11ನೇ ದಿನಕ್ಕೆ ಕಾಲಿರಿಸಿದ “ಭಾವ ತೀರ ಯಾನ’ ಚಲನಚಿತ್ರ – ಮೇ.18 ರಂದು ಸಂಜೆ 7.15 ಕ್ಕೆ ಪ್ರದರ್ಶನ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಇದೀಗ ಸುಳ್ಯದಲ್ಲೂ  ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನಗೊಳ್ಳುತ್ತಿದ್ದು, 2 ನೇ ವಾರದಲ್ಲಿ ಮುನ್ನಡೆಯುತ್ತಿದೆ. ಸುಳ್ಯ ಭಾರತ್ ಸಿನೇಮಾಸ್ ( ಸಂತೋಷ್ ಚಿತ್ರಮಂದಿರ) ನಲ್ಲಿ ಮೇ.18 ಸೋಮವಾರ ಸಂಜೆ 7.15 ಕ್ಕೆ ಚಿತ್ರ ಪ್ರದರ್ಶನ ನಡೆಯಲಿದೆ. ಕಳೆದ ಬಾರಿ...

ಅರಂತೋಡು : ಅರಮನೆಗಯ-ಬಲ್ನಾಡು-ಮರ್ಕಂಜ ಸಂಪರ್ಕ ಸೇತುವೆ ಉದ್ಘಾಟನೆ

ಬಹುವರ್ಷಗಳ ಬೇಡಿಕೆಯ ಆರಂತೋಡು ಗ್ರಾಮದ ಅರಮನೆಗಯ-ಬಲ್ನಾಡು-ಮರ್ಕಜ ಸಂಪರ್ಕ ಸೇತುವೆಯ ಉದ್ಘಾಟನೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ನೆರೆವರಿಸಿದರು. ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಕೇಶವ ಆಡ್ತಲೆ, ಮರ್ಕಂಜ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಗೀತಾ ಹೊಸೊಳಿಕೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ತಾಲ್ಲೂಕು ಪಂಚಾಯತ್...
Ad Widget

ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಡಬ್ಲ್ಯೂ.ಎಫ್.ಎಫ್ ಕರ್ನಾಟಕ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ - 2026 : 26 ಎಪ್ರಿಲ್ 2026 ಆದಿತ್ಯವಾರದಂದು ಬೆಂಗಳೂರಿನ ಸುರನ ಕಾಲೇಜು ಪೀಣ್ಯದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿತ್ತು. 10 ರಿಂದ 14 ವರ್ಷದ ಹುಡುಗಿಯರ ವಿಭಾಗದಲ್ಲಿ ಜಿಶಾ ಕೆ. ಕೆ ಕಲಾತ್ಮಕ ವೈಯಕ್ತಿಕ ಯೋಗಾಸನ ಸ್ಪರ್ಧೆಯಲ್ಲಿ 3ನೇ ಸ್ಥಾನ ಮತ್ತು ಸಂಪ್ರದಾಯಕ...

ಶ್ರೀ ವೀರಾಂಜನೇಯ ಮಕ್ಕಳ ತಂಡ ಅಂತರ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

ಕಟೀಲು ಮೇ.10 : ಶ್ರೀ ಕಟೀಲು ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಅಖಂಡ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ಭಜನಾ ಸ್ಪರ್ಧೆಯ ಅಂತಿಮ ಹಂತದಲ್ಲಿ ಸುಳ್ಯದ ಶ್ರೀ ವೀರಾಂಜನೇಯ ಮಕ್ಕಳ ಭಜನಾ ತಂಡ ತೃತೀಯ ಸ್ಥಾನ ಪಡೆದು 10 ಸಾವಿರ ರೂಪಾಯಿ ಬಹುಮಾನ ಪಡೆದಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸದನದಲ್ಲಿ ನಡೆದ 16 ವರ್ಷದೊಳಗಿನ ವಿಭಾಗದಲ್ಲಿ...

ಶಾಹುಲ್ ಹಮೀದ್ ಕುತ್ತಮೊಟ್ಟೆ ಹಜ್ ಯಾತ್ರೆ – ಗ್ಯಾರಂಟಿ ಸಮಿತಿ ವತಿಯಿಂದ ಬೀಳ್ಕೊಡುಗೆ ಹಾಗೂ ಸ್ನೇಹ ಕೂಟ – “ಯಾತ್ರೆಗೆ ಶುಭ ಹಾರೈಕೆಯ ಸoಪ್ರದಾಯಕ್ಕೆ ಮಹತ್ವವಿದೆ” : ಭರತ್ ಮುಂಡೋಡಿ

ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರು ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಹಿನ್ನಲೆಯಲ್ಲಿ ಸುಳ್ಯ ತಾಲೂಕು ಗ್ಯಾರೆಂಟಿ ಸಮಿತಿ ವತಿಯಿಂದ ಬೀಳ್ಕೊಡುವ ಸಮಾರಂಭ ಮತ್ತು ಸ್ನೇಹ ಕೂಟ ಏರ್ಪಡಿಸಲಾಗಿತ್ತು. ಗ್ಯಾರಂಟಿ ಸಮಿತಿಯ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ...

ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ವಿಖಾಯ ವತಿಯಿಂದ ಶ್ರಮದಾನ

ಬೆಳ್ಳಾರೆ ಗ್ರಾಮದ ಸರಕಾರಿ ಶಾಲೆಯ ಬಾವಿಯ ಸ್ವಚ್ಛತೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಣಿಕಂಠ ಅವರ ಕೋರಿಕೆಯ ಮೇರೆಗೆ ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ವಿಖಾಯ ವತಿಯಿಂದ ಸದಸ್ಯರು ಶ್ರಮದಾನದ ಮೂಲಕ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ವಿಖಾಯ ಸದಸ್ಯರಾದ ಜಮಾಲುದ್ದೀನ್ ಕೆ.ಎಸ್, ಅಝರುದ್ದೀನ್ ಬೆಳ್ಳಾರೆ, ಅಯ್ಯೂಬ್, ಆಬಿದ್, ರಫೀಖ್‌ ದರ್ಖಾಸ್ತು, ಶಬೀರ್ ದರ್ಖಾಸ್ತು ಶ್ರಮದಾನ...

ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ನಲ್ಲಿ ಏಳನೇ ಬಂಪರ್ ಬಹುಮಾನ ಡ್ರಾ – 1 ಲಕ್ಷ ಮೊತ್ತದ ಇಲೆಕ್ಟ್ರಾನಿಕ್ ಸಾಮಾಗ್ರಿ ಗೆದ್ದ ಮೌರ್ಯ ಕಶ್ಯಪ್

ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನದ ಏಳನೇ ತಿಂಗಳ ಡ್ರಾ ಮೇ.15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಶೋ ರೂಂ ನಲ್ಲಿ ನಡೆಯಿತು. ಕಾರ್ಡ್ ಸಂಖ್ಯೆ S 3054 ಸಂಖ್ಯೆ ಆಯ್ಕೆಗೊಂಡಿದ್ದು, ಮೌರ್ಯ ಕಶ್ಯಪ್ 1 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ಡ್ರಾ ವಿಜೇತರಾಗಿದ್ದಾರೆ. ವಿಜೇತರ ಆಯ್ಕೆಯನ್ನು...

“ಮಾರುಕಟ್ಟೆ ರೌಂಡ್ ಅಪ್” – ಸೋಮವಾರದಿಂದ ಶನಿವಾರದ ವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಒಂದು ಸಮಗ್ರ ನೋಟ ; ಈ ವಾರದ(ಮೇ.11 ರಿಂದ ಮೇ.16) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯಲ್ಲಿ ಕಂಡುಬಂದ ಏರಿಳಿತಗಳೇನು ಎಂಬುವುದನ್ನು ವಿವರವಾಗಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ – ಬರಹ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತೀ ದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಮೇ.11 ಸೋಮವಾರದಿಂದ ಮೇ.16 ಶನಿವಾರದವರೆಗೆ...
error: Content is protected !!