- Tuesday
- May 26th, 2026
ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಮುಂಡೋಕಜೆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಇಲ್ಲಿನ ನಿವಾಸಿಗಳು ಚುನಾವಣಾ ಬಹಿಷ್ಕಾರದ ನಿರ್ಧಾರವನ್ನು ಕೈಗೊಂಡಿದ್ದರು. ತಾಲೂಕು ಪಂಚಾಯತ್ ಇ.ಓ ಅವರ ಮುಖಾಂತರ ಇಲ್ಲಿನ ಸಮಸ್ಯೆಗಳನ್ನು ಅರಿತ ಕೆ.ಪಿ.ಸಿ.ಸಿ ಸದಸ್ಯರಾದ ಜಿ.ಕೃಷ್ಣಪ್ಪ ರವರು ಗ್ರಾಮ ಪಂಚಾಯತ್ ಹಾಗೂ ಸ್ಥಳೀಯರನ್ನು ಸಂಪರ್ಕಿಸಿ ಕೊಳವೆ ಬಾವಿ ಕೊರೆಸಲು ಸ್ಥಳ ನಿಗದಿಪಡಿಸಲು ಗ್ರಾಮ ಪಂಚಾಯತ್ ನ...
ಸಮಸ್ತ ಕೇರಳ ಸುನ್ನೀ ಜಂಇಯತುಲ್ ಮುಅಲ್ಲಿಮೀನ್(ಎಸ್.ಕೆ.ಜೆ.ಎಂ)ಇದರ ಎರಡು ಸಮಿತಿಗಳಿಗೆ ಮುಹಮ್ಮದ್ ನವವಿ ಮುಂಡೋಳೆ ಆಯ್ಕೆ
ಸಮಸ್ತ ಕೇರಳ ಸುನ್ನೀ ಜಂಇಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿ ಸದಸ್ಯರಾಗಿ ಮತ್ತು ಇದರ ದ.ಕ.ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸುಳ್ಯ ತಾಲೂಕು ಎಸ್.ಕೆ.ಜೆ.ಎಂ ಅಧ್ಯಕ್ಷ,ಬೆಳ್ಳಾರೆಯ ಹಿದಾಯತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸದ ಮುಖ್ಯೋಪಾಧ್ಯಾಯ ಮುಹಮ್ಮದ್ ನವವಿ ಮುಂಡೋಳೆ ಇವರನ್ನು ಸಂಬಂಧಪಟ್ಟವರು ಆಯ್ಕೆ ಮಾಡಿದ್ದಾರೆ.ಇವರು ಕಳೆದ ಹತ್ತು ವರುಷಗಳಿಗೆ ಹತ್ತಿರ ಬೆಳ್ಳಾರೆಯ ಹಿದಾಯತುಲ್ ಇಸ್ಲಾಂ ಹೈಯರ್ ಸೆಕೆಂಡರಿ...
ಸುಬ್ರಹ್ಮಣ್ಯ : “ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಮೊಬೈಲ್ ನ ಬಗ್ಗೆ ಆಕರ್ಷಿತರಾಗುವುದು ಸರ್ವೇಸಾಮಾನ್ಯ ವಾಗಿದೆ. ಮೊಬೈಲ್ ವ್ಯಾಮೋಹ ತ್ಯಜಿಸಿ ಗುರಿಯತ್ತ ಸಾಗಿದರೆ ಬದುಕು ಉಜ್ವಲವಾಗುತ್ತದೆ. ಆಧುನಿಕ ತಂತ್ರಜ್ಞಾನಗಳನ್ನು ನಮ್ಮ ಜ್ಞಾನಾಭಿವೃದ್ದಿಗೆ ಪೂರಕವಾಗಿ ಉಪಯೋಗಿಸುವತ್ತ ಯುವ ವಿದ್ಯಾರ್ಥಿಗಳು ಮುಂದಡಿಯಿಡಬೇಕು” ಎಂದು ಹಿರಿಯ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಶ್ರೀಮತಿ ರೇಖಾರಾಣಿ ಸೋಮಶೇಖರ್ ಹೇಳಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ...
ಮಾಣಿ-ಮೈಸೂರು ಹೆದ್ದಾರಿಯಲ್ಲಿ ಪೆರಾಜೆ ಸಮೀಪ ವ್ಯಕ್ತಿಯೊಬ್ಬ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ಘಟನೆ ಮೇ.26 ರಂದು ಮದ್ಯಾಹ್ನ ಸಂಭವಿಸಿದೆ. ಈ ಘಟನೆಯನ್ನು ಕಾರಿನ ಹಿಂಭಾಗದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಮಾಡಿದ್ದಾರೆ. ಅಡ್ಡಾದಿಡ್ಡಿಯಾಗಿ ಚಲಿಸುತ್ತಿದ್ದ ಕಾರು ಹಿಂಬದಿಯಿಂದ ಬರುತ್ತಿದ್ದ ಟಿ.ಟಿ ವಾಹನಕ್ಕೆ ಸೈಡ್ ಕೊಡಲು ಹೋಗಿ ರಸ್ತೆ ಬದಿಯ ಮೋರಿಗೆ...
ಅಮರ ಸುಳ್ಯ ಸುದ್ದಿ E ಪತ್ರಿಕೆ ಓದಲು ಈ ಲಿಂಕ್ ಬಳಸಿ https://epaper.amarasuddi.com/ಕ್ಷಣ ಕ್ಷಣದ ಸುದ್ದಿಗಳಿಗಾಗಿ www.amarasuddi.com ವೀಕ್ಷಿಸಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕನಕಮಜಲು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಇಂದು ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಗುತ್ತಿಗಾರು ಪೇಟೆಯ ಮುಖ್ಯ ರಸ್ತೆಯಲ್ಲಿರುವ ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಇಜಾಮ್ ಎಂಬುವವರ ಮಾಲೀಕತ್ವದ ಅಡಿಕೆ ಅಂಗಡಿಯಿಂದ ಹಾಡಹಗಲೇ 1 ಲಕ್ಷ ರೂಪಾಯಿ ನಗದು ಕಳ್ಳತನವಾದ ಘಟನೆ ಇದೀಗ ವರದಿಯಾಗಿದ್ದು, ಸುಬ್ರಹ್ಮಣ್ಯ ಪೋಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ದಿನಾಂಕ : 26 ಮೇ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 26) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 415 ರಿಂದ...
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197 ದಿನಾಂಕ:26:05:2026 ಮಂಗಳವಾರ *01,🐏ಮೇಷ ರಾಶಿ🐏*📃,ದೂರ ಪ್ರಯಾಣಗಳಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.ಬಂಧು-ಮಿತ್ರರೊಂದಿಗೆ ಆಕಸ್ಮಿಕ ಕಲಹಗಳು ಉಂಟಾಗುತ್ತವೆ. ವೃತ್ತಿ ಹಾಗೂ ಉದ್ಯೋಗದಲ್ಲಿಇತರರೊಂದಿಗೆ.ವಿವಾದಗಳಿಂದ ದೂರವಿರುವುದು ಒಳಿತು. ದೈವಚಿಂತನೆ ಹೆಚ್ಚಾಗುತ್ತದೆ,ಗಮನಿಸಿ:- ವ್ಯಾಪಾರ ಹೆಚ್ಚು ಅನುಕೂಲಕರವಾಗಿರುವುದಿಲ್ಲಪರಿಹಾರ:-ಯಾವುದಾದರೂ ಒಂದು ದೇವಸ್ಥಾನಕ್ಕೆ ಭೇಟಿ ಕೊಡಿ,*02,🐂ವೃಷಭ ರಾಶಿ🐂*📃,ಸ್ಥಿರಾಸ್ತಿ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳು...
ಸುಬ್ರಹ್ಮಣ್ಯ : “ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುವುದು ಭಾಗ್ಯ. ಭಗವಂತನ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುವ ಶ್ರೇಷ್ಠ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು.ಶ್ರೀ ದೇವರ ಪ್ರಸಾದ ಬೋಜನ ಸೇರಿದಂತೆ ಅಧ್ಯಾಯನಕ್ಕೆ ಬೇಕಾದ ಸಕಲ ಸೌಕರ್ಯಗಳು ಶ್ರೀ ದೇವರ ಕೃಪೆಯಾಗಿದೆ. ಕಳೆದ ಐದು ದಶಕಗಳಿಂದ ಅಸಂಖ್ಯಾತ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ ಔನತ್ಯ...
ವರ್ಲ್ಡ್ ಸ್ಕಿಲ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರುವ ಭಾರತ ಸರಕಾರದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ ಭಾರತ್ ಸೇವಕ್ ಸಮಾಜದ ಅಂಗಿಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ 2025-26ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ(ಡಿ. ಎಂ.ಇ.ಡಿ) ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಪರೀಕ್ಷೆಗೆ ಹಾಜರಾದ ಎಲ್ಲಾ 28 ವಿದ್ಯಾರ್ಥಿ...
Loading posts...
All posts loaded
No more posts
