ಭಾರತೀಯ ಭೂಸೇನೆಯಲ್ಲಿ ಹವಾಲ್ದಾರ್(ದಫೇದಾರ್) ಆಗಿ ಪದೋನ್ನತಿ ಹೊಂದಿದ ದಯಾನಂದ ಜಾಲುಮನೆ

ಕಳೆದ 22 ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ದಯಾನಂದ ಜಾಲುಮನೆ ಅವರು ಹವಾಲ್ದಾರ್(ದಫೇದಾರ್) ಆಗಿ ಪದೋನ್ನತಿ ಹೊಂದಿದ್ದಾರೆ. ಪ್ರಸ್ತುತ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಆರ್ಮಿ ಟ್ರೈನಿಂಗ್ ಕಮಾಂಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು 2005ರಲ್ಲಿ ಭಾರತೀಯ ಭೂಸೇನೆಗೆ ಸೇರ್ಪಡೆಯಾಗಿ ತಮ್ಮ ಕರ್ತವ್ಯನಿಷ್ಠೆ ಹಾಗೂ ಉತ್ತಮ ಸೇವೆಯಿಂದ ಕ್ರಮವಾಗಿ SOWAR ಆಗಿ ALD(ಆಕ್ಟಿವ್ ಲ್ಯಾನ್ಸ್ ದಫೇದಾರ್) ಹಾಗೂ LD(Lance ದಫೇದಾರ್) ಆಗಿ ಪ್ರಸ್ತುತ ದಫೇದಾರ್(ಹವಾಲ್ದಾರ್) ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಸೇವಾ ಅವಧಿಯಲ್ಲಿ ಅಹಮದ್‌ನಗರ, ಜಮ್ಮು, ಜಾರ್ಖಂಡ್‌ನ ರಾಂಚಿ, ಜಮ್ಮುವಿನ 48 ರಾಷ್ಟ್ರೀಯ ರೈಫಲ್ಸ್, ಪಠಾಣ್‌ಕೋಟ್‌, ಜಮ್ಮು(ಅನ್ನೂರ್), ಸೂರತ್‌ಗಥ್, ಅಹಮದ್‌ನಗರದ ACC AND SCHOOL, ಅಹಮ್ಮದ್ ನಗರದ ಟ್ರೈನಿಂಗ್ ಸೆಂಟರ್ ನಲ್ಲಿ instructor ಆಗಿ, ಹಾಗೂ ಮಧ್ಯಪ್ರದೇಶದ ಮಹೂ ಸೇರಿದಂತೆ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

. . . . . . . . .

ಇವರು ಮಡಪ್ಪಾಡಿ ಗ್ರಾಮದ ಜಾಲುಮನೆ ಚಿನ್ನಪ್ಪ ಗೌಡ ಮತ್ತು ಭವಾನಿ ದಂಪತಿಯ ಪುತ್ರ. ಇವರ ಪತ್ನಿ ಶ್ರೀಮತಿ ಜಯಶ್ರೀ ಅವರು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಪುತ್ರ ಆಶ್ಲೇಷ್.ಜೆ ಗೌಡ. ಇವರ ಸಹೋದರ ಸತೀಶ್ ಜಾಲುಮನೆ ಅವರು ನಿವೃತ್ತ ಯೋಧರಾಗಿದ್ದು, ಮತ್ತೋರ್ವ ಸಹೋದರ ಜಯಪ್ರಕಾಶ್‌ ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading