ಇಂದಿನ(ಏಪ್ರಿಲ್ 28) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಏರಿಕೆ ಹಾದಿಯಲ್ಲಿ ರಬ್ಬರ್ ಧಾರಣೆ ; ಲಾಟ್ ಮತ್ತು ಸ್ಕ್ರಾಪ್ ಬೆಲೆಯಲ್ಲೂ ಚೇತರಿಕೆ! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 28 ಏಪ್ರಿಲ್ 2026
ವಾರ : ಮಂಗಳವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 28) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 290-445-473/475
ಹಳೆ ಅಡಿಕೆ : 420-450-547/550
ಡಬಲ್ ಚೋಲ್ : 420-450-547/550
ಫಟೋರ : 280-400 ರಿಂದ 405
ಉಳ್ಳಿಗಡ್ಡೆ : 165-290
ಕರಿಗೋಟು : 230-275
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ)
ನಿನ್ನೆ ಏಪ್ರಿಲ್ 27ಕ್ಕೆ ಹೋಲಿಸಿದರೆ ಇಂದು ಏಪ್ರಿಲ್ 28ರಂದು ಅಡಿಕೆ ಧಾರಣೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಹೊಸ ಅಡಿಕೆ, ಹಳೆ ಅಡಿಕೆ ಮತ್ತು ಡಬಲ್ ಚೋಲ್ ದರಗಳು ಸ್ಥಿರತೆಯನ್ನು ಕಾಯ್ದುಕೊಂಡಿವೆ. ಇನ್ನುಳಿದಂತೆ ಫಟೋರ, ಉಳ್ಳಿಗಡ್ಡೆ ಮತ್ತು ಕರಿಗೋಟು ದರಗಳು ಕೂಡ ಯಥಾಸ್ಥಿತಿಯಲ್ಲಿ ಮುಂದುವರಿದಿವೆ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 580-680
ಹಸಿ ಕೊಕ್ಕೋ : 70-100
ಒಣ ಕೊಕ್ಕೋ : 270-310
ಕೊಬ್ಬರಿ : 150-190
ನಿನ್ನೆ ಏಪ್ರಿಲ್ 27ಕ್ಕೆ ಹೋಲಿಸಿದರೆ ಇಂದು ಏಪ್ರಿಲ್ 28ರಂದು ಕಾಳುಮೆಣಸು, ಕೊಕ್ಕೋ ಮತ್ತು ಕೊಬ್ಬರಿ ದರಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ನಿನ್ನೆ ಏಪ್ರಿಲ್ 27ರಂದು ಇದ್ದ ದರವೇ ಇಂದು ಏಪ್ರಿಲ್ 28ರಂದು ಕೂಡ ಮುಂದುವರಿದಿದೆ.

ರಬ್ಬರ್ ಧಾರಣೆ
ಗ್ರೇಡ್ : 240.00
ಲಾಟ್ : 207.50
ಸ್ಕ್ರ್ಯಾಪ್ ಪ್ರಥಮ ದರ್ಜೆ : 147.00
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 138.00
ರಬ್ಬರ್ ಮಾರುಕಟ್ಟೆಯಲ್ಲಿ ಇಂದು ಸಕಾರಾತ್ಮಕ ಬದಲಾವಣೆ ದಾಖಲಾಗಿದೆ. ನಿನ್ನೆ ಏಪ್ರಿಲ್ 27ರಂದು 238 ರೂಪಾಯಿ ಇದ್ದ ಗ್ರೇಡ್ ರಬ್ಬರ್ ಬೆಲೆಯು ಇಂದು ಏಪ್ರಿಲ್ 28ರಂದು ಪ್ರತಿ ಕೆಜಿಗೆ 2 ರೂಪಾಯಿಗಳಷ್ಟು ಏರಿಕೆ ಕಂಡು 240 ರೂಪಾಯಿಗಳ ಗಡಿಯನ್ನು ತಲುಪಿದೆ.
ಕೇವಲ ಗ್ರೇಡ್ ರಬ್ಬರ್ ಮಾತ್ರವಲ್ಲದೆ, ಲಾಟ್ ರಬ್ಬರ್ ಬೆಲೆಯಲ್ಲಿ 50 ಪೈಸೆ ಏರಿಕೆಯಾಗಿದ್ದರೆ, ಸ್ಕ್ರ್ಯಾಪ್(Scrap I & II) ವಿಭಾಗದಲ್ಲೂ ತಲಾ 1 ರೂಪಾಯಿ ಏರಿಕೆ ಕಂಡುಬಂದಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading