ಕುಕ್ಕೆ ಸುಬ್ರಹ್ಮಣ್ಯ : 56ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ; ಸೆ.14ರಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸುಬ್ರಹ್ಮಣ್ಯ: ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ.), ಸುಬ್ರಹ್ಮಣ್ಯ ವತಿಯಿಂದ 56ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಸೆ.14ರಿಂದ 20ರವರೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಳದ ರಥಬೀದಿಯಲ್ಲಿರುವ ಸಭಾಂಗಣದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು.

. . . . . . . . .

ಉತ್ಸವದ ಅಂಗವಾಗಿ 108 ತೆಂಗಿನಕಾಯಿ ಗಣಪತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕಾಶಿಕಟ್ಟೆ ಮಹಾಗಣಪತಿ ದೇವಸ್ಥಾನದಲ್ಲಿ 56ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

. . . . . . .

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಶರ್ಮ, ಕಾರ್ಯದರ್ಶಿ ರತ್ನಾಕರ ಎಸ್, ಸಂಚಾಲಕರಾದ ಎ.ವೆಂಕಟ್ರಾಜ್, ಕೆ.ಯಜ್ಞೇಶ್ ಆಚಾರ್, ರಾಜೇಶ್ ಎನ್.ಎಸ್, ಕೋಶಾಧಿಕಾರಿ ದಿನೇಶ್ ಮೊಗ್ರ, ಉಪಾಧ್ಯಕ್ಷರಾದ ಸುಹಾಸ್ ಎಚ್.ಎಸ್, ಆದರ್ಶ ಕೆ.ಆರ್, ಗಿರಿಧರ ಸ್ಕಂಧ, ಪೂರ್ವಾಧ್ಯಕ್ಷರಾದ ಉಮೇಶ್ ಕೆ.ಎನ್, ಲೋಕೇಶ್ ಬಿ.ಎನ್, ರವಿ ಕಕ್ಕೆಪದವು, ದೀಪಕ್ ನಂಬಿಯಾರ್, ವೆಂಕಟೇಶ್ ಎಚ್.ಎಲ್, ಪದಾಧಿಕಾರಿಗಳಾದ ನಿತೀನ್ ಭಟ್, ಗಗನ್ ಅಗರಿಕಜೆ, ಜಯರಾಮ ಎಚ್.ಎಲ್, ಗಿರೀಶ್ ಆಚಾರ್ಯ ಪೈಲಾಜೆ, ಪ್ರಮುಖರಾದ ಚಂದ್ರಶೇಖರ ನಾಯರ್, ಮೋಹನದಾಸ ರೈ, ರೋಹಿತ್ ಬಿ.ಬಿ, ಗೋಪಾಲ ಎಣ್ಣೆಮಜಲು, ದೇವಿಪ್ರಸಾದ್ ಚಿಕ್ಮುಳಿ, ಚಿದಾನಂದ ಕುಳ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading