ಮಂಡೆಕೋಲು : ಯಾದವ ಯುವ ವೇದಿಕೆ ರಚನೆ – ಅಧ್ಯಕ್ಷ ಮಿಥುನ್, ಪ್ರಧಾನ ಕಾರ್ಯದರ್ಶಿ ಅಶ್ವಧಿ, ಕೋಶಾಧಿಕಾರಿ ಪ್ರಣವ್, ಉಪಾಧ್ಯಕ್ಷೆ  ಹಿತಾಶ್ರೀಜೊತೆ ಕಾರ್ಯದರ್ಶಿ ಪ್ರಜೀಶ್

  ಯಾದವ ಸಭಾ ಪ್ರಾದೇಶಿಕ ಸಮಿತಿ ಮಂಡೆಕೋಲು ವತಿಯಿಂದ ಯಾದವ ಯುವ ವೇದಿಕೆ ರಚನಾ ಸಭೆ ಮಂಡೆಕೋಲಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಯುವ ವೇದಿಕೆಯ  ಅಧ್ಯಕ್ಷೆ ಸಾವಿತ್ರಿ ಕಣೆಮರಡ್ಕ ವಹಿಸಿದ್ದರು.
ಸಭೆಯಲ್ಲಿ ಮಂಡೆಕೋಲು ಯಾದವ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ  ಅಕ್ಕಪ್ಪಾಡಿ, ಸುಳ್ಯ ತಾಲೂಕು ಯಾದವ ಸಮಿತಿಯ ಅಧ್ಯಕ್ಷ ಕರುಣಾಕರ ಹಾಸ್ಪಾರೆ , ತಾಲೂಕು ಯುವ ವೇದಿಕೆಯ ಪೂರ್ವಾಧ್ಯಕ್ಷ ಸುರೇಶ್ ಕಣೆಮರಡ್ಕ, ತಾಲೂಕು ಯಾದವ ಸಭೆಯ ಉಪಾಧ್ಯಕ್ಷ ಪ್ರಕಾಶ್ ಕಣೆಮರಡ್ಕ, ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಗಂಗಾಧರ ಮಾವಂಜಿ ಹಾಗೂ ಕೋಶಾಧಿಕಾರಿ ಸೀತಾರಾಮ ಕಣೆಮರಡ್ಕ ಉಪಸ್ಥಿತರಿದ್ದರು.
ತಾಲೂಕು ಯುವ ವೇದಿಕೆಯ ಕಾರ್ಯದರ್ಶಿ ಪ್ರಣೀತ್ ನಿರೂಪಿಸಿದರು. ಅಧ್ಯಕ್ಷೆ ಸಾವಿತ್ರಿ ಕಣೆಮರಡ್ಕ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕರುಣಾಕರ ಹಾಸ್ಪಾರೆ ಅವರು ಯುವ ಸಮುದಾಯವನ್ನು ಸಂಘಟಿಸಿ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಯಾದವ ಸಮುದಾಯದ ಅಭಿವೃದ್ಧಿಗೆ ನೂತನ ವೇದಿಕೆ ಶ್ರಮಿಸಲಿದೆ ಎಂದರಲ್ಲದೆ ಯುವ ವೇದಿಕೆಯ ನಿಯಮಾವಳಿಗಳನ್ನು ವಿವರಿಸಿದರು. ಸುರೇಶ್ ಕಣೆಮರಡ್ಕ ವಂದಿಸಿದರು.
ಸಭೆಯಲ್ಲಿ ಮಂಡೆಕೋಲು ಯಾದವ ಯುವ ವೇದಿಕೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮಿಥುನ್ ಕಣೆಮರಡ್ಕ, ಕಾರ್ಯದರ್ಶಿಯಾಗಿ ಅಶ್ವಧಿ ಶಿವಾಜಿನಗರ, ಕೋಶಾಧಿಕಾರಿಯಾಗಿ ಪ್ರಣವ್ ಕಣೆಮರಡ್ಕ, ಉಪಾಧ್ಯಕ್ಷರಾಗಿ ಹಿತಾಶ್ರೀ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪ್ರಜೀಶ್ ಆಯ್ಕೆಯಾದರು.
ಇದರೊಂದಿಗೆ ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಅಭಿಷೇಕ್ ಕಣೆಮರಡ್ಕ ಮತ್ತು ವಿಶಾಲಾಕ್ಷಿ ಪ್ರಮೋದ್, ಕ್ರೀಡಾ ಸಂಚಾಲಕರಾಗಿ ಸುದೀಶ್ ಶಿವಾಜಿನಗರ ಮತ್ತು ರಂಜಿತ್ ಮಾವಂಜಿ ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಸುದೀಶ್ ಕಣೆಮರಡ್ಕ ಮತ್ತು ಬ್ರಿಗಿದಾ ಶಿವಾಜಿನಗರ ಅವರನ್ನು ಆಯ್ಕೆ ಮಾಡಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading