ಗಾಣಿಗ ಸಮಾಜದ ವತಿಯಿಂದ ಆಟಿ ಸಮುದಾಯ ಸಂಗಮ

ಸುಳ್ಯ: ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ఆజి ಆಷಾಡ ತಿಂಗಳ ವಿಶೇಷ ಸಮುದಾಯ ಸಂಗಮ ಕಾರ್ಯಕ್ರಮವು ಆದಿತ್ಯವಾರ ಯುವಜನ ಸಂಯುಕ್ತ ಮಂಡಳಿ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಕರ್ಲಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸುಬ್ಬನ್ ಚೆಟ್ಟಿಯಾರ್ ಕಲ್ಮಡ್ಕ ನೆರವೇರಿಸಿ ಶುಭ ಹಾರೈಸಿದರು.
ಆಟಿ ಅರಿವು ಕುರಿತ ಉಪನ್ಯಾಸವನ್ನು ಉಪನ್ಯಾಸಕ ನಾರಾಯಣ ಪಾಟಾಳಿ ತೋರಣಗಂಡಿ ನೀಡಿದರು ಸಭಾ ವೇದಿಕೆಯಲ್ಲಿ ನಿವೃತ್ತ ಉಪ ತಹಶೀಲ್ದಾರ್ ಮಹಾಲಿಂಗ ದೇರೆಬೈಲು, ನಿವೃತ್ತ ಪ್ರಾಂಶುಪಾಲ ಅಪ್ಪು ಪಾಟಾಳಿ ಜಯನಗರ, ಶಂಕರ ಮಾಸ್ತರ್ ಮುಕ್ರಂಪಾಡಿ, ಚಂದ ಕುಡೆಕಲ್ಲು ಇದೇ ಸಂಧರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದ ಬಿ ಸುಶ್ಮಿತ ಅಂಜೇರಿ ,ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಹನ್ನೊಂದನೇ ಸ್ಥಾನವನ್ನು ಪಡೆದ ಶರಣ್ಯ ಪಿ.ಜಿ ಕನಕಮಜಲು ಹಾಗೂ ಬಿಎಸ್ಸಿ ವಿಷಯದಲ್ಲಿ ವಿಶ್ವವಿದ್ಯಾಲಯಕ್ಕೆ ಎಂಟನೇ ಸ್ಥಾನವನ್ನು ಪಡೆದ ರಕ್ಷಿತಾ ಕೆ ಕಲ್ಚಾರು ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಸಚಿತ್ ಕಲ್ಮಡ್ಕ ಹಾಗೂ ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿ ಗೋಪಾಲಕೃಷ್ಣ ಮೊರಂಗಲ್ಲು ವಂದಿಸಿದರು.
ಆಟಿ ಮಾಸದ ತಿನಿಸುಗಳ ಸಹ ಭೋಜನ : ಸಮುದಾಯ ಸಂಗಮದಲ್ಲಿ ವಿಶೇಷವಾಗಿ ಪ್ರಕೃತಿಯ ಮಡಿಲಿನಲ್ಲಿ ಹಳೆಯ ಸಂಪ್ರದಾಯ ಪದ್ದತಿಗಳ ಆಟಿ ತಿಂಗಳ ಸುಮಾರು 40ಕ್ಕು ಹೆಚ್ಚಿನ ಖಾದ್ಯಗಳನ್ನು ನೆರೆದವರಿಗೆ ಉಣ ಬಡಿಸಲಾಯಿತು.ಅಲ್ಲದೇ ಸಂಪ್ರಾದಾಯಿಕ ಆಟಿ ಕಳಂಜವನ್ನು ಸಭಾಂಗಣಕ್ಕೆ ಕರೆತಂದು ಸಭಿಕರ ಮುಂಭಾಗದಲ್ಲಿ ನರ್ತನದ ಮೂಲಕ ಮಕ್ಕಳಿಗೆ ನಾಡಿನ ಸಂಪ್ರದಾಯವನ್ನು ತಿಳಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading