ಶೇಣಿ : ಅಮರಪಡ್ನೂರು ಗ್ರಾಮದ ಶೇಣಿ ಅಂಗನವಾಡಿ ಬಳಿಯಿದ್ದ ಅಪಾಯಕಾರಿ ಮರ ತೆರವು – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ತುರ್ತು ಸ್ಪಂದನೆ

ಅಮರ ಪಡ್ನೂರು ಗ್ರಾಮದ ಶೇಣಿ ಅಂಗನವಾಡಿ ಬಳಿಯಲ್ಲಿದ್ದ ಅಪಾಯಕಾರಿ ಮಾವಿನ ಮರವು ಮುರಿದು ಬೀಳುವ ಹಂತದಲ್ಲಿದ್ದು ಮುರಿದು ಬೀಳುತ್ತಿದ್ದರೆ ವಿದ್ಯುತ್ ಲೈನ್ ಗೆ ಬಿದ್ದು ಸುಮಾರು 20 ವಿದ್ಯುತ್ ಕಂಬಗಳು ಮುರಿದು ಬೀಳುವ ಸಂಭವವಿದ್ದ ಕಾರಣ ಸ್ಥಳೀಯ ಶ್ರೀ ಕೃಷ್ಣ ಸೇವಾ ಸಮಿತಿಯ ಪದಾಧಿಕಾರಿಗಳು ಬ್ಲಾಕ್ ಕಾಂಗ್ರೆಸ್ ರಾಧಾಕೃಷ್ಣ ಬೊಳ್ಳೂರುರವರಿಗೆ ತಿಳಿಸಿದ್ದರು. ಕೂಡಲೇ ಸ್ಪಂಧಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮೆಸ್ಕಾಂ ಅಧಿಕಾರಿಗಳಿಗೆ ಮತ್ತು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿ ಅಪಾಯಕಾರಿ ಮರ ತೆರವುಗೊಳಿಸಲು ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading