ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಬೆಂಕಿ ಬಳಸಿ ಮತ್ತು ಬೆಂಕಿ ಬಳಸದೇ ಅಡುಗೆ ತಯಾರಿ ನಡೆಯಿತು. ಶಾಲೆಯ ಸ್ಕೌಟ್ಸ್ 28 ಮತ್ತು ಗೈಡ್ಸ್ 16 ವಿದ್ಯಾರ್ಥಿಗಳು ಭಾಗವಹಿಸಿದರು. ಗೌರವ ಉಪಸ್ಥಿತಿಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಾಧಾಕೃಷ್ಣ ಉಡುವೆಕೋಡಿ, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ರುಕ್ಮಯ್ಯ ನಾಯ್ಕ, ಉಪಾಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ, ಸದಸ್ಯರಾದ ಶ್ರೀಮತಿ ಗೀತಾ, ಪಂಜ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಉದಯಕುಮಾರ್ ರೈ, ಶಾಲಾ ಮುಖ್ಯಗುರು ಕೃಷ್ಣಮೂರ್ತಿ, ವಿದ್ಯಾರ್ಥಿ ಪೋಷಕರು ಹಾಜರಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು 35ಕ್ಕೂ ಮಿಕ್ಕಿ ಸಿಹಿ ತಿಂಡಿ ತಯಾರಿಸಿ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ದಯಾನಂದಿನಿ, ಶಾಲಾ ಅಧ್ಯಾಪಕ ವೃಂದದವರು ಸಹಕರಿಸಿದರು. ಸ್ಕೌಟ್ಸ್ ಶಿಕ್ಷಕ ಶಿವಪ್ರಸಾದ್ ಜಿ. ಕಾರ್ಯಕ್ರಮ ಸಂಘಟಿಸಿದರು.