ಕುಕ್ಕೆ ಸುಬ್ರಹ್ಮಣ್ಯ : “ಭಗವದ್ಗೀತೆಯ ಸಂದೇಶವು ಮನುಷ್ಯನ ಜೀವನಕ್ಕೆ ದಾರಿದೀಪವಾಗಿದೆ” : ಕೃಷ್ಣಾಷ್ಟಮಿಯ ಆಮಂತ್ರಣ ಬಿಡುಗಡೆಗೊಳಿಸಿ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹೇಳಿಕೆ

ಸುಬ್ರಹ್ಮಣ್ಯ : “ಭಗವದ್ಗೀತೆಯು ಜೀವನ ಮೌಲ್ಯಗಳ ಸಾರವನ್ನು ಹೊಂದಿದೆ. ಭಗವದ್ಗೀತೆಯ ಸಂದೇಶವು ಮನುಷ್ಯನ ಜೀವನಕ್ಕೆ ದಾರಿದೀಪವಾಗಿದೆ. ಗೀತೆಯನ್ನು ಓದಿ ಅರ್ಥೈಸಿಕೊಂಡು ಅವುಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳ ಆಚರಣೆಗಳು ಶಾಂತಿ, ಸೌಹಾರ್ದತೆ ಮತ್ತು ಭಕ್ತಿಭಾವದಿಂದ ನಡೆಯಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕಾನೂನು ಮತ್ತು ಶಿಸ್ತನ್ನು ಪಾಲಿಸುವ ಮೂಲಕ ಆಚರಣೆಯ ಘನತೆಯನ್ನು ಕಾಪಾಡಬೇಕು” ಎಂದು ಸುಬ್ರಹ್ಮಣ್ಯ ಠಾಣೆಯ ಆರಕ್ಷಕ ಉಪನಿರೀಕ್ಷಕ ಆಂಜನೇಯ ರೆಡ್ಡಿ ಹೇಳಿದರು. ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ(ರಿ.) ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸುಬ್ರಹ್ಮಣ್ಯದಲ್ಲಿ ನಡೆಯುವ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. “ಧಾರ್ಮಿಕ ಆಚರಣೆಗಳು ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅರಿತುಕೊಳ್ಳಬೇಕು” ಎಂದರು.

. . . . . . . . .

ಸಮಿತಿಯ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ, ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್, ಪೂರ್ವಾಧ್ಯಕ್ಷರಾದ ರಾಜೇಶ್ ಎನ್.ಎಸ್., ಡಾ. ರವಿ ಕಕ್ಕೆಪದವು, ಲೋಕೇಶ್ ಬಿ.ಎನ್, ಲೋಕೇಶ್ ಎನ್.ಎಸ್, ದೀಪಕ್ ನಂಬಿಯಾರ್, ಪ್ರಕಾಶ್ ಸುಬ್ರಹ್ಮಣ್ಯ, ನಿತೀನ್ ಭಟ್ ನೂಚಿಲ, ವೇಣುಗೋಪಾಲ್ ಎನ್.ಎಸ್, ಸಮಿತಿಯ ಉಪಾಧ್ಯಕ್ಷರಾದ ಭುವನೇಶ್ ಅಗೋಳಿಕಜೆ, ಮಹೇಶ್ ಗುಡ್ಡೆಮನೆ, ಕಾರ್ಯದರ್ಶಿ ಜಯರಾಮ್ ಹೆಚ್.ಎಲ್, ಸಹಕೋಶಾಧಿಕಾರಿ ಗಗನ್ ಅಗೋಳಿಕಜೆ, ಜತೆಕಾರ್ಯದರ್ಶಿ ಸುಹಾಸ್ ಎಚ್.ಎಸ್, ಟ್ರಸ್ಟ್ ಸದಸ್ಯರಾದ ದಿನೇಶ್ ಮೊಗ್ರ, ಉದಯ ಕುಮಾರ್ ನೂಚಿಲ ಉಪಸ್ಥಿತರಿದ್ದರು.

. . . . . . .

 ದೇವಳದಲ್ಲಿ ಪ್ರಾರ್ಥನೆ : ಆರಂಭದಲ್ಲಿ ಕಾಶಿಕಟ್ಟೆ ಶ್ರೀ ಮಹಾಗಣಪತಿ ಆಮಂತ್ರಣ ಪತ್ರಿಕೆಯನ್ನು ಅರ್ಪಿಸಲಾಯಿತು.ದೇವಳದ ಅರ್ಚಕ ಶ್ರೀನಿವಾಸ್ ಭಟ್ ನೂಚಿಲ ಅವರು ಶ್ರೀ ದೇವರಿಗೆ ಪೂಜೆ ನೆರವೇರಿಸಿ ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.ನಂತರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ತೆರಳಿ ಆಮಂತ್ರಣ ಪತ್ರಿಕೆಯನ್ನು ದೇವರಿಗೆ ಸಮರ್ಪಿಸಲಾಯಿತು. ಕುಕ್ಕೆ ದೇವಳದ ಅರ್ಚಕ ರಮೇಶ್ ನೂರಿತ್ತಾಯರು ದೇವರಲ್ಲಿ ಪ್ರಾರ್ಥಿಸಿ ಪ್ರಸಾದ ನೀಡಿ ಹರಸಿದರು.ಈ ಸಂದರ್ಭ ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading