ಜೂ.30 ರಂದು ಗುತ್ತಿಗಾರಿನಲ್ಲಿ “ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತು ರೈತರಿಗೆ ಮಾಹಿತಿ” 

ಜೇಸಿಐ ಪಂಜ ಪಂಚಶ್ರೀ, ರೈತ ಸಂಪರ್ಕ ಕೇಂದ್ರ ಪಂಜ ಹಾಗೂ ಕೃಷಿ ಇಲಾಖೆ ಸುಳ್ಯ ಇವರ ಸಹಯೋಗದಲ್ಲಿ "ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ" ಕುರಿತು ರೈತರಿಗೆ ಮಾಹಿತಿ ಕಾರ್ಯಕ್ರಮವು ಜೂನ್ 30ರಂದು(ಮಂಗಳವಾರ) ಪೂರ್ವಾಹ್ನ 10:30ಕ್ಕೆ ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೆ.ಎಫ್‌.ಎಂ ದೇವಿಪ್ರಸಾದ್ ಚಿಕ್ಮುಳಿ...

“ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ” – “ಅನುದಾನ ಹಂಚಿಕೆ, ಕೇಂದ್ರ ಸರಕಾರ ನೀಡುವ ಅಕ್ಕಿ ಹಾಗೂ ಮಾಣಿ ಮೈಸೂರು ರಸ್ತೆ ವಿಚಾರವಾಗಿ ಕಾಂಗ್ರೆಸ್ ಹೇಳಿಕೆ ಹಾಸ್ಯಾಸ್ಪದ” – ವೆಂಕಟ್ ವಳಲಂಬೆ

“ನಮ್ಮ ಶಾಸಕರು ಹಂಚಿರುವ ಅನುದಾನವು ಶಾಸಕರ ಹಕ್ಕಿನ ವ್ಯಾಪ್ತಿಗೆ ಬಂದಿದ್ದು, ಅದನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಖಾಸಗಿ ಶಾಲೆಯಾದರೂ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಅಧಿಕೃತ ಶಾಲೆಗೆ ಬಳಕೆ ಮಾಡಲಾಗಿದೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಮತ್ತು ಕ್ಷೇತ್ರದ ಎಲ್ಲಾ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯುವ ಉದ್ದೇಶದಿಂದ ನೀಡಿದ್ದಾಗಿದೆ. ನೀವು 3 ವರ್ಷದಿಂದ ಕಾಂಗ್ರೆಸ್...
Ad Widget

ಸುಳ್ಯ : ಉಬರಡ್ಕ – ಕೊಡಿಯಾಲಬೈಲು ರಸ್ತೆಗೆ ರೂ. 1 ಕೋಟಿ ಅನುದಾನ ಬಿಡುಗಡೆ

ಸುಳ್ಯ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲು ರಸ್ತೆಗೆ ಅಭಿವೃದ್ಧಿಗೆ ರೂ.1 ಕೋಟಿ ಅನುದಾನ ಬಿಡುಗಡೆಯಾಗಿರುವುದಾಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಪಿ.ಸಿ ಜಯರಾಮ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಹೆಚ್.ಸಿ. ಮಹಾದೇವಪ್ಪರವರಿಗೆ ಸುಳ್ಯ ಬ್ಲಾಕ್...

ಕುಮಾರ ಪರ್ವತ ಚಾರಣಕ್ಕೆ ಟ್ರೆಕ್ಕಿಂಗ್ ಗೈಡ್‌ಗಳ ನೇಮಕಾತಿ ; ಆಸಕ್ತ ಅಭ್ಯರ್ಥಿಗಳ ನೋಂದಣಿಗೆ ಆಹ್ವಾನ

ಸೋಮವಾರಪೇಟೆ ತಾಲೂಕಿನ ಕುಮಾರಳ್ಳಿ ಗ್ರಾಮದಲ್ಲಿರುವ ಪುಷ್ಪಗಿರಿ ವನ್ಯಜೀವಿ ವಲಯ ವ್ಯಾಪ್ತಿಗೆ ಒಳಪಡುವ ಕುಮಾರ ಪರ್ವತ ಚಾರಣಕ್ಕೆ ಆಗಮಿಸುವ ಪ್ರವಾಸಿಗರಿಗೆ ಸುರಕ್ಷಿತ, ಶಿಸ್ತುಬದ್ಧ ಹಾಗೂ ಗುಣಮಟ್ಟದ ಟ್ರೆಕ್ಕಿಂಗ್ ಅನುಭವ ಒದಗಿಸುವ ಉದ್ದೇಶದಿಂದ ಟ್ರೆಕ್ಕಿಂಗ್ ಗೈಡ್ ಗಳ ಅವಶ್ಯಕತೆಯಿದ್ದು, ಟ್ರೆಕ್ಕಿಂಗ್ ಗೈಡ್ ಗಳಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲು ಆಹ್ವಾನಿಸಲಾಗಿದ್ದು, ಪ್ರಕೃತಿ ಮತ್ತು ಟ್ರೆಕ್ಕಿಂಗ್ ಚಟುವಟಿಕೆಗಳಲ್ಲಿ...

ಬೆಳ್ಳಾರೆ – ಪಳ್ಳಿಮಜಲು ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಕೂರತ್ ತಂಙಲ್ ಅನುಸ್ಮರಣೆ

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಕೂರತ್ ತಂಙಲ್ ಅನುಸ್ಮರಣೆ ಜೂ.28ರಂದು ಮಗ್ರಿಬ್ ನಮಾಝಿನ ನಂತರ 7:30ಕ್ಕೆ ನಡೆಯಿತು. ಪಳ್ಳಿಮಜಲು ಖತೀಬ್ ಮುಹಮ್ಮದ್ ಸವಾದ್ ಮದನಿ ಹಾಗೂ ಪಳ್ಳಿಮಜಲು ಮದರಸದ ಮುಅಲ್ಲಿಂ ಹಬೀಬುರ್ರಹ್ಮಾನ್ ಹಿಮಮಿ ಮಾಸಿಕ ಸ್ವಲಾತಿಗೆ ಮುಂದಾಳತ್ವ ವಹಿಸಿದರು. ಇಶಾ: ನಮಾಝಿನ ನಂತರ ಪೈಚಾರು ಮದರಸದ ಸದರ್...

ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್‌ ಸೊಸೈಟಿ 4ನೇ ವರ್ಷಕ್ಕೆ ಪಾದಾರ್ಪಣೆ ಪ್ರಯಕ್ತ ಗಣಹೋಮ

ಸುಳ್ಯದ ರಥಬೀದಿಯ ವಿನಾಯಕ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು 4ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಲಕ್ಶ್ಮೀ ಗಣಪತಿ ಹವನವು ಸಹಕಾರಿಯ ಕಛೇರಿಯಲ್ಲಿ ಜೂ.29ರಂದು ಬೆಳಿಗ್ಗೆ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆ ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, ಅಧ್ಯಕ್ಷರಾದ ಜನಾರ್ಧನ ಧೋಳ, ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ, ನಿರ್ದೇಶಕರಾದ ಪ್ರಭಾಕರನ್...

ಗಾಂಧಿನಗರ ನಾವೂರು ಶ್ರೀ ಕಲ್ಕುಡ ದೈವಸ್ಥಾನ ದಾನಿಗಳು ಹಾಗೂ ಭಕ್ತರಿಗೆ ಅಭಿನಂದನಾ ಸಭೆ

ಸುಳ್ಯ : ಗಾಂಧಿನಗರ ನಾವೂರು ಶ್ರೀ ಕಲ್ಕುಡ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನಡೆದ ಶ್ರೀ ದೈವಗಳ ಪುನರ್‌ಪ್ರತಿಷ್ಠಾ ಕಲಶೋತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಿದ ದಾನಿಗಳು ಹಾಗೂ ಭಗವದ್ಭಕ್ತರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಜೂ. 28ರಂದು ದೇವಸ್ಥಾನದಲ್ಲಿ ಅಭಿನಂದನಾ ಸಭೆ ನಡೆಯಿತು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಜೀರ್ಣೋದ್ಧಾರ ಕಾರ್ಯ ನಡೆದು ಬಂದ ಹಾದಿ...

ಹರಿಹರ ಪಳ್ಳತ್ತಡ್ಕ : ಕಜ್ಜೋಡಿ ದಿ| ಶ್ರೀಧರ್ ಭಾಗವತ್ ರವರಿಗೆ “ಸಾರ್ವಜನಿಕ ಶ್ರದ್ಧಾಂಜಲಿ ಸಭೆ”

ಜೂ.11 ರಂದು ನಿಧನರಾದ ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ದಿ| ಶ್ರೀಧರ್ ಭಾಗವತ್ ರವರಿಗೆ ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘ, ಸಚಿನ್ ಕ್ರೀಡಾ ಸಂಘ ಹರಿಹರ ಪಳ್ಳತ್ತಡ್ಕ ಹಾಗೂ ಊರ ಅಭಿಮಾನಿಗಳಿಂದ “ಸಾರ್ವಜನಿಕ ಶ್ರದ್ಧಾಂಜಲಿ ಸಭೆ”ಯು ಜೂ.28ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ ನಡೆಯಿತು.ಸುಳ್ಯ ತಾಲೂಕು ಪಿಂಚಣಿದಾರರ...

ಇಂದಿನ(ಜೂನ್ 29) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 29 ಜೂನ್ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜೂನ್ 29) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 390 ರಿಂದ...

ಸುಬ್ರಹ್ಮಣ್ಯ ರೋಟರಿ ಕ್ಲಬ್ ಗೆ ಪ್ಲಾಟಿನಮ್ ಅವಾರ್ಡ್

ಸುಬ್ರಹ್ಮಣ್ಯ ಜೂನ್ 28 : ಅಂತರಾಷ್ಟ್ರೀಯ ರೋಟರಿ ಜಿಲ್ಲೆ 31/81ರ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದು, ಸುಬ್ರಹ್ಮಣ್ಯ ರೋಟರಿ ಕ್ಲಬ್ ವಿವಿಧ ವಿಭಾಗಗಳಲ್ಲಿ ಸಲ್ಲಿಸಿದ ಸೇವೆಗಳಿಗಾಗಿ ಪ್ಲಾಟಿನಮ್ ಅವಾರ್ಡ್ ಗಳಿಸಿಕೊಂಡಿದೆ. ರೋಟರಿ ಜಿಲ್ಲೆಯ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಕಂದಾಯ ಜಿಲ್ಲೆಗಳನ್ನೊಳಗೊಂಡ ಕ್ಲಬ್ ಸರ್ವಿಸ್ ವಿಭಾಗದಲ್ಲಿ ಕಾರ್ಗಿಲ್ ಯೋಧರನ್ನು...
Loading posts...

All posts loaded

No more posts

error: Content is protected !!