Ad Widget

ಅಯ್ಯನಕಟ್ಟೆ; ಶಾಲೆಯ ಬೀಗ ಮುರಿದು ನಗದು, ಟ್ಯಾಬ್  ಕಳ್ಳತನ!

ಅಯ್ಯನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳವಾದ ಘಟನೆ ವರದಿಯಾಗಿದೆ. 5000 ರೂ.ನಗದು ಹಾಗೂ ಟ್ಯಾಬ್ ಅನ್ನು ಶಾಲೆಯ ಬೀಗ ಮುರಿದು ಒಳನುಗ್ಗಿ ಕಳವುಗೈದಿದ್ದರೆ.  ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ಪೋಲಿಸ್ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಸಂಪಾಜೆ ; ಗಡಿಕಲ್ಲು ಮುಂಡಡ್ಕ -ಆಲಡ್ಕ ಭಾಗದ ರಸ್ತೆ ಕಾಂಕ್ರಿಟ್ ಕಾಮಗಾರಿ ಉದ್ಘಾಟನೆ

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು  ಅವರು ಗಡಿಕಲ್ಲು ಮುಂಡಡ್ಕ -ಆಲಡ್ಕ ಭಾಗದ ರಸ್ತೆ ಕಾಂಕ್ರಿಟ್ ಕಾಮಗಾರಿ ಉದ್ಘಾಟನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಾಹಿದ್ ರವರು ತೆಂಗಿನ ಕಾಯಿ ಒಡೆದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಸಂಪಾಜೆ ಸೊಸೈಟಿಯ ಮಾಜಿ ವ್ಯವಸ್ಥಾಪಕ...
Ad Widget

20 ವರ್ಷಗಳ ಬಳಿಕ ಸಂಭ್ರಮದಿಂದ ನಡೆಯುತ್ತಿರುವ ಪೆರ್ಣೆ ಕಳಿಯಾಟ ಮಹೋತ್ಸವ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ , ಸುಳ್ಯದಿಂದ ಹಸಿರುವಾಣಿ ಜೊತೆಗೆ ತೆರಳಿದ ಟ್ಯಾಬ್ಲೋ ನಿರ್ಮಾತೃ ಶಶಿ ಅಡ್ಕಾರ್ ಭೇಟಿ, ಗೌರವ ಸಮರ್ಪಣೆ:ಮಾ.7 : ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ ಕಾಸರಗೋಡು ಜಿಲ್ಲೆಯ ಕುಂಬ್ಳೆ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಕಳಿಯಾಟ ಮಹೋತ್ಸವವು ಮಾ.1 ರಂದು ಆರಂಭಗೊಂಡಿದ್ದು, ಮಾ.7 ರವರೆಗೆ ನಡೆಯಲಿದೆ. ಶ್ರೀ...

ಪಯಸ್ವಿನಿ ಜೇಸಿ ಸಂಸ್ಥೆಯಿಂದ ಪವರ್ ಮ್ಯಾನ್ ಸಂಗಮೇಶ್ ಗೆ  ಸೆಲ್ಯೂಟ್ ದೀ ಸೈಲೆಂಟ್ ಸ್ಟಾರ್   ಪುರಸ್ಕಾರ

ಜೆಸಿಐ ಸುಳ್ಯ ಪಯಸ್ವಿನಿ ವಿವಿಧ ವಿಭಾಗದಲ್ಲಿ ಎಲೆ ಮರೆಯ ಕಾಯಿಯಂತೆ  ಇರುವ  ಸಾಧಕರನ್ನು ಗುರುತಿಸಿ ನೀಡುವ  ದೀ ಸೈಲೆಂಟ್ ಸ್ಟಾರ್  ಪುರಸ್ಕಾರವನ್ನು  8 ವರ್ಷ ಗಳಿಂದ   ಕಲ್ಲುಗುಂಡಿ, ಸಂಪಾಜೆಯ ಪರಿಸರದ ಜನತೆಯ ಕರೆಗೆ ಸ್ಪಂದಿಸುತ್ತಾ ನಿಷ್ಟಾವಂತ ಸೇವೆಯನ್ನು ಸಲ್ಲಿಸುತ್ತಿರುವ  ಸುಳ್ಯ ಮೆಸ್ಕಾಂ ಉಪವಿಭಾಗದ ಅರಂತೋಡು ಶಾಖೆ ಯಲ್ಲಿ ಪವರ್   ಮ್ಯಾನ್   ಸಂಗಮೇಶ್ ತಾಸಂಗಾವ  ಇವರಿಗೆ ಸೈಲೆಂಟ್...

ಡಾ. ಅನುರಾಧಾ ಕುರುಂಜಿ ಮತ್ತು ಸಹನಾ ಕಾಂತಬೈಲು “ಜಿ ಎಲ್ ವುಮನ್ ಆಫ್ ಗೋಲ್ಡ್ “ ಆಗಿ ಆಯ್ಕೆ

ಪ್ರಸಿದ್ಧ ಚಿನ್ನಾಭರಣ ಮಳಿಗೆಗಳಲ್ಲೊಂದಾದ  ಜಿ ಎಲ್ ಆಚಾರ್ಯ ಜ್ಯುವೆಲರ್ಸ್ ನವರು ಬೇರೆ ಬೇರೆ ಕಡೆಗಳಲ್ಲಿ  ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ವರ್ಷ ಮಹಿಳಾ ದಿನಾಚರಣೆ ಪ್ರಯುಕ್ತ  ತಾಲೂಕಿನ ಸಾಧಕ ಮಹಿಳೆಯರನ್ನು  ಗುರುತಿಸಿ  “ಜಿ ಎಲ್ ವುಮನ್ ಆಫ್ ಗೋಲ್ಡ್” ಎಂದು ತಮ್ಮೆಲ್ಲಾ ಶಾಖೆಗಳಿಂದ ಈರ್ವರನ್ನು ಆಯ್ಕೆ ಮಾಡಿದ್ದು ಸುಳ್ಯ ಶಾಖೆಯಿಂದ ಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು...
error: Content is protected !!