ಹರಿಹರ ಪಳ್ಳತ್ತಡ್ಕ : ಕಜ್ಜೋಡಿ ದಿ| ಶ್ರೀಧರ್ ಭಾಗವತ್ ರವರಿಗೆ “ಸಾರ್ವಜನಿಕ ಶ್ರದ್ಧಾಂಜಲಿ ಸಭೆ”

ಜೂ.11 ರಂದು ನಿಧನರಾದ ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ದಿ| ಶ್ರೀಧರ್ ಭಾಗವತ್ ರವರಿಗೆ ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘ, ಸಚಿನ್ ಕ್ರೀಡಾ ಸಂಘ ಹರಿಹರ ಪಳ್ಳತ್ತಡ್ಕ ಹಾಗೂ ಊರ ಅಭಿಮಾನಿಗಳಿಂದ “ಸಾರ್ವಜನಿಕ ಶ್ರದ್ಧಾಂಜಲಿ ಸಭೆ”ಯು ಜೂ.28ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ ನಡೆಯಿತು.
ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಡಾ. ರಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೊದಲಿಗೆ ಹಿರಿಯ ವೈದ್ಯರಾದ ಡಾ. ಚಂದ್ರಶೇಖರ ಕಿರಿಭಾಗ ರವರು ದೀಪ ಬೆಳಗಿಸಿ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ಉಪನ್ಯಾಸಕರಾದ ರಾಮಚಂದ್ರ ಪಳಂಗಾಯ, ಸಚಿನ್ ಕ್ರೀಡಾ ಸಂಘದ ಅಧ್ಯಕ್ಷರಾದ ಮನೀಷ್ ಗುಂಡಿಹಿತ್ಲು, ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಗುಣವರ್ಧನ ಕೆದಿಲ ಹಾಗೂ ಶ್ರೀಧರ್ ಭಾಗವತ್ ರವರ ಪುತ್ರ ಶರತ್.ಡಿ.ಎಸ್ ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.
ಪ್ರಭಾಕರ ಕಿರಿಭಾಗ ಸ್ವಾಗತಿಸಿ, ಹರ್ಷಿತಾ ಹಾಗೂ ಶ್ರೀದೇವಿ ಪ್ರಾರ್ಥಿಸಿದರು. ಪ್ರಿಯ ಕಲ್ಲೇಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading