Ad Widget

ಕೊಲ್ಲಮೊಗ್ರ : ಕೆ.ವಿ.ಜಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉದಯ ಶಿವಾಲ – ಕಾರ್ಯದರ್ಶಿಯಾಗಿ ನೀಲಾವತಿ ತಂಬಿನಡ್ಕ

ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರ ಇದರ ಹಿರಿಯ ವಿದ್ಯಾರ್ಥಿ ಸಂಘದ ಸಭೆಯು ಕೆ.ವಿ.ಜಿ ಪ್ರೌಢಶಾಲೆಯಲ್ಲಿ ಫೆ.24 ರಂದು ನಡೆಯಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಕಮಲಾಕ್ಷ ಮುಳ್ಳುಬಾಗಿಲು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

. . . . . . . . .
ನೀಲಾವತಿ ತಂಬಿನಡ್ಕ

ನೂತನ ಅಧ್ಯಕ್ಷರಾಗಿ ಉದಯ ಶಿವಾಲ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ತಾರನಾಥ ಪೈಕ ಹಾಗೂ ಶೋಭ ಸುಕುಮಾರ್, ಕಾರ್ಯದರ್ಶಿಯಾಗಿ ನೀಲಾವತಿ ತಂಬಿನಡ್ಕ, ಜತೆ ಕಾರ್ಯದರ್ಶಿಯಾಗಿ ದಿಲೀಪ್ ಶಿವಾಲ, ಚೇತನ್ ಅಂಜನಕಜೆ , ಖಂಜಾಜಿಯಾಗಿ ವಿದ್ಯಾಶ್ರೀ ಚಾಳೆಪ್ಪಾಡಿ ಆಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ಸುರೇಶ್ ಪಿ.ಕೆ. ಆಯ್ಕೆಯಾದರು. ವೆಂಕಟರಮಣ ಕೊಪ್ಪಡ್ಕ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕರಾದ ಬಾಲಕೃಷ್ಣ, ರಾಜೇಶ್ ಮರ್ಕಂಜ, ಚಂದ್ರು ಬಿ, ಲೋಕನಾಥ ಪಿ,ಸಂಧ್ಯರಾಣಿ, ಜಯಶ್ರೀ ಕೆ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading