Ad Widget

ನಮ್ಮ ಸರಕಾರದ ಜನಪರ ಯೋಜನೆಗಳು ಜಿಲ್ಲೆಯಲ್ಲಿ ಮತಗಳಾಗಿ ಪರಿವರ್ತನೆ ಆಗಲಿದೆ – ಪಿ ಸಿ ಜಯರಾಮ್ : 



ಬದುಕು ಮತ್ತು ಭಾವನಾತ್ಮಕ ವಿಷಯಗಳ ನಡುವೆ ಈ ಬಾರಿಯ ಚುನಾವಣೆ – ಭರತ್ ಮುಂಡೋಡಿ

ಲೋಕಸಭಾ ಚುನಾವಣೆಗೆ ದಿನ ನಿಗದಿಯಾಗಿದ್ದು, ಎರಡನೆ ಹಂತದ ಚುನಾವಣೆಯಲ್ಲಿ ನಡೆಯಲಿದ್ದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಮಾ. 30 ರಂದು ಸುಳ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ ತಿಳಿಸಿದರು.


ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದಲ್ಲಿ ಸರಕಾರ ಬಂದ ದಿನದಿಂದ ಜನಪರ ಆಡಳಿತ ನೀಡುತ್ತಾ ಬಂದಿದ್ದು ಪಂಚ ಗ್ಯಾರಂಟಿಗಳನ್ನು ನೇರವಾಗಿ ಜನರಿಗೆ ತಲುಪಿಸುವ ಮೂಲಕ ಕೊಟ್ಟ ಮಾತಿನಂತೆ ನಡೆಯುತ್ತಿದ್ದೆ. ಅಲ್ಲದೇ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಸರ್ವ ಸಮ್ಮತದ ನಾಯಕರಾಗಿದ್ದಾರೆ ಎಂದು ಅವರು ಹೇಳಿದರು. ಅಲ್ಲದೇ ಪದ್ಮರಾಜ್ ರಾಮಯ್ಯರ ಮಾ.30 ರಂದು ಮುಂಜಾನೆ ಚೆನ್ನಕೇಶವ ದೇವಸ್ಥಾನ , ಕಲ್ಕುಡ ದೇವಸ್ಥಾನ , ಮೊಗರ್ಪಣೆ ಮಸೀದಿ ಭೇಟಿ, ಸೈಂಟ್ ಬ್ರೀಜೀಡ್ ಚರ್ಚ್, ನಂತರ ಸುಳ್ಯದ ಶಿಕ್ಷಣ ಕ್ರಾಂತಿಯ ಮಹಾನ್ ಚೇತನ ಡಾ. ಕೆ ವಿ ವೆಂಕಟರಮಣ ಗೌಡರ ಪುತ್ಥಳಿಗೆ ಹಾರಾರ್ಪಣೆ, ಬಳಿಕ ಕೆವಿಜಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲದೇ ಕಛೇರಿ ಉದ್ಘಾಟನೆ ಕಾರ್ಯಕ್ರಮವು ಅಂದೇ ನಡೆಯಲಿದೆ. ಈ ಸಂದರ್ಭದಲ್ಲಿ ರಾಜ್ಯ ನಾಯಕರುಗಳಾದ ಮಂಜುನಾಥ್ ಭಂಡಾರಿ , ಬಿ ರಾಮನಾಥ ರೈ , ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಸೇರಿದಂತೆ ಪ್ರಮುಖ ನಾಯಕರುಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಭರತ್ ಮುಂಡೋಡಿ ಮಾತನಾಡುತ್ತಾ ನಮ್ಮ ಸರಕಾರ ಸಂವಿಧಾನ ಬದ್ದವಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿದ್ದು ಇದೀಗ ಜಿಲ್ಲೆಯಲ್ಲಿ ಸುಳ್ಯವು ಎರಡನೇ ಸ್ಥಾನದಲ್ಲಿವೆ ಎಂದು ಹೇಳಿದರು ಅಲ್ಲದೆ ಮುಂದಿನ ದಿನಗಳಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಹುಡುಕಿ ಅವುಗಳನ್ನು ಪರಿಹರಿಸುವ ಕೆಲಸ‌ಕಾರ್ಯಗಳನ್ನು ಮಾಡುತ್ತೇವೆ ಎಂದರು.ಅಲ್ಲದೆ ಈ ಬಾರಿಯ ಚುನಾವಣೆಯು ಬದುಕು ಮತ್ತು ಭಾವನಾತ್ಮಕ ವಿಚಾರಗಳ ನಡುವೆ ನಡೆಯತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಜಿ ಕೃಷ್ಣಪ್ಪ , ಜಯಪ್ರಕಾಶ್ ರೈ , ಗೀತಾ ಕೋಲ್ಚಾರು , ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಸರ್ವೊತ್ತಮ ಗೌಡ , ಮುಸ್ತಾಫ , ಸರಸ್ವತಿ ಕಾಮತ್ , ಅರೆಭಾಷೆ ಅಕಾಡಮಿ ಅಧ್ಯಕ್ಷರಾದ ಸದಾನಂದ ಮಾವಜಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಈ ಸಂದರ್ಭದಲ್ಲಿ ಪ್ರಮುಖರಾದ
ಪಿ ಎಸ್ ಗಂಗಾಧರ , ರಂಜಿತ್ ರೈ ಮೇನಾಲ,  ಪ್ರವೀಣ ರೈ ಮರುವಂಜ , ಶಾಫಿ ಕುತ್ತಮೊಟ್ಟೆ , ಶಂಶುದ್ದಿನ್ , ರಾಧಾಕೃಷ್ಣ ಬೊಳ್ಳೂರು , ಗಂಗಾಧರ ಮೇನಾಲ , ರಾಜು ಪಂಡಿತ್ , ಸುಜಯ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!