ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್‌ ಸೊಸೈಟಿ 4ನೇ ವರ್ಷಕ್ಕೆ ಪಾದಾರ್ಪಣೆ ಪ್ರಯಕ್ತ ಗಣಹೋಮ

ಸುಳ್ಯದ ರಥಬೀದಿಯ ವಿನಾಯಕ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು 4ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಲಕ್ಶ್ಮೀ ಗಣಪತಿ ಹವನವು ಸಹಕಾರಿಯ ಕಛೇರಿಯಲ್ಲಿ ಜೂ.29ರಂದು ಬೆಳಿಗ್ಗೆ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆ ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, ಅಧ್ಯಕ್ಷರಾದ ಜನಾರ್ಧನ ಧೋಳ, ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ, ನಿರ್ದೇಶಕರಾದ ಪ್ರಭಾಕರನ್ ನಾಯರ್, ಪ್ರಕಾಶ್ ಕೇರ್ಪಳ, ಶ್ರೀಮತಿ ಭವಾನಿ ಬಿಳಿಮಲೆ, ಸಿಬ್ಬಂದಿ ಕು. ಜ್ಯೋತ್ಸ್ನಾ ಮಂದ್ರಪ್ಪಾಡಿ, ಸದಸ್ಯರಾದ ನವೀನ ಬಿಳಿಮಲೆ, ಅಶ್ವತ್ ಕನಕಮಜಲು, ಶ್ರೀಮತಿ ತೀರ್ಥವತಿ ಬಿ, ಶ್ರೀಮತಿ ಪ್ರಜ್ನಾ ಅಚ್ರಪ್ಪಾಡಿ, ಮಂಜುನಾಥ ಮಡ್ತಿಲ ಮತ್ತಿತರರು ಉಪಸ್ಥಿತರಿದ್ದರು. ಪುರೋಹಿತರಾದ ಪ್ರವೀಣ ಭಟ್ ಮಂಡೆಕೋಲು ರವರ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿತು.

. . . . . . . . .

ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್‌ ಸೊಸೈಟಿಯ ಒಟ್ಟು ವ್ಯವಹಾರವು 2025-26ನೇ ಸಾಲಿನಲ್ಲಿ 44.02 ಕೋಟಿ ಯಾಗಿದ್ದು, ರೂ.7.06 ಲಕ್ಷ ನಿವ್ವಳ ಲಾಭವನ್ನು ಪಡೆದಿರುತ್ತದೆ ಮತ್ತು ಸದಸ್ಯರಿಗೆ ಶೇ.12% ಡಿವಿಡೆಂಡ್ ನ್ನು ವಿತರಿಸಿದೆ. ಸಂಸ್ಥೆಯಲ್ಲಿ ಠೇವಣಾತಿಗಳ ಮೇಲೆ ಆಕರ್ಷಕ ಬಡ್ಡಿದರಗಳು ಇದೆ, ಸ್ವರ್ಣ ನಿಧಿ ಠೇವಣಿ(F.D) ಯು ಹಿರಿಯ ನಾಗರಿಕರಿಗೆ 1 ವರ್ಷ ಮತ್ತು ಮೇಲ್ಪಟ್ಟು ಶೇ.10.50%, ಇತರರಿಗೆ ಶೇ.10.00% ಮತ್ತು ಆವರ್ತನ ಠೇವಣಿ(R.D)ಗೆ ಒಂದು ವರ್ಷ ಮೇಲ್ಪಟ್ಟು ಶೇ.10.00% ಬಡ್ಡಿದರಗಳನ್ನು ನೀಡುತ್ತಿದೆ. ಸಂಸ್ಥೆಯಲ್ಲಿ ಅತೀ ಕಡಿಮೆ ಬಡ್ಡಿದರದಲ್ಲಿ ಚಿನ್ನಾಭರಣ ಈಡಿನ ಸಾಲಗಳು ಮತ್ತು ಇನ್ನಿತರ ಸಾಲ ಸೌಲಭ್ಯಗಳು ಲಭ್ಯವಿರುತ್ತದೆ ಸಾರ್ವಜನಿಕರು ಈ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿ ಕೊಳ್ಳಬೇಕೆಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading