ಸುಳ್ಯ: ಆಂಬುಲೆನ್ಸ್ ಚಾಲಕಮಾಲಕ ಸಂಘದ ವತಿಯಿಂದ ಚೊಕ್ಕಾಡಿ ಪ್ರೌಢ ಶಾಲೆಗೆ ಅಗತ್ಯ ವೈದ್ಯಕೀಯ ಸಾಮಗ್ರಿಗಳ ಕೊಡುಗೆ

ಸುಳ್ಯ ತಾಲೂಕು ಅಂಬುಲನ್ಸ್ ಚಾಲಕ-ಮಾಲಕರ ಸಂಘದ ವತಿಯಿಂದ ಸಮಾಜಮುಖಿ ಸೇವೆಯ ಅಂಗವಾಗಿ ಚೊಕ್ಕಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಲಾದ ಮೆಡಿಕಲ್ ರೂಮ್‌ಗೆ ಅಗತ್ಯವಿರುವ ಬೆಡ್, ಬೆಡ್ ಶೀಟ್ ಹಾಗೂ ದಿಂಬುಗಳನ್ನು ಉಚಿತವಾಗಿ ಕೊಡುಗೆಯಾಗಿ ನೀಡಲಾಯಿತು.
ಶಾಲಾ ವಿದ್ಯಾರ್ಥಿಗಳ ತುರ್ತು ಆರೋಗ್ಯ ಸೇವೆಗೆ ಅನುಕೂಲವಾಗುವ ಉದ್ದೇಶದಿಂದ ಈ ಅಗತ್ಯ ಸಾಮಗ್ರಿಗಳನ್ನು ಸಂಘದ ವತಿಯಿಂದ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಸುಳ್ಯ ತಾಲೂಕು ಅಂಬುಲನ್ಸ್ ಚಾಲಕ-ಮಾಲಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಮಾಜಮುಖಿ ಕಾರ್ಯವನ್ನು ಶಾಲಾ ಆಡಳಿತ ಮಂಡಳಿ ಶ್ಲಾಘಿಸಿದ್ದು, ಸಹಕಾರ ನೀಡಿದ ಸುಳ್ಯ ತಾಲೂಕು ಅಂಬುಲನ್ಸ್ ಚಾಲಕ-ಮಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಮುಂದೆಯೂ ಇಂತಹ ಸಮಾಜೋಪಯೋಗಿ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading