
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಮಾ.01 ಶುಕ್ರವಾರ ಸೂರ್ಯೋದಯದಿಂದ ಮಾ.02 ಶನಿವಾರ ಸೂರ್ಯೋದಯದವರೆಗೆ ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ ಹಾಗೂ ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇವರ ಸಂಯುಕ್ತ ಆಶ್ರಯದಲ್ಲಿ 22ನೇ ವರ್ಷದ ಏಕಾಹ ಭಜನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ.