ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಾಹನಗಳು ಆಕ್ಸಿಡೆಂಟ್ ಆಗುತ್ತಿದ್ದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಇಂದು ಸಂಜೆ ಸುರೇಶ್ ಎಂಬುವವರು ಸುಳ್ಯ ಕಡೆಗೆ ತನೂ ಓಡಿಸುತ್ತಿರುವ ಅಟೋ ರಿಕ್ಷದಲ್ಲಿ ಪ್ರಯಾಣಿಸುತ್ತಿದ್ದಾಗ ಮುಂಬಾಗದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ತಬ್ಬುಕ್ ದಾರಿಮಿ ಎಂಬುವವರು ಕಾರು ರಿಕ್ಷಕ್ಕೆ ಗುದ್ದಿದ ಪರಿಣಾಮ ಇದೀಗ ಕಾರು ಚಾಲಕರಿಗೆ ಕಲ್ಲುಗುಂಡಿಯಲ್ಲಿ ಚಿಕಿತ್ಸೆ ನೀಡಲಾಗಿದ್ದು ರಿಕ್ಷಾ ಚಾಲಕ ಸುರೇಶ್ ರವರಿಗೆ ಹೆಚ್ಚಿನ ಗಾಯಗಳಾದ ಹಿನ್ನಲೆಯಲ್ಲಿ ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.