ಜನಜಾಗೃತಿಯಿಂದ ಆರೋಗ್ಯ ಕಾಪಾಡಲು ಸಾಧ್ಯ: ಎಸ್. ಅಂಗಾರ | ಪತ್ರಕರ್ತರಿಗೆ ಸ್ಟೀಲ್ ಬಾಟಲ್ ವಿತರಣೆ

ಸುಳ್ಯ: ಜನಜಾಗೃತಿ ಮೂಡಿಸುವ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ರೂಪಿಸುವ ಕೆಲಸವನ್ನು ಜೇಸಿಐ ಮಾಡುತ್ತಿದೆ. ಯಾವುದನ್ನು ಹೇಗೆ ಸದ್ಬಳಕೆ ಮಾಡಬೇಕು ಎಂಬ ಅರಿವು ಜನರಲ್ಲಿ ಮೂಡಿದಾಗ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವ ಎಸ್. ಅಂಗಾರ ಹೇಳಿದರು.

. . . . . . . . .

ಜೇಸಿಐ ಪಯಸ್ವಿನಿ ಸುಳ್ಯ ವತಿಯಿಂದ ಸೆ. 6ರಂದು ಸುಳ್ಯದ ವೆಂಕಟ್ರಮಣ ಕೋ-ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಶ್ರೀ ಭೋಜಪ್ಪ ಗೌಡ ಸಭಾಂಗಣದಲ್ಲಿ ನಡೆದ ‘ಸಸ್ಟೇನಬಲ್ ಸಿಪ್ಪಿಂಗ್ ಡೇ’ ಕಾರ್ಯಕ್ರಮದಲ್ಲಿ ಸ್ಟೀಲ್ ಬಾಟಲ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

. . . . . . .

ಕಾರ್ಯಕ್ರಮದಲ್ಲಿ ವಲಯ 15, ಜೇಸಿಐ ಭಾರತ ವಲಯ ನಿರ್ದೇಶಕ ಜೆಎಫ್‌ಡಿ ವಿಘ್ನೇಶ್ ಪ್ರಸಾದ್ ರಾವ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಸಂಶುದ್ದೀನ್, ಜೇಸಿಐ ಪಯಸ್ವಿನಿ ಸುಳ್ಯ ಪೂರ್ವಾಧ್ಯಕ್ಷ ಹಾಗೂ ಪೂರ್ವ ವಲಯ 15ರ ಜೇಸಿಐ ಭಾರತ ಪಿಪಿಪಿ ಅಶೋಕ್ ಚೂಂತಾರು, ಜೇಸಿಐ ಮಾಜಿ ಅಧ್ಯಕ್ಷ ಸುರೇಶ್ ಕಾಮತ್ ಉಪಸ್ಥಿತರಿದ್ದರು.

ಜೇಸಿ ಮಹೇಶ್ ಅಂಬೆಕಲ್ಲು ಜೇಸಿ ವಾಣಿ ವಾಚಿಸಿದರು. ಜೇಸಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೊಂಟಡ್ಕ ಸ್ವಾಗತಿಸಿ, ತಾರಾ ಮಾಧವ ಚೂಂತಾರು ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading