ಬೆಳ್ಳಾರೆ – ಪಳ್ಳಿಮಜಲು ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಕೂರತ್ ತಂಙಲ್ ಅನುಸ್ಮರಣೆ

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಕೂರತ್ ತಂಙಲ್ ಅನುಸ್ಮರಣೆ ಜೂ.28ರಂದು ಮಗ್ರಿಬ್ ನಮಾಝಿನ ನಂತರ 7:30ಕ್ಕೆ ನಡೆಯಿತು. ಪಳ್ಳಿಮಜಲು ಖತೀಬ್ ಮುಹಮ್ಮದ್ ಸವಾದ್ ಮದನಿ ಹಾಗೂ ಪಳ್ಳಿಮಜಲು ಮದರಸದ ಮುಅಲ್ಲಿಂ ಹಬೀಬುರ್ರಹ್ಮಾನ್ ಹಿಮಮಿ ಮಾಸಿಕ ಸ್ವಲಾತಿಗೆ ಮುಂದಾಳತ್ವ ವಹಿಸಿದರು. ಇಶಾ: ನಮಾಝಿನ ನಂತರ ಪೈಚಾರು ಮದರಸದ ಸದರ್ ಮುಅಲ್ಲಿಂ ಫೈಝಲ್ ಹಿಮಮಿ ಸಖಾಫಿ ಕರ್ನೂರ್ ವಿಷಯ ಮಂಡನೆ ಮಾಡಿದರು.

. . . . . . . . .

ಮಜ್ಲಿಸಿನಲ್ಲಿ ಪಳ್ಳಿಮಜಲು ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷ ಹನೀಫ್ ಸಲಾಲಹ್, ಪಳ್ಳಿಮಜಲು ಮಸೀದಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಬೂಡು, ಪಳ್ಳಿಮಜಲು ಸ್ವಲಾತ್ ಸಮಿತಿ ಅಧ್ಯಕ್ಷ ಮೂಸಾ ಬೂಡು ಹಾಗೂ ಆಡಳಿತ ಸಮಿತಿ, ಸ್ವಲಾತ್ ಸಮಿತಿ ಪದಾಧಿಕಾರಿಗಳು ಜಮಾಅತರು ಉಪಸ್ಥಿತರಿದ್ದರು. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶ ಕಲ್ಪಿಸಲಾಗಿತ್ತು. ಕೊನೆಯಲ್ಲಿ ತಬರ್ರುಖ್ ವಿತರಣೆ ನಡೆಯಿತು. ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading