ಬದುಕಿರುವಾಗಲೇ ಖುಷಿಯಿಂದ ಬದುಕಿ, ಸಾವು ಹೇಳಿ-ಕೇಳಿ ಬರುವುದಿಲ್ಲ, ಸತ್ತ ಮೇಲೆ ಈ ಬದುಕೇ ಇರುವುದಿಲ್ಲ…
ಜೊತೆಗಿರುವಾಗಲೇ ಎಲ್ಲರನ್ನೂ ಪ್ರೀತಿಸಿ, ದೂರವಾದ ಮೇಲೆ ದುಃಖಿಸಿದರೆ ಪ್ರಯೋಜನವೇ ಇರುವುದಿಲ್ಲ…
ಆದಷ್ಟು ಕೋಪ-ಸಿಟ್ಟುಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಿ, ಒಂದು ಕ್ಷಣದ ಸಿಟ್ಟು ಅದೆಷ್ಟೋ ಸಂಬಂಧಗಳನ್ನು ದೂರ ಮಾಡಿದ ಉದಾಹರಣೆಗಳಿವೆಯಲ್ಲಾ…!
ನಿಮ್ಮ ಕಣ್ಣೆದುರು ಇತರರಿಗೆ ಕಷ್ಟ ಬಂದಾಗ ಅವರ ಕಷ್ಟಗಳಿಗೆ ಕೈ ಜೋಡಿಸಿ, ನಾವು ಇತರರ ಕಷ್ಟಕ್ಕೆ ಕೈ ಜೋಡಿಸಿದರೆ ಮಾತ್ರ ಇತರರು ನಮ್ಮ ಕಷ್ಟಕ್ಕೆ ಕೈ ಜೋಡಿಸುವುದಲ್ಲವೇ…!
ಬದುಕಿನಲ್ಲಿ ಎಷ್ಟೇ ಎತ್ತರಕ್ಕೇರಿದರೂ ಅಹಂಕಾರವನ್ನು ಪಡದಿರಿ, ಅಹಂಕಾರವೇ ಅವನತಿಗೆ ಕಾರಣ ಎಂಬ ಮಾತನ್ನು ಮರೆಯದಿರಿ…
ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ತಾಳ್ಮೆಯಿಂದ ಮುಂದುವರಿಯಿರಿ, ತಾಳ್ಮೆಯಿದ್ದರೆ ಮಾತ್ರ ಬಾಳ್ವೆ ನಡೆಸಲು ಸಾಧ್ಯ ಎನ್ನುವ ಮಾತನ್ನು ಮರೆಯದಿರಿ…
ಬದುಕು ಕಲಿಸುವ ಪಾಠಗಳನ್ನು ಕಲಿಯುತ್ತಾ ಸಾಗುತ್ತಿರಿ, ಬದುಕು ಕಲಿಸುವ ಪಾಠಗಳನ್ನು ಕಲಿತವರು ಮಾತ್ರ ಬದುಕಿನಲ್ಲಿ ಯಶಸ್ವಿಯಾಗುವರು, ನೆನಪಿನಲ್ಲಿಡಿ…
✍️ಉಲ್ಲಾಸ್ ಕಜ್ಜೋಡಿ