ಎಲಿಮಲೆ : ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಸುಳ್ಯ ಇದರ ಸಹಯೋಗದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಸರಕಾರಿ ಪ್ರೌಢ ಶಾಲೆ ಎಲಿಮಲೆಯಲ್ಲಿ ನಡೆಸಲಾಯಿತು

. . . . . . . . .

ಕಾರ್ಯಕ್ರಮದ ಉದ್ಘಾಟನೆಯನ್ನು ವಲಯ ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ಇವರು ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

. . . . . . .

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಾಲಕೃಷ್ಣ ಬೊಳ್ಳೂರು ಇವರು “ವಿದ್ಯಾರ್ಥಿ ಜೀವನವು ಹಸಿ ಮಣ್ಣಿನ ಮಡಕೆಯಿದ್ದಂತೆ. ಈ ಸಮಯದಲ್ಲಿ ನಾವು ಬೆಳೆಸಿಕೊಳ್ಳುವ ಉತ್ತಮ ಹವ್ಯಾಸಗಳು ನಮ್ಮ ಇಡೀ ಜೀವನದ ದಾರಿಯನ್ನು ನಿರ್ಧರಿಸುತ್ತವೆ. ಆದರೆ ಇಂದು ಹಲವು ಯುವಕ-ಯುವತಿಯರು ಕ್ಷಣಿಕ ಸುಖ, ಆಕರ್ಷಣೆ ಅಥವಾ ಸ್ನೇಹಿತರ ಒತ್ತಡಕ್ಕೆ ಸಿಲುಕಿ ದುಶ್ಚಟಗಳ ದಾಸರಾಗುತ್ತಿದ್ದಾರೆ. ಆರೋಗ್ಯವೇ ಭಾಗ್ಯ. ಒಮ್ಮೆ ದುಶ್ಚಟಗಳಿಗೆ ಬಲಿಯಾದರೆ ವೈಯಕ್ತಿಕ ಜೀವನದ ಜೊತೆಗೆ ಕುಟುಂಬದ ನೆಮ್ಮದಿಯೂ ಹಾಳಾಗುತ್ತದೆ” ಎಂದರು. 

ಕಾರ್ಯಕ್ರಮದಲ್ಲಿ ಜನಜಾಗೃತಿ ತಾಲೂಕು ಸದಸ್ಯರಾದ ವಿಜಯಕುಮಾರ್ ಚಾರ್ಮತ, ಮಾವಿನಕಟ್ಟೆ ಒಕ್ಕೂಟ ಅಧ್ಯಕ್ಷರಾದ ಭಾನುಪ್ರಕಾಶ್, ಕಾರ್ಯದರ್ಶಿ ಶ್ರೀಮತಿ ಪ್ರಸನ್ನ ಭಾನುಪ್ರಕಾಶ್, ಪ್ರಭಾರ ಶಿಕ್ಷಕರಾದ ವಸಂತ, ಸೇವಾಪ್ರತಿನಿಧಿ ಶ್ರೀಮತಿ ಉಷಾಲತಾ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಪ್ರಸ್ತಾವಿಕ ಮಾತು ವಲಯ ಮೇಲ್ವಿಚಾರಕ ರಾಜೇಶ್ ಮಾತನಾಡಿದರು. ಶಿಕ್ಷಕಿ ಅಶ್ವಿನಿ ಸ್ವಾಗತಿಸಿ ಶಿಕ್ಷಕಿ ಗೀತಾ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading