ಸುಳ್ಯ: ಎಸ್.ಐ.ಆರ್. (SIR) ಪರಿಶೀಲನೆ – 11,845 ಮತದಾರರಿಗೆ ಶಾಕ್

ಸುಳ್ಯ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision–2026) ಪ್ರಕ್ರಿಯೆಯಲ್ಲಿ 207-ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11,845 ಮತದಾರರನ್ನು ASDDO ವರ್ಗಕ್ಕೆ ಗುರುತಿಸಲಾಗಿದೆ. ಇದು ಕ್ಷೇತ್ರದ ಒಟ್ಟು ಮತದಾರರ ಶೇ.5.68ರಷ್ಟಾಗಿದೆ.

. . . . . . . . .

ಆ.10ರಂದು ಸಂಜೆ 4 ಗಂಟೆಯವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಇನ್ಯುಮುರೇಶನ್ ಫಾರ್ಮ್ ವಿತರಿಸಿ, ಸ್ವೀಕರಿಸಿದ ಅರ್ಜಿಗಳ ಡಿಜಿಟಲೀಕರಣ ಹಾಗೂ ಪರಿಶೀಲನಾ ಕಾರ್ಯವನ್ನು ನಡೆಸಿದ್ದಾರೆ. ಚುನಾವಣಾ ಆಯೋಗದ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಮತದಾರರ ವಿವರಗಳನ್ನು ಪರಿಶೀಲಿಸಿ, ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ/ದ್ವಿಪ್ರತಿ ದಾಖಲೆಗಳನ್ನು ಗುರುತಿಸುವ ಉದ್ದೇಶ ಹೊಂದಿದೆ.

. . . . . . .

207-ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,08,487 ಮತದಾರರಿದ್ದು, ಅಷ್ಟೂ ಮತದಾರರಿಗೆ ಇನ್ಯುಮುರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. ಈ ಪೈಕಿ 1,96,642 ಎಸ್ ಇನ್ಯುಮುರೇಶನ್ ಫಾರ್ಮ್ ಗಳು (ಶೇ.94.32) ಡಿಜಿಟಲೀಕರಣಗೊಂಡಿವೆ.

ಡಿಜಿಟಲೀಕರಣಗೊಂಡ ಹಾಗೂ ಪರಿಶೀಲನೆಯ ಸಂದರ್ಭದಲ್ಲಿ ಒಟ್ಟು 11,845 ಮತದಾರರನ್ನು ASDD ವರ್ಗದಲ್ಲಿ ಗುರುತಿಸಲಾಗಿದೆ. ಅದರಲ್ಲಿ ಗೈರು 379 (ಶೇ.0.18) ಶಾಶ್ವತವಾಗಿ ವಲಸೆ ಹೋದವರು 6,011 (ಶೇ.2.88), ಮರಣ ಹೊಂದಿರುವವರು 4,239 ( ಶೇ.2.03), ದ್ವಿಪ್ರತಿ ನೋಂದಣಿ 1,191( ಶೇ.0.57%) ಇತರರು 24 (ಶೇ.0.01) ಮಂದಿ ಇದ್ದಾರೆ

ಒಟ್ಟಾರೆ 11,845 ಮತದಾರರು (ಶೇ.5.68) ಎಎಸ್ ಡಿ ಡಿ ಓ ( ASDDO) ವರ್ಗಕ್ಕೆ ಸೇರ್ಪಡೆಯಾಗಿದ್ದಾರೆ.

ASDD ಪಟ್ಟಿಗೆ ಹೆಸರು ಸೇರ್ಪಡೆಯಾಗಿರುವುದು ಅಂತಿಮವಾಗಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ ಎಂಬ ಅರ್ಥವಲ್ಲ. ಹೆಸರು ತಪ್ಪಾಗಿ ಗೈರು, ವಲಸೆ, ಮರಣ ಅಥವಾ ದ್ವಿಪ್ರತಿ ಎಂದು ಗುರುತಾಗಿದ್ದರೆ ಸಂಬಂಧಪಟ್ಟ ಮತದಾರರು ಚುನಾವಣಾ ಅಧಿಕಾರಿಗಳು ಹಾಗೂ ಬಿ ಎಲ್ ಓ (BLO) ಗಳ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವ ಅವಕಾಶವಿದೆ. ಎಸ್ ಐ ಆರ್ ಪ್ರಕ್ರಿಯೆಯ ಉದ್ದೇಶ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಉಳಿಸುವುದೂ ಆಗಿದೆ.

ಕರ್ನಾಟಕದಲ್ಲಿ ಎಸ್ ಐ ಆರ್ ಇನ್ಯುಮುರೇಶನ್ (SIR Enumeration) ಹಂತದ ಗಡುವನ್ನು ಆಗಸ್ಟ್ 8ರವರೆಗೆ ವಿಸ್ತರಿಸಲಾಗಿತ್ತು. ಮುಂದಿನ ಹಂತದಲ್ಲಿ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆ ಮತ್ತು ತಿದ್ದುಪಡಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading