“ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ” – “ಅನುದಾನ ಹಂಚಿಕೆ, ಕೇಂದ್ರ ಸರಕಾರ ನೀಡುವ ಅಕ್ಕಿ ಹಾಗೂ ಮಾಣಿ ಮೈಸೂರು ರಸ್ತೆ ವಿಚಾರವಾಗಿ ಕಾಂಗ್ರೆಸ್ ಹೇಳಿಕೆ ಹಾಸ್ಯಾಸ್ಪದ” – ವೆಂಕಟ್ ವಳಲಂಬೆ

“ನಮ್ಮ ಶಾಸಕರು ಹಂಚಿರುವ ಅನುದಾನವು ಶಾಸಕರ ಹಕ್ಕಿನ ವ್ಯಾಪ್ತಿಗೆ ಬಂದಿದ್ದು, ಅದನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಖಾಸಗಿ ಶಾಲೆಯಾದರೂ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಅಧಿಕೃತ ಶಾಲೆಗೆ ಬಳಕೆ ಮಾಡಲಾಗಿದೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಮತ್ತು ಕ್ಷೇತ್ರದ ಎಲ್ಲಾ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯುವ ಉದ್ದೇಶದಿಂದ ನೀಡಿದ್ದಾಗಿದೆ. ನೀವು 3 ವರ್ಷದಿಂದ ಕಾಂಗ್ರೆಸ್ ಸರಕಾರ ಬಂದ ಮೇಲೆ ನಮ್ಮ ಕ್ಷೇತ್ರಕ್ಕೆ ಎಷ್ಟು ಅನುದಾನವನ್ನು ನೀಡಿದ್ದೀರಿ ಎಂದು ಬಹಿರಂಗ ಪಡಿಸಿ. ಅದು ಬಿಟ್ಟು ಪ್ರಜ್ಞಾವಂತ ಕ್ಷೇತ್ರದ ಜನರಿಗೆ ಸುಳ್ಳು ಆಪಾದನೆ ಮಾಡಿ ತನಿಖೆ ನಡೆಸುತ್ತೇವೆ ಎಂದು ಹೇಳಿರುವುದು ಹಾಸ್ಯಾಸ್ಪದ. ಗ್ಯಾರಂಟಿ ಯೋಜನೆ ಅನುಷ್ಠಾನಗಳ ತನಿಖೆ ಮಾಡಿ ಸತ್ಯಾಂಶವನ್ನು ಜನರಿಗೆ ತಿಳಿಸುವುದು ಬಿಟ್ಟು, ಕೇಂದ್ರ ಸರಕಾರ ನೀಡುವ 5 ಕೆ.ಜಿ ಅಕ್ಕಿಯನ್ನು ನಾವೇ ನೀಡುವುದೆಂದು ತಿಳಿಸುವ ನಿಮ್ಮಿಂದ ನಮ್ಮ ಶಾಸಕರಾಗಲೀ, ನಮ್ಮ ಪಾರ್ಟಿಯಾಗಲೀ ಪಾಠ ಕಲಿಯುವ ಅಗತ್ಯವಿಲ್ಲ. ನಮ್ಮ ಕ್ಷೇತ್ರದ ಹಿತದೃಷ್ಟಿಯಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ಶಾಸಕರ ವಿವೇಚನಾ ಅಡಿಯಲ್ಲಿಯೇ ಮಾರ್ಗಸೂಚಿಯ ಅನ್ವಯವಾಗಿಯೇ ಎಲ್ಲಾ ಕೆಲಸ ಕಾರ್ಯಗಳು ನಡೆದಿವೆ ಮುಂದೆಯೂ ನಡೆಯುತ್ತದೆ” ಎಂದು ಪ್ರತ್ಯುತ್ತರ ನೀಡಿದರು. “ಮಾತ್ರವಲ್ಲದೆ ಕೇಂದ್ರ ಸರಕಾರದ ಯೋಜನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಡಿ.ಪಿ.ಆರ್ ಆಗಿ ಪ್ರಗತಿಯಲ್ಲಿರುವ ಈ ಯೋಜನೆಯನ್ನು ಕೂಡಾ ನಿಮ್ಮ ಜನಪ್ರತಿನಿಧಿಗಳು ನಾವೇ ಮಾಡುತ್ತಿರುವುದು ಎಂದು ಬಿಂಬಿಸುತ್ತಿರುವುದು ಈ ನಾಡಿನ ವಿದ್ಯಾವಂತ ನಾಗರಿಕರಿಗೆ ಮಾಡುವ ಅಪಮಾನ. ಈ ರೀತಿಯ ರಾಜಕೀಯ ಬಿಟ್ಟು ಕ್ಷೇತ್ರದ ಶಾಸಕರ ಪತ್ರ ತೆಗೆದುಕೊಂಡು ಕ್ಷೇತ್ರಕ್ಕೆ ಬೇಕಾದ ಆದ್ಯತೆಯ ಕೆಲಸಕ್ಕೆ ನಿಮ್ಮ ಸರಕಾರದ ಹಣವನ್ನು ತಂದು ಅಭಿವೃದ್ಧಿ ಪಡಿಸುವುದನ್ನು ಮಾಡಿ. ಅದು ಬಿಟ್ಟು ಕೀಳು ಮಟ್ಟದ ರಾಜಕೀಯ ಮಾಡುವುದನ್ನು ಸಹಿಸುವುದಿಲ್ಲವೆಂದು” ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷರಾದ ವೆಂಕಟ್ ವಳಲಂಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading