ಅರೆಭಾಷೆ ಕವನ : ಬೊದ್ಕ್‌ನ ಬೇರ್ ಈ ನಮ್ಮ ಹಳ್ಳಿ…

ನಮ್ಮ ಬೊದ್ಕ್‌ನ ಬೇರ್ ಈ ನಮ್ಮ ಹಳ್ಳಿ, ಇದರ ಬುಟ್ಟು ಎಂತಕೆ ಪೇಟೆ-ಗೀಟೆ ಹುಡ್ಕ್ಯಂಡ್ ದೂರ ಹೋದರೆ ನೀವು ಹೇಳಿ, ಇಲ್ಲಿ ಇಲ್ಲಾದ್ ಅಲ್ಲಿ ಎಂತ ಉಟ್ಟು ಒಮ್ಮೆ ನೀವು ಹೇಳಿ, ಇಂದ್ ನೀವು ಹೊರ್ಟು ನಿತ್ತಿರುವ ಆ ಪೇಟೆ ಬೊದ್ಕ್‌ನ ಮೂಲನೇ ಈ ನಮ್ಮ ಹಳ್ಳಿ…
ಅವರ ಬೊದ್ಕ್‌ಲಿ ಅದೆಷ್ಟೇ ಬೇನೆಗ ಇದ್ದರೂ ನಮ್ಮ ಬೊದ್ಕ್‌ಗೆ ಬರೇ ಖುಷಿನ ಮಾತ್ರ ಕೊಟ್ಟ ಅಪ್ಪ-ಅಮ್ಮನ ಪ್ರೀತಿನ ಮರ್ತ್ ದೂರ ಹೋದರೆನಾ ನೀವು, ಅವರ ಬೊದ್ಕ್ ಪೂರಾ ನಿಮ್ಮ ಬೊದ್ಕ್‌ಗೆನೇ ಬೊದ್ಕಿದ ಅವರ ಬೊದ್ಕ್‌ನ ಬುಟ್ಟು ಪೇಟೆ ಸೇರ್ರೆನಾ ನೀವು…
ಕಾಂಗ್ರೇಟ್ ಕಾಡ್‌ನಾಂಗೆ ಇರುವ ಆ ಪೇಟೆಲಿ ನೀವುಗೆ ನಮ್ಮ ಹಳ್ಳಿ ಮೊಣ್ಣುನ ಪರ್ಮಳ ಎಲ್ಲಿ ಸಿಕ್ಕಿದೆ, ಕಣಿಲಿ ಹೋವ ಆ ನೀರ್‌ನ ಸೊಬ್ದ-ಆಕಾಸಲಿ ಹಾರುವ ಆ ಹಕ್ಕಿಗಳ ಕೂಂಗು ನೀವ್‌ಗೆ ಅಲ್ಲಿ ಎಲ್ಲಿ ಕೇಳ್ಸಿದೆ…
ಆಚೆಮನೆ ದೊಡ್ಡಪ್ಪ-ಈಚೆಮನೆ ಚಿಕ್ಕಪ್ಪ, ಮೇಲೆಮನೆ ಮಾವ-ಕೆಳಗೆಮನೆ ಅಣ್ಣ ಅವರ ಪೂರಾ ಪ್ರೀತಿ ಆ ಪೇಟೆಲಿ ನೀವ್‌ಗೆ ಎಲ್ಲಿ ಸಿಕ್ಕಿದೆ, ಬೆಳ್‌ಗೆಂದ ಹಿಂಬೊತುಮುಟ್ಟ ಬರೇ ಕೆಲ್ಸದ ತಲೆಬೇನೆ, ಗಾಡಿಗಳ ಹೊಗೆನ ಗಾಳಿ ಬುಟ್ರೆ ಅಲ್ಲಿ ಬೇರೆಂತ ಸಿಕ್ಕಿದೆ…
ಹಂಗೇತ ಪೇಟೆಗೆ ಹೋಕೆಬೊತ್ತ್ಂತ ಅಲ್ಲ, ಪೇಟೆನೂ ಲಕ್ಷಗಟ್ಲೆ ಜನಕ್ಕೆ ಬೊದ್ಕ್‌ನ ಕಟ್ಟಿಕೊಟ್ಟುಲ, ಆ ಪೇಟೆನೂ ಕೂಡ ದಿನೋಳು ಕೋಟಿಗಟ್ಲೆ ಜನಂಗಳ ಹೊಟ್ಟೆ ತುಂಬುಸ್ತಾ ಉಟ್ಟಲ, ಪೇಟೆಗೆ ಪೇಟೆನೇ ಸಾಟಿಂತೇಳ್ದು ಸುಳ್ಳಲ್ಲ, ಇಲ್ಲಿ ಯಾವ್ದೂ ಮೇಲಲ್ಲ-ಯಾವ್ದೂ ಕೀಳಲ್ಲ…
ಆದರೆ ಹಳ್ಳಿಲಿ ಹುಟ್ಟಿ ಬೆಳ್ದ ಹಳ್ಳಿ ಮೊಣ್ಣುನ ಮಕ್ಕ ನಾವು ನಮ್ಮ ಹಳ್ಳಿನನೇ ಬುಟ್ಟು ಇಂದ್ ದೂರ ಹೋದು ಎಷ್ಟ್ ಸರಿ ನೀವು ಹೇಳಿ, ನಾವ್ಗೆ ಬೊದ್ಕ್ ಕೊಟ್ಟು, ನಮ್ಮ ಬೊದ್ಕ್‌ನ ದಾರಿಗೆ ಬೆಳ್ಕ್ ಕೊಟ್ಟ ಆ ಅಪ್ಪ-ಅಮ್ಮನ ಬುಟ್ಟು ದೂರ ಹೋದು ಅದೆಷ್ಟ್ ಸರಿ ನೀವೇ ಹೇಳಿ… – ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading