ಶ್ರೀ ವೀರಾಂಜನೇಯ ಮಕ್ಕಳ ತಂಡ ಅಂತರ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

ಕಟೀಲು ಮೇ.10 : ಶ್ರೀ ಕಟೀಲು ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಅಖಂಡ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ಭಜನಾ ಸ್ಪರ್ಧೆಯ ಅಂತಿಮ ಹಂತದಲ್ಲಿ ಸುಳ್ಯದ ಶ್ರೀ ವೀರಾಂಜನೇಯ ಮಕ್ಕಳ ಭಜನಾ ತಂಡ ತೃತೀಯ ಸ್ಥಾನ ಪಡೆದು 10 ಸಾವಿರ ರೂಪಾಯಿ ಬಹುಮಾನ ಪಡೆದಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸದನದಲ್ಲಿ ನಡೆದ 16 ವರ್ಷದೊಳಗಿನ ವಿಭಾಗದಲ್ಲಿ ಸುಳ್ಯದ ಬಹುಮುಖ ಪ್ರತಿಭೆ ಅಶ್ವಿಜ್ ಆತ್ರೇಯ ಇವರ ನೇತೃತ್ವ ಹಾಗೂ ಸಂಯೋಜನೆಯಲ್ಲಿ ಮೂಡಿಬಂದ ಈ ತಂಡವು ಜಿಲ್ಲೆಯ ವಿವಿಧ ಭಾಗಗಳಿಂದ ಅಂತಿಮ ಹಂತಕ್ಕೆ ಆಯ್ಕೆಯಾಗಿ ಆಹ್ವಾನಿಸಲ್ಪಟ್ಟ ಪ್ರತಿಷ್ಠಿತ ತಂಡಗಳೊಂದಿಗೆ ಸೆಣಸಿ ತೃತೀಯ ಸ್ಥಾನ ತನ್ನದಾಗಿಸಿಕೊಂಡಿತು. ಅಶ್ವಿಜ್ ಆತ್ರೇಯ ಅವರೇ ಈ ತಂಡದ ಕನಸು ಕಂಡು, ತಿಂಗಳುಗಳ ಕಾಲ ಮಕ್ಕಳಿಗೆ ತರಬೇತಿ ನೀಡಿ ವೇದಿಕೆ ಒದಗಿಸಿದವರು. ಇದರಲ್ಲಿ ಮಕ್ಕಳಿಗೆ ಮೊದಲ ವೇದಿಕೆ ಕಟೀಲ್ ನಲ್ಲಿ ಸಿಕ್ಕಿದ ಭಾಗ್ಯ ಈ ತಂಡದಲ್ಲಿ ಅಶ್ವಿಜ್ ಆತ್ರೇಯ ಜೊತೆಗೆ ಚಾರ್ವಿ‌.ಎಸ್ ಉಬರಡ್ಕ, ನಿರಂಜನ್.ಎಂ, ಪ್ರದ್ಯುಮ್ನ.ಎಂ, ಸಾರ್ಥಕ್ ಎಂ.ಬಿ ಇವರು ಗಾಯನವನ್ನು ಹಾಗೂ ಹಾರ್ಮೋಯಿನಿಯಂ ವಿನೋದ್ ಜಾಲ್ಸೂರು, ತಬಲ ವಿಜಯ್ ಕುಮಾರ್ ಮೆನಾಲ ಇವರು ನೀಡಿರುತ್ತಾರೆ. ಅಶ್ವಿಜ್ ಇವರು ಗಾನಸಿರಿ ಕಿರಣ್ ಕುಮಾರ್ ಮತ್ತು ಶ್ರೀ ಲಕ್ಷ್ಮೀ ರವರಲ್ಲಿ ಸುಗಮ ಸಂಗೀತವನ್ನು ಮತ್ತು ಜಿ ಕನ್ನಡ ಖ್ಯಾತಿಯ ಶ್ರೀ ಹರ್ಷ ಮೈಸೂರು ಹಾಗೂ ಅಶ್ವಿನಿ ಬೆಂಗಳೂರು ಇವರಲ್ಲಿ  ಸಂಗೀತವನ್ನು ಕಲಿಯುತ್ತಿದ್ದಾರೆ. ಕರ್ನಾಟಿಕ್ ಸಂಗೀತ ವನ್ನು ಕಾಂಚನ ಈಶ್ವರ್ ಭಟ್ ಇವರಲ್ಲಿ ಕಲಿಯಿತಿದ್ದಾರೆ. ಈ ಪುಟ್ಟ ಮಕ್ಕಳ ವಿಜೇತ ತಂಡಕ್ಕೆ ₹10,000 ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಸಂಘಟಕರು ವಿತರಿಸಿದರು. ತಂಡದ ಪುಟಾಣಿಗಳು ಸಾಂಪ್ರದಾಯಿಕ ಹಳದಿ-ಬಿಳಿ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. 2024 ರಲ್ಲಿ ಮೂಡಬಿದಿರೆಯಲ್ಲಿ ನಡೆದ ಭಜನಾ ಸ್ಪರ್ಧೆಯಲ್ಲಿ ಶ್ರೀ ವೀರಾಂಜನೇಯ ತಂಡವು ಅಂತರ್ ಜಿಲ್ಲಾ ಮಟ್ಟದಲ್ಲಿ ಸಮಾಧಾನಕರ ಬಹುಮಾನ 2024 ರಲ್ಲಿ ಪಡೆದಿತ್ತು. ಇದು ಈ ತಂಡದ ಮೊದಲ ಹೆಜ್ಜೆ ಅಂದಿನಿಂದ ಎಲೆ ಮರೆಯ ಆಸಕ್ತ ಮಕ್ಕಳಿಗೆ ಭಜನೆ ಹೇಳಿ ಕೊಟ್ಟು ವೇದಿಕೆ ಒದಗಿಸುವ ಕೆಲಸ ಅಶ್ವಿಜ್ ನವರು ಸತತ ಎರಡು ವರುಷಗಳಿಂದ ಮಾಡುತ್ತಾ ಬಂದಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading