ದುಗ್ಗಲಡ್ಕ : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾಲ್ಸೂರು ವಲಯ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಜಾಲ್ಸೂರು ವಲಯದ ವತಿಯಿಂದ ದುಗ್ಗಲಡ್ಕದ ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಡೆಸಲಾಯಿತು.

. . . . . . . . .

  ಕಾರ್ಯಕ್ರಮದ ಉದ್ಘಾಟನೆಯನ್ನು ಜಾಲ್ಸೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಭಾಸ್ಕರ್ ಅಡ್ಕಾರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾದ ಚಂದ್ರಶೇಖರ್ ಮೊಂಟಡ್ಕ ಮಾತನಾಡಿ “ದುಶ್ಚಟ ಮುಕ್ತ ಸಮಾಜ ಆಗಬೇಕೆಂದರು. ಮಕ್ಕಳ ಮನಸ್ಸನ್ನು ಹಸಿ ಮಣ್ಣಿನ ಗೋಡೆ ಇದ್ದಂತೆ. ಸ್ವಾಸ್ಥ್ಯದ ಬಗ್ಗೆ ಮಕ್ಕಳಿಗೆ ಈಗ ತಿಳಿಸಿದರೆ ಮುಂದಕ್ಕೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ. ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆ. ಆದರೆ ನಮ್ಮ ಅಳುಕು ಯಾರಲ್ಲಿ ಹೇಳುವುದು ಈ ಭಾಗದಲ್ಲಿ ಮಾದಕ ವಸ್ತು ಗಳಿಗೆ ಬಲಿಯಾದಷ್ಟು ವಿದ್ಯಾರ್ಥಿಗಳು ಮತ್ತು ಯುವಕರ ಸಂಖ್ಯೆ ಹೆಚ್ಚು. ಕಟ್ಟಡ ಕಟ್ಟಬೇಕಾದರೆ ಅಡಿಪಾಯ ಮುಖ್ಯ ಹಾಗೆಯೇ ಮುಂದಿನ ದಿನಗಳಲ್ಲಿ 

. . . . . . .

ಸತ್ ಪ್ರಜೆಯಾಗಬೇಕು . ಯಾವುದೇ ದುಶ್ಚಟವಿಲ್ಲದೆ ಬದುಕಬೇಕಾದರೆ ನಾವು ಪ್ರೌಢ ಶಾಲೆಯಲ್ಲಿ ಅಡಿಪಾಯವನ್ನು ಗಟ್ಟಿ ಮಾಡುವ ಈ ಕಾರ್ಯಕ್ರಮವೇ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ” ಎಂದರು. “ಕೌಟುಂಬಿಕ ಒತ್ತಡ ಒಂದು ಕಡೆಯಲ್ಲಿ ಆದರೆ ಸ್ನೇಹಿತರ ಒತ್ತಡದಿಂದ ಮನಸು ಚಂಚಲವಾಗುತ್ತದೆ. ಯಾವುದು ಒಳ್ಳೆಯದು ಯಾವುದು ಕೆಟ್ಟದು ಆಲೋಚನೆ ಮಾಡುವ ಮನಸು ಇರುವುದಿಲ್ಲ. ಯಾರು ಈ ಮಾದಕ ವ್ಯಸನಕ್ಕೆ ಬಲಿಯಾಗುತ್ತಾರೋ ಅವರಿಗೆ ಈ ಮೂರು ವಿಷಯ ಕಟ್ಟಿಟ್ಟ ಬುತ್ತಿ ಆತ್ಮಹತ್ಯೆ, ಅಪಘಾತ , ಆಕಾಲಿಕ ಮರಣ ಎಂದರು. ಆದ್ದರಿಂದ ಯಾರು ದಾರಿ ತಪ್ಪಾಬಾರದು ಒಳ್ಳೆಯ ಸಂಸ್ಕಾರವನ್ನು ಈ ಶಾಲೆಯ ಮೂಲಕ ಕಲಿತುಕೊಂಡು ಹೋಗೋಣ” ಎಂಬುದಾಗಿ ಹೇಳುತ್ತಾ “ಈ ಶಾಲೆಯ ಘನತೆ ಗೌರವ ಕೇಂದ್ರಬಿಂದು ವಿದ್ಯಾರ್ಥಿಗಳಲ್ಲಿ ಇದೇ ಎಂದು ನಾನು ಭಾವಿಸುತ್ತೇನೆ” ಎಂದರು. ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಭಾಸ್ಕರ್ ಅಡ್ಕಾರು ರವರು ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞೆಯನ್ನು ಮಾಡಿಸಿದರು. ವಲಯದ ಮೇಲ್ವಿಚಾರಕರು ಶ್ರೀಮತಿ ಜಯಶ್ರೀ ಮತ್ತು ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಸುರೇಶ್ ಕುಮಾರ್ ಅವರು ಎಲ್ಲರನ್ನು ಸ್ವಾಗತಿಸಿದರು ಶಿಕ್ಷಕರಾದ ಶೋಭಾ ರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಹರಿಪ್ರಸಾದ್ ರವರು ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading