – ಇಬ್ಬರ ಬಂಧನ – ಓರ್ವ ಪರಾರಿ

ಸಂಪಾಜೆಯ ಬಳಿ ಕಾಡುಕೋಣ ಬೇಟೆಯಾಡಿ ಹತ್ಯೆ ಮಾಡಿ ಮಾಂಸ ಮಾಡಿದ ಇಬ್ಬರು ಆರೋಪಿಗಳನ್ನು ಹಾಗೂ ಇಕೋ ಕಾರನ್ನು ಕೊಡಗು ಸಂಪಾಜೆ ಅರಣ್ಯ ಇಲಾಖೆ ವಶಕ್ಕೆ ಪಡೆದ ಘಟನೆ ಆ.5 ರಂದು ಸಂಜೆ ನಡೆದಿದೆ. ಓರ್ವ ಆರೋಪಿ ತಲೆ ಮರೆಸಿಜೊಂಡಿದ್ದಾನೆ. ಕಲ್ಲುಗುಂಡಿಯ ಕಾಡುಪಂಜ ಬಳಿಯ ಅರಣ್ಯದಲ್ಲಿ ಇಬ್ಬರು ಆರೋಪಿಗಳಾದ ಚೆಂಬು ಗ್ರಾಮದ ಗೌತಮ್ ಕುಕ್ಕೆಟ್ಟಿ ಹಾಗೂ ಪೆರಾಜೆಯ...

ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಉಮ್ಮರ್ ಫಾರೂಕ್ ಕೊಚ್ಚಿಯಲ್ಲಿ ಬಂಧನ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎನ್‌ಐಎ ಮೋಸ್ಟ್ ವಾಂಟೆಡ್‌ ಆರೋಪಿ ಉಮ್ಮರ್ ಫಾರೂಕ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕೇರಳದ ಕೊಚ್ಚಿಯಲ್ಲಿ ಬಂಧಿಸಿದ್ದು, ಒಟ್ಟು ಬಂಧಿತ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಉಮ್ಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ಆತನ ಬಂಧನಕ್ಕೆ...

ಮೆಸ್ಕಾಂ ಆಪರೇಟರ್ ಮೇಲೆ ಎಇ ಸುಪ್ರೀತ್ ಹಲ್ಲೆ ಪ್ರಕರಣ – ಎಫ್ ಐ ಆರ್ ದಾಖಲಿಸಲು ಭಯಗೊಂಡ ಸಿಬ್ಬಂದಿ – ಮೊಬೈಲ್ ಹಾನಿಗೊಳಿಸಿದ್ದಕ್ಕೆ ರೂ. 10 ಸಾವಿರ ನೀಡಿದ ಎಇ ಸುಪ್ರೀತ್ – ಸಿಬ್ಬಂದಿಯಿಂದ ನ್ಯಾಯಕ್ಕಾಗಿ ಮೆಸ್ಕಾಂ ಮೇಲಾಧಿಕಾರಿಗಳಿಗೆ ದೂರು

ಸುಳ್ಯ ಮೆಸ್ಕಾಂ ಸಬ್ ಸ್ಟೇಷನ್ ನಲ್ಲಿ ಜಂಪರ್ ಕೊಡಲು ಲೈನ್ ಮ್ಯಾನ್ ವಿಳಂಬ ಮಾಡಿದ್ದಕ್ಕೆ ಕೋಪಗೊಂಡ ಎಇ ಸುಪ್ರೀತ್ ಅವರು ಲೈನ್ ಆಪ್ ಮಾಡಿಕೊಟ್ಟ ಸ್ಟೇಷನ್ ಆಪರೇಟರ್ ಗೆ ಹಲ್ಲೆ ನಡೆಸಿದ ಘಟನೆ ಆ. 2 ರಂದು ನಡೆದಿದ್ದು ಸುಳ್ಯ ಠಾಣೆ ಹಾಗೂ ಮೆಸ್ಕಾಂ ಮೇಲಾಧಿಕಾರಿಗಳಿಗೆ ದೂರು ಹೋದ ಬಗ್ಗೆ ವರದಿಯಾಗಿದೆ. ಆ.02 ರಂದು ಕಲ್ಲುಗುಂಡಿ...

ನಡುಗಲ್ಲು : ಮರ ಬಿದ್ದು ರಸ್ತೆ ಬ್ಲಾಕ್

ಹರಿಹರ ಪಲ್ಲತ್ತಡ್ಕ ನಡುಗಲ್ಲು ರಸ್ತೆಯ ಕೊರಂಬಠ ಬಳಿ ಬರೆ ಕುಸಿತದಿಂದ ಮರ ರಸ್ತೆಗೆ ಬಿದ್ದು ಬ್ಲಾಕ್ ಆಗಿದೆ ಎಂದು ತಿಳಿದುಬಂದಿದೆ.

ಭಾರತೀಯ ಭೂಸೇನೆಯಲ್ಲಿ ಹವಾಲ್ದಾರ್(ದಫೇದಾರ್) ಆಗಿ ಪದೋನ್ನತಿ ಹೊಂದಿದ ದಯಾನಂದ ಜಾಲುಮನೆ

ಕಳೆದ 22 ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ದಯಾನಂದ ಜಾಲುಮನೆ ಅವರು ಹವಾಲ್ದಾರ್(ದಫೇದಾರ್) ಆಗಿ ಪದೋನ್ನತಿ ಹೊಂದಿದ್ದಾರೆ. ಪ್ರಸ್ತುತ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಆರ್ಮಿ ಟ್ರೈನಿಂಗ್ ಕಮಾಂಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು 2005ರಲ್ಲಿ ಭಾರತೀಯ ಭೂಸೇನೆಗೆ ಸೇರ್ಪಡೆಯಾಗಿ ತಮ್ಮ ಕರ್ತವ್ಯನಿಷ್ಠೆ ಹಾಗೂ ಉತ್ತಮ ಸೇವೆಯಿಂದ ಕ್ರಮವಾಗಿ SOWAR...

ಕಾವು ನವೋದಯ ಒಕ್ಕೂಟದಿಂದ ಮಕ್ಕಳಿಗೆ ಪುಸ್ತಕ-ಲೇಖನ ಸಾಮಗ್ರಿ ಮತ್ತು ಪ್ರೋತ್ಸಾಹ ಧನ ವಿತರಣೆ

ಕಾವು, ಆಗಸ್ಟ್ 4 : ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ರಿ. ಮಂಗಳೂರು ಮತ್ತು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಕಾವು ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ-ಲೇಖನ ಸಾಮಗ್ರಿ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ...
Loading posts...

All posts loaded

No more posts

error: Content is protected !!