ಜೂ.30 ರಂದು ಗುತ್ತಿಗಾರಿನಲ್ಲಿ “ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತು ರೈತರಿಗೆ ಮಾಹಿತಿ” 

ಜೇಸಿಐ ಪಂಜ ಪಂಚಶ್ರೀ, ರೈತ ಸಂಪರ್ಕ ಕೇಂದ್ರ ಪಂಜ ಹಾಗೂ ಕೃಷಿ ಇಲಾಖೆ ಸುಳ್ಯ ಇವರ ಸಹಯೋಗದಲ್ಲಿ “ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ” ಕುರಿತು ರೈತರಿಗೆ ಮಾಹಿತಿ ಕಾರ್ಯಕ್ರಮವು ಜೂನ್ 30ರಂದು(ಮಂಗಳವಾರ) ಪೂರ್ವಾಹ್ನ 10:30ಕ್ಕೆ ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.

. . . . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೆ.ಎಫ್‌.ಎಂ ದೇವಿಪ್ರಸಾದ್ ಚಿಕ್ಮುಳಿ ವಹಿಸಲಿದ್ದಾರೆ. ಪ್ರಗತಿಪರ ಕೃಷಿಕ ಶ್ರೀ ವಿಷ್ಣು ಭಟ್ ಸಾಂದೀಪನಿ, ಕಲ್ಲಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

. . . . . . .

ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಎಂ.ಎಸ್, ಗುತ್ತಿಗಾರು ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದ ಮೊಕ್ತೇಸರ ವೆಂಕಟ್ ವಳಲಂಬೆ ಭಾಗವಹಿಸಲಿದ್ದಾರೆ.

ಬೀಜೋಪಚಾರದ ಮಹತ್ವ, ಸುರಕ್ಷಿತ ಕೀಟನಾಶಕಗಳ ಬಳಕೆ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಕುರಿತು ರೈತರಿಗೆ ಉಪಯುಕ್ತ ಮಾಹಿತಿ ನೀಡಲಾಗುವುದು. ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಜೇಸಿಐ ಪಂಜ ಪಂಚಶ್ರೀ, ರೈತ ಸಂಪರ್ಕ ಕೇಂದ್ರ ಪಂಜ ಹಾಗೂ ಕೃಷಿ ಇಲಾಖೆ ಸುಳ್ಯ ಪ್ರಕಟಣೆಯಲ್ಲಿ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading