ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಗಿರೀಶ್ ಭಾರದ್ವಾಜ್‌ರಿಗೆ ನುಡಿನಮನ; ರಕ್ಷಾ ಬಂಧನ ಮತ್ತು ಆಟಿ ಕವಿಗೋಷ್ಠಿ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಇತ್ತೀಚೆಗೆ ನಿಧನರಾದ ತೂಗುಸೇತುವೆಗಳ ಸರದಾರ,ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರಿಗೆ ನುಡಿನಮನ ಹಾಗೂ ರಕ್ಷಾ ಬಂಧನ ಮತ್ತು ಆಟಿ ಕವಿಗೋಷ್ಠಿ  ಆ. 9ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಿತು.

. . . . . . . . .

ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಸಾನು ಉಬರಡ್ಕ ಅಧ್ಯಕ್ಷತೆ ವಹಿಸಿದ್ದರು. ಉಬರಡ್ಕದ ಅನಂತೇಶ್ವರ ಭಟ್ ಮತ್ತು ಪಂಚವಲ್ಲಿ ತೈಲ ಕಂಪೆನಿಯ ಮಾಲಕ ಈಶ್ವರ್ ಕುಮಾರ್ ಭಟ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ‌ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿ ಎಲ್ಲರಲ್ಲೂ ಒಳಿತನ್ನು ಕಂಡ ಧೀಮಂತ ವ್ಯಕ್ತಿ ಗಿರೀಶಣ್ಣನವರು, ಕಷ್ಟಪಟ್ಟು ನಷ್ಟದಿಂದ ಇಷ್ಟಪಟ್ಟು ನಾಗರಿಕರಿಗೆ ಬಹು ಉಪಕಾರಿಯಾದ ತೂಗುಸೇತುವೆಗಳನ್ನು ಭಾರದ್ವಾಜ್‌ರವರು ನಿರ್ಮಿಸಿದರು. ದೇಶದ ಹಲವು ಕಡೆಗಳಲ್ಲಿ ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಗಳು ಇವರ ತೂಗುಸೇತುವೆಗಳಿಂದ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಇವರಿಗೆ ಸಂದಿರುವ‌ ಪದ್ಮಶ್ರೀ ಪ್ರಶಸ್ತಿ ಸುಳ್ಯಕ್ಕೊಂದು ಮಹಾ ಹೆಮ್ಮೆ ಎಂದರು.

. . . . . . .

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸುಳ್ಯ ಶಾಖೆಯ ಉಮಾಕುಮಾರಿಯವರು ರಕ್ಷಾ ಬಂಧನ ಕಾರ್ಯಕ್ರಮ ನಡೆಸಿಕೊಟ್ಟು ಮಾತನಾಡಿದರು. ಪರಮಾತ್ಮನ ಸ್ಮರಣೆ ಮಾಡಬೇಕು. ಆ ನಂತರ ಸ್ವಾರ್ಥ ಚಿಂತನೆಗಳಿಂದ ದೂರವಾಗಿ ಬಾಳು ಮುನ್ನಡೆಸಬೇಕು ಎಂದರು.

ನಂತರ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಸಾನು ಉಬರಡ್ಕ ಅಧ್ಯಕ್ಷತೆಯಲ್ಲಿ ಆಟಿ ಕವಿಗೋಷ್ಠಿ-2026 ಜರುಗಿತು. ಎಂ.ಎ. ಮುಸ್ತಫಾ ಬೆಳ್ಳಾರೆ, ಹಸ್ತ ಕೆ.ಆರ್., ಹಸ್ತ ಕೆ.ವೈ., ಮೇಘ ಹೆಚ್.ಕೆ., ಕುಮುದಾ ಯು., ಹಿತೈಶಿ ಕೆ., ಸಾಧನಾ ಕೆ.ಎಸ್., ತೇಜಸ್ವಿನಿ ಕೆ., ಸಂಗೀತಾ ಸಿ.ವಿ. ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಎಲಿಮಲೆಯ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಸಂಗೀತಾ ಸಿ.ವಿ. ಸ್ವಾಗತಿಸಿ, ವಂದಿಸಿದರು.
ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading