ಸುಳ್ಯದಲ್ಲಿ ಸಂಭ್ರಮದ ಮಿಲಾದುನ್ನೆಬಿ ಆಚರಣೆ – “ಶಾಂತಿಯ ಸಂದೇಶ, ಮನುಕುಲದ ಸೇವೆಯ ಪ್ರವಾದಿಯವರ ಜೀವನ ಇಂದಿಗೂ ಪ್ರಸ್ತುತ” : ಅಹ್ಸನಿ

ಪ್ರವಾದಿ ಮುಹಮ್ಮದ್ ಮುಸ್ತಫ(ಸ.ಅ) ರವರ ಜನ್ಮದಿನಾಚರಣೆಯ ಅಂಗವಾಗಿ ಗಾಂಧಿನಗರ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್, ಮುನವ್ವಿರುಲ್ ಇಸ್ಲಾಂ ಮದ್ರಸ ಇದರ ಆಶ್ರಯ ದಲ್ಲಿ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರಗಿತು, ಮೀಲಾದ್ ಕಾಲ್ನಡಿಗೆ ಸ್ವಲಾತ್ ಜಾಥಾ ವನ್ನು ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್ ಜಾಥಾ ನಾಯಕ ಆಶಿಕ್ ರವರಿಗೆ ಧ್ವಜ ಹಸ್ತಾoತರಿಸಿ ಉದ್ಘಾಟಿಸಿದರು  ಸ್ಥಳೀಯ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ದುಃವ ನೆರವೇರಿಸಿದರು  ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಶುಭಾಶoಶನೆ ಗೈದರು 

. . . . . . . . .

ಮುದರ್ರಿಸರಾದ ಮುಬಶಿರ್ ಅಹ್ಸನಿ ಅಲ್ ಖಾಮಿಲ್ ಮೆರವಣಿಗೆಯ ನೇತೃತ್ವ ವಹಿಸಿ,ವಿದ್ಯಾರ್ಥಿ ಪುರಸ್ಕಾರ ದಲ್ಲಿ ಮಾತನಾಡಿ ಪ್ರವಾದಿಯವರ ಜೀವನದ ಪ್ರತಿಯೊಂದು ಕ್ಷಣವೂ ಇಂದಿಗೂ ಸಮಾಜದಲ್ಲಿ ಪ್ರಸ್ತುತ ವೆನಿಸಿದೆ ಎಂದರು. ಮೆರವಣಿಗೆಯ ನಂತರ ವಿವಿಧ ಕಾರ್ಯಕ್ರಮ ಗಳು ಜರಗಿತು, ವಿದ್ಯಾರ್ಥಿ ಗಳ ಮೀಲಾದ್ ಫೆಸ್ಟ್, ಪ್ರತಿಭಾ ಪುರಸ್ಕಾರ, ಮೀಲಾದ್ ಪ್ರಭಾಷಣ ನೆರವೇರಿತು  ಮಧ್ಯಾಹ್ನ ಮೌಲುದ್ ಪಾರಾಯಣ, ಅನ್ನದಾನ ನಡೆಯಿತು 

. . . . . . .

ಕಾರ್ಯಕ್ರಮ ದಲ್ಲಿ ಜಮಾಅತ್ ಸಮಿತಿ ಪದಾಧಿಕಾರಿಗಳಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಹಾಜಿ ಎಸ್. ಎಂ ಹಮೀದ್, ಹಾಜಿ ಐ. ಇಸ್ಮಾಯಿಲ್, ಕೆ ಎಸ್ ಉಮ್ಮರ್, ಹಾಜಿ ಯಾಕೂಬ್ ಎಸ್ ಟಿ, ಹಾಜಿ ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಅಬೂಬಕ್ಕರ್ ಸಿದ್ದೀಕ್ ಕೊಡಿಯಮ್ಮೆ, ಹಾಜಿ ಮುಹಿಯ್ಯದ್ದೀನ್ ಫ್ಯಾನ್ಸಿ, ಅನ್ಸಾರ್ ಅಧ್ಯಕ್ಷ ಕೆ. ಬಿ. ಇಬ್ರಾಹಿಂ, ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಪದಾಧಿಕಾರಿಗಳಾದ ಶಾಫಿ ಕುತ್ತಾಮೊಟ್ಟೆ, ಎಸ್. ಪಿ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು ಮದ್ರಸ ಸದರ್ ಉಸ್ತಾದ್ ಸಿರಾಜುದ್ದೀನ್ ಸಖಾಫಿ ಸ್ವಾಗತಿಸಿ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading