ಶಾಹುಲ್ ಹಮೀದ್ ಕುತ್ತಮೊಟ್ಟೆ ಹಜ್ ಯಾತ್ರೆ – ಗ್ಯಾರಂಟಿ ಸಮಿತಿ ವತಿಯಿಂದ ಬೀಳ್ಕೊಡುಗೆ ಹಾಗೂ ಸ್ನೇಹ ಕೂಟ – “ಯಾತ್ರೆಗೆ ಶುಭ ಹಾರೈಕೆಯ ಸoಪ್ರದಾಯಕ್ಕೆ ಮಹತ್ವವಿದೆ” : ಭರತ್ ಮುಂಡೋಡಿ

ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರು ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಹಿನ್ನಲೆಯಲ್ಲಿ ಸುಳ್ಯ ತಾಲೂಕು ಗ್ಯಾರೆಂಟಿ ಸಮಿತಿ ವತಿಯಿಂದ ಬೀಳ್ಕೊಡುವ ಸಮಾರಂಭ ಮತ್ತು ಸ್ನೇಹ ಕೂಟ ಏರ್ಪಡಿಸಲಾಗಿತ್ತು. ಗ್ಯಾರಂಟಿ ಸಮಿತಿಯ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುoಡೋಡಿ “ಯಾತ್ರೆಗೆ ತೆರಳುವವರಿಗೆ ಶುಭ ವಿದಾಯ ಏರ್ಪಡಿಸುವುದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ, ತನ್ನ ಧರ್ಮವನ್ನು ಪ್ರೀತಿಸಿ ಅನುಸರಿಸುವುದರೊಂದಿಗೆ ಇತರ ಧರ್ಮ ಮತ್ತು ಅದರ ಆಚರಣೆಯನ್ನು ಗೌರವಿಸಬೇಕು, ಶಾಹುಲ್ ಹಮೀದ್ ರವರ ಸಮಾಜ ಮುಖಿ ಕಾರ್ಯ ಅಭಿನಂದನೀಯ” ಎಂದರು. ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ವಿಷಯ ಪ್ರಸ್ತಾವನೆ ಮಾಡಿದರು.
ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಅಡ್ವೋಕೇಟ್ ಮೂಸ ಪೈoಬಚ್ಚಾಲ್, ಭವಾನಿ ಶಂಕರ್ ಕಲ್ಮಡ್ಕ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಶುಭ ಹಾರೈಸಿ ಮಾತನಾಡಿದರು. ಶಶಿಧರ್ ಎಂ.ಜೆ ಕಾರ್ಯಕ್ರಮ ನಿರೂಪಿಸಿದರು. 
ಗ್ಯಾರಂಟಿ ಸಮಿತಿ ಸದಸ್ಯರು, ತಾಲೂಕು ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading