ಬಳ್ಪ ಮತ್ತು ಏನೇಕಲ್ಲು ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪಂಜ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಳ್ಪ ಮತ್ತು ಏನೆಕಲ್ಲು ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಆ. 9ರಂದು ನಡೆಯಿತು.

. . . . . . . . .

ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷ ಲಕ್ಷ್ಮಣ ಗೌಡ ಸಂಕಡ್ಕ ಇವರ ಅಧ್ಯಕ್ಷತೆಯಲ್ಲಿ ಶ್ರೀ ಆದಿಶಕ್ತಿ ಭಜನಾ ಮಂದಿರ ಏನೆಕಲ್ಲು ಇಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಅಶೋಕ್ ನೆಕ್ರಾಜೆ ವ್ಯವಸ್ಥಾಪನ ಸಮಿತಿ ಸದಸ್ಯರು ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ ಸುಬ್ರಮಣ್ಯ, ದೀಪ ಪ್ರಜ್ವಲಿಸಿ ಶುಭಕೋರಿದರು. ಧಾರ್ಮಿಕ ಉಪನ್ಯಾಸಕಾರದ ವೇದಮೂರ್ತಿ ಶ್ರೀ ಕೃಷ್ಣ ಜೋಯಿಸರು ಬೂದಿಪಳ್ಳ ಇವರು ಧಾರ್ಮಿಕತೆಯ ಬಗ್ಗೆ ಉಪನ್ಯಾಸ ಮಾಡಿದರು.
ಈ ಸಮಾರಂಭದಲ್ಲಿ ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡರವರು ನೆರವೇರಿಸಿ ಮಾತನಾಡಿದರು. ಇಂದು ನಾವು ಸಂಭ್ರಮಿಸುತ್ತಿರುವ ಈ ಪದಗ್ರಹಣ ಸಮಾರಂಭದ ಹಿಂದಿರುವ ಆಶಯ ಮತ್ತು ಶಕ್ತಿ ನಿಜಕ್ಕೂ ಅಪಾರವಾದದು. ಪರಮಾಪೂಜ್ಯ ಡಾ | ಡಿ. ವೀರೇಂದ್ರ ಹೆಗ್ಗಡೆಯವರಿಂದ ಆರಂಭವಾದ ಈ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ಕೋಟ್ಯಂತರ ಗ್ರಾಮೀಣ ಕುಟುಂಬಗಳ ಬದುಕಿಗೆ ಬೆಳಕಾಗಿದೆ. ಪ್ರಗತಿ ಬಂಧು ಎಂಬುದು ಶ್ರಮದಾನ ಮತ್ತು ಪರಸ್ಪರ ಸಹಕಾರದ ಮೂಲಕ ಕೃಷಿಕರ ಶ್ರಮವನ್ನು ಹಸನುಗೊಳಿಸಿದ ಅಪೂರ್ವ ಮಾದರಿಯಾಗಿದೆ. ಸಣ್ಣ ಉಳಿತಾಯದಿಂದ ತೊಡಗಿ ಇಂದಿನ ಜ್ಞಾನ ವಿಕಾಸದವರೆಗೆ ಗ್ರಾಮೀಣ ಮಹಿಳೆಯಾರಿಗೆ ಆತ್ಮವಿಶ್ವಾಸ ಹಾಗೂ ಆರ್ಥಿಕ ಭದ್ರತೆಯನ್ನು ನೀಡಿದೆ. ಗ್ರಾಮ ಮಟ್ಟದ ಸ್ವಸಹಾಯ ಸಂಘಗಳು ಒಕ್ಕೂಟಗಳಾಗಿ ರೂಪುಗೊಂಡು ಇಂದು ನಾಯಕತ್ವ ಬೆಳೆಸುವ ದೊಡ್ಡ ವೇದಿಕೆಯಾಗಿ ರೂಪುಗೊಂಡಿದೆ. ಇಂತಹ ಪವಿತ್ರ ಸಂಸ್ಥೆಯಲ್ಲಿ ಸೇವೆಯನ್ನು ಒಕ್ಕೂಟದ ಪದಾಧಿಕಾರಿಗಳು ಜವಾಬ್ದಾರಿಯುತ್ತವಾಗಿ ಮುಂದುವರಿಸಿ ಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು ಮತ್ತು ತಮ್ಮ ಮಕ್ಕಳನ್ನು ಸಂಸ್ಕಾರ ಯುತರನ್ನಾಗಿ ಮಾಡಿ ಎಂದು ತಿಳಿಸಿದರು..
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭರತ್ ನೆಕ್ರಾಜೆ ನಿರ್ದೇಶಕರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇವರು ಮಾತಾಡಿ ಸರಕಾರ ಮಾಡದಂತ ಕೆಲಸಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ತಿಳಿಸಿದರು. ಯೋಜನೆ ಇನ್ನಷ್ಟು ಶಕ್ತಿಯುತವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.. ಕಾರ್ಯಕ್ರಮದಲ್ಲಿ ಇನ್ನೊರ್ವ ಮುಖ್ಯ ಅತಿಥಿ ಸುಬ್ರಮಣ್ಯ ಕುಳ, ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪಂಜ ಇವರು ಮಾತಾಡಿ ಪೂಜ್ಯರ ದೂರದೃಷ್ಟಿಯ ಕಾರ್ಯಕ್ರಮಗಳು ಇಂದು ರಾಜ್ಯದೆಲ್ಲೆಡೆ ಉತ್ತಮವಾದ ಬದಲಾವಣೆಯಾಗುತ್ತಿದೆ ಎಂದು ತಿಳಿಸಿದರು. ಶಿವಪ್ರಸಾದ್ ಮಾದನ ಮನೆ ಸದಸ್ಯರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಇವರು ಮಾತಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕೆಲಸ ಕಾರ್ಯಗಳು ಉತ್ತಮವಾಗಿ ಮೂಡಿಬರುತ್ತದೆ ಆದ್ದರಿಂದ ಸದಸ್ಯರುಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪಂಜ ವಲಯದ ವಲಯ ಅಧ್ಯಕ್ಷರಾದ ಮೋನಪ್ಪ ಗೌಡ ಬೊಳ್ಳಾಜೆ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪಂಜ ವಲಯ ಇದರ ವಲಯ ಅಧ್ಯಕ್ಷರಾದ ಪ್ರಕಾಶ್ ನರಿಯಂಗ, ಏನೇಕಲ್ಲು ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಮನೆ, ಬಳ್ಪ ಎ ಒಕ್ಕೂಟದ ಅಧ್ಯಕ್ಷರಾದ ಚಂದ್ರಕಾಂತ್ ಮಾತಾವು, ಬಳ್ಪ ಬಿ ಒಕ್ಕೂಟದ ಅಧ್ಯಕ್ಷರಾದ ಜಗನ್ನಾಥ ಪಲ್ಲತಡ್ಕ, ಎಣ್ಣೆಮಜಲು ಒಕ್ಕೂಟದ ಅಧ್ಯಕ್ಷರಾದ ಶೈಲಜಾ ಉಪಸ್ಥಿತರಿದ್ದರು.

. . . . . . .

ವಲಯದ ಮೇಲ್ವಿಚಾರಕರಾದ ಮಮತಾ ರವರು ವಲಯದ ಸಾಧನೆಯ ವರದಿ ಮಂಡನೆ ಮಾಡಿದರು. ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮತ್ತು ನೂತನ ಒಕ್ಕೂಟದ ಕಾರ್ಯದರ್ಶಿಗಳಿಗೆ ದಾಖಲಾತಿ ಹಸ್ತಾಂತರ ಮಾಡಲಾಯಿತು. ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರನ್ನು ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟಗಳ ನಿಕಟ ಪೂರ್ವ ಪದಾಧಿಕಾರಿಗಳು, ನೂತನ ಪದಾಧಿಕಾರಿಗಳು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಎಲ್ಲಾ ಸದಸ್ಯರುಗಳು, ನವಜೀವನ ಸಮಿತಿಯ ಸದಸ್ಯರುಗಳು, ಯೋಜನೆಯ ಎಲ್ಲಾ ಹಿತೈಷಿ ಬಂಧುಗಳು ಭಾಗವಹಿಸಿದರು.

ಮೋಹಿತ್ ಜೇನುಕೋಡಿ ನಿರೂಪಿಸಿ, ಯಮುನಾ ಸ್ವಾಗತಿಸಿ, ಏನೆಕಲ್ಲು ಸೇವಾಪ್ರತಿನಿಧಿ ತಾರಾ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading