ಇಂದಿನ(ಏಪ್ರಿಲ್ 29) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ಮತ್ತು ಕಾಳುಮೆಣಸು ದರದಲ್ಲಿ ಏರಿಕೆ ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 29 ಏಪ್ರಿಲ್ 2026
ವಾರ : ಬುಧವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 29) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 290-445-473/475
ಹಳೆ ಅಡಿಕೆ : 420-450-547/550
ಡಬಲ್ ಚೋಲ್ : 420-450-547/550
ಫಟೋರ : 280-400 ರಿಂದ 405
ಉಳ್ಳಿಗಡ್ಡೆ : 165-290
ಕರಿಗೋಟು : 230-275
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ)
ನಿನ್ನೆ ಏಪ್ರಿಲ್ 28ಕ್ಕೆ ಹೋಲಿಸಿದರೆ ಇಂದು ಏಪ್ರಿಲ್ 29ರಂದು ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ಏರಿಳಿತ ದಾಖಲಾಗಿಲ್ಲ. ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ದರಗಳು ಇಂದೂ ಕೂಡ ಸ್ಥಿರತೆಯನ್ನು ಕಾಯ್ದುಕೊಂಡಿವೆ. ಫಟೋರ, ಉಳ್ಳಿಗಡ್ಡೆ ಮತ್ತು ಕರಿಗೋಟು ಬೆಲೆಗಳು ಕೂಡ ಯಥಾಸ್ಥಿತಿಯಲ್ಲಿ ಮುಂದುವರಿದಿವೆ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 585-685
ಹಸಿ ಕೊಕ್ಕೋ : 70-100
ಒಣ ಕೊಕ್ಕೋ : 270-310
ಕೊಬ್ಬರಿ : 150-170
ಕಾಳುಮೆಣಸು ದರ ಏರಿಕೆ : ಇಂದು ಏಪ್ರಿಲ್ 29ರಂದು ಕಾಳುಮೆಣಸು ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡುಬಂದಿದೆ. ನಿನ್ನೆ ಏಪ್ರಿಲ್ 28ರಂದು ಗರಿಷ್ಠ 680 ರೂಪಾಯಿ ಇದ್ದ ಕಾಳುಮೆಣಸು ಇಂದು ಏಪ್ರಿಲ್ 29ರಂದು ಪ್ರತಿ ಕೆಜಿಗೆ 5 ರೂಪಾಯಿ ಏರಿಕೆ ಕಂಡು 685 ರೂಪಾಯಿಗಳಿಗೆ ತಲುಪಿದೆ.
ಕೊಬ್ಬರಿ ದರದಲ್ಲಿ ಇಳಿಕೆ : ಮತ್ತೊಂದೆಡೆ ಕೊಬ್ಬರಿ ಬೆಲೆಯಲ್ಲಿ ಇಂದು ಏಪ್ರಿಲ್ 29ರಂದು ಕುಸಿತ ದಾಖಲಾಗಿದೆ. ನಿನ್ನೆ ಏಪ್ರಿಲ್ 28ರಂದು ಗರಿಷ್ಠ 190 ರೂಪಾಯಿ ಇದ್ದ ಕೊಬ್ಬರಿ ದರವು ಇಂದು ಏಪ್ರಿಲ್ 29ರಂದು 20 ರೂಪಾಯಿಗಳಷ್ಟು ಇಳಿಕೆ ಕಂಡು 170 ರೂಪಾಯಿಗಳಿಗೆ ಕುಸಿದಿದೆ.

ರಬ್ಬರ್ ಧಾರಣೆ
ಗ್ರೇಡ್ : 242.50
ಲಾಟ್ : 210.00
ಸ್ಕ್ರ್ಯಾಪ್ ಪ್ರಥಮ ದರ್ಜೆ : 148.00
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 139.00
ದರ ಏರಿಕೆಯ ವಿವರ: ರಬ್ಬರ್ ಬೆಲೆಯಲ್ಲಿ ಇಂದು ಕೂಡ ಗಮನಾರ್ಹ ಏರಿಕೆ ದಾಖಲಾಗಿದೆ. ನಿನ್ನೆ ಏಪ್ರಿಲ್ 28ರಂದು 240.00 ರೂಪಾಯಿ ಇದ್ದ ಗ್ರೇಡ್ ರಬ್ಬರ್ ಬೆಲೆಯು ಇಂದು ಏಪ್ರಿಲ್ 29ರಂದು ಪ್ರತಿ ಕೆಜಿಗೆ 2.50 ರೂಪಾಯಿಗಳಷ್ಟು ಏರಿಕೆ ಕಂಡು 242.50 ರೂಪಾಯಿಗಳ ಮಟ್ಟಕ್ಕೆ ತಲುಪಿದೆ.
ಲಾಟ್ ಮತ್ತು ಸ್ಕ್ರಾಪ್ ಧಾರಣೆ: ಕೇವಲ ಗ್ರೇಡ್ ಮಾತ್ರವಲ್ಲದೆ, ಲಾಟ್ ರಬ್ಬರ್ ಬೆಲೆಯಲ್ಲೂ ಇಂದು 2.50 ರೂಪಾಯಿಗಳ ಭರ್ಜರಿ ಏರಿಕೆ ಕಂಡುಬಂದಿದ್ದು 210 ರೂಪಾಯಿಗಳಲ್ಲಿ ವ್ಯವಹಾರ ನಡೆಸುತ್ತಿದೆ. ಇನ್ನು ಸ್ಕ್ರ್ಯಾಪ್ (Scrap I & II) ವಿಭಾಗದಲ್ಲೂ ತಲಾ 1 ರೂಪಾಯಿ ಏರಿಕೆ ದಾಖಲಾಗಿದ್ದು, ರಬ್ಬರ್‌ನ ಎಲ್ಲಾ ಶ್ರೇಣಿಗಳು ಇಂದು ಏರಿಕೆ ಹಾದಿಯಲ್ಲಿವೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading