ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ನಾಳೆ(ಜು. 22)ಯಿಂದ ಆಟಿ ಸೇಲ್

ಪುತ್ತೂರು: ಪ್ರಸಿದ್ದ ಚಿನ್ನಾಭರಣ ಮಳಿಗೆಯಾದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಜುಲೈ 22 ರಿಂದ ವಿಶೇಷ ಆಟಿ ಸೇಲ್ ಆರಂಭವಾಗಲಿದೆ. ಪುತ್ತೂರು, ಸುಳ್ಯ, ಮೂಡಬಿದ್ರೆ, ಹಾಸನ ಮತ್ತು ಕುಶಾಲನಗರ ಶಾಖೆಗಳಲ್ಲಿ ಈ ಸೇಲ್ ನಡೆಯಲಿದೆ.

. . . . . . . . .

ಈ ವಿಶೇಷ ಸೇಲ್ ಅಂಗವಾಗಿ ಚಿನ್ನದ ಆಭರಣಗಳ ವಿ.ಎ (VA) ಶುಲ್ಕದ ಮೇಲೆ ಪ್ರತೀ ಗ್ರಾಂಗೆ ರೂ.500/- ವರೆಗೆ ರಿಯಾಯಿತಿ,ಬೆಳ್ಳಿಯ ಆಭರಣಗಳ ಮೇಲೆ ಪ್ರತೀ ಕೆ.ಜಿಗೆ ಫ್ಲಾಟ್ ರೂ.6000/- ರಿಯಾಯಿತಿ ಹಾಗೂ ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ರೂ.7000/-ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಮೊದಲೇ ಖರೀದಿ ಮಾಡಿದ ಹಳೆಯ ಗ್ಲೋ ಡೈಮಂಡ್ಸ್‌ಗಳಿಗೆ 90% ಬೈಬ್ಯಾಕ್ (Buy Back) ಅನ್ನು ನಿಮ್ಮ ಹೊಸ ಗ್ಲೋ ಡೈಮಂಡ್ಸ್‌ಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.

. . . . . . .

ಚಿನ್ನದ ದರವು ಈ ಹಿಂದೆ ಅಂದರೆ ಫೆಬ್ರವರಿ ತಿಂಗಳಿನಲ್ಲಿ ಸುಮಾರು ರೂ.16,500 ವರೆಗೆ ಇದ್ದರೆ, ಇದೀಗ ಸುಮಾರು ರೂ.13,000/- ರ ಮಟ್ಟಕ್ಕೆ ಇಳಿಕೆಯಾಗಿದೆ. ಈ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಉತ್ತಮ ಉಳಿತಾಯದ ಅವಕಾಶ ದೊರೆತಿದ್ದು ಆಭರಣ ಖರೀದಿಗೆ ಇದು ಅತ್ಯಂತ ಸೂಕ್ತ ಸಮಯವಾಗಿದೆ. ಆಕರ್ಷಕ 8% VA ಶುಲ್ಕದಿಂದ ಆರಂಭವಾಗುವ ವಿಶೇಷ ಹಳದಿ ಟ್ಯಾಗ್ ಆಭರಣಗಳೊಂದಿಗೆ ಗ್ರಾಹಕರಿಗೆ ಅದ್ಭುತ ಖರೀದಿ ಅವಕಾಶ.

ಈ ಸಂದರ್ಭದಲ್ಲಿ ನವೀನ ವಿನ್ಯಾಸಗಳ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ವಿಶೇಷ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಎಲ್ಲಾ ವಯೋಮಾನದ ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನ ಹಾಗೂ ವಜ್ರಾಭರಣಗಳ ವಿಶಾಲ ಸಂಗ್ರಹ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರಿಗಾಗಿ ಆಕರ್ಷಕ ವಿನ್ಯಾಸಗಳ ಆಭರಣಗಳ ಜೊತೆಗೆ ‘ಪ್ರಾಚಿ’ ವಿಭಾಗದಲ್ಲಿ ವಿನೂತನ ಆ್ಯಂಟಿಕ್ ಚಿನ್ನಾಭರಣಗಳು ಹಾಗೂ ಲೈಟ್ ವೈಟ್ ಆ್ಯಂಟಿಕ್ ಆಭರಣಗಳ ವಿಶೇಷ ಸಂಗ್ರಹವೂ ಇದೆ.ಇದಲ್ಲದೆ 1300ಕ್ಕೂ ಹೆಚ್ಚು ಟ್ರೆಡಿಷನಲ್ ಮತ್ತು ಮಾಡರ್ನ್ ಕರಿಮಣಿಗಳು ಹಾಗೂ 2500 ಕ್ಕೂ ಹೆಚ್ಚು ಸರಗಳ ಕಲೆಕ್ಷನ್, “ಗ್ಲೋ” ವಜ್ರಾಭರಣ ವಿಭಾಗದಲ್ಲಿ ಸುಮಾರು 3,000ಕ್ಕೂ ಅಧಿಕ ಹೊಸ ವಿನ್ಯಾಸಗಳ ವಜ್ರಾಭರಣಗಳ ಸಂಗ್ರಹ ಗ್ರಾಹಕರಿಗಾಗಿ ಲಭ್ಯವಿದೆ. “ಪಾರ್ಥ’ ಪುರುಷರ ಚಿನ್ನಾಭರಣಗಳ ವಿಭಾಗದಲ್ಲಿ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ, ಹೊಸ ವಿನ್ಯಾಸದ ಕ್ಯೂಬನ್‌ ಚೈನ್ಸ್, ಇಂಡೋ ಇಟಾಲಿಯನ್ ಚೈನ್ಸ್, ನವರತ್ನ ಉಂಗುರಗಳು, ವಿವಿಧ ವಿನ್ಯಾಸದ ಆ್ಯಂಟಿಕ್ ಹಾಗೂ ಕಾಸ್ಟಿಂಗ್ ಪದಕಗಳು, ವಾಚ್ ಚೈನ್ಸ್ ಸೇರಿದಂತೆ ಹಲವು ಹೊಸ ಮಾದರಿಯ ಆಭರಣಗಳು ಲಭ್ಯವಿದೆ. ಹೊಸ ತಂತ್ರಜ್ಞಾನದ ಮೂಲಕ ತಯಾರಿಸಲಾದ ಹೆಚ್ಚು ಕಾಲ ಬಾಳಿಕೆ ಬರುವ ಲೈಟ್‌ ವೈಟ್ ಚಿನ್ನಾಭರಣಗಳು, ಕಲ್ಲಿನ ಆಭರಣಗಳ ಲೈಟ್ ವೈಟ್ ಕಲೆಕ್ಷನ್ ಪೇಪರ್ ಕಾಸ್ಟಿಂಗ್ ಆಭರಣಗಳು ಹಾಗೂ ವಿವಿಧ ಬಣ್ಣಗಳ ವಿನೂತನ ವಿನ್ಯಾಸದ ಆಭರಣಗಳ ಸಂಗ್ರಹವೂ ಗ್ರಾಹಕರಿಗಾಗಿ ಸಿದ್ಧವಾಗಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನಾಭರಣಗಳು, ವಜ್ರಾಭರಣಗಳು ಮತ್ತು ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿರುವ ಸಂಸ್ಥೆಯು ಪುತ್ತೂರು, ಸುಳ್ಯ, ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಶಾಖೆಗಳಿದ್ದು, ಸೀಮಿತ ಅವಧಿಗೆ ಮಾತ್ರ ಲಭ್ಯವಿರುವ ಈ ವಿಶೇಷ ಆಫರ್‌ನ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading