

ಕಡಬ ಮುಖ್ಯ ರಸ್ತೆಯ ಹಳೇ ಸ್ಟೇಶನ್ ಹತ್ತಿರದ ಸುಶಾಂತಿ ಕಾಂಪ್ಲೆಕ್ಸ್ ನಲ್ಲಿ ಮಹೇಶ್ ಎಣ್ಮೂರು ಹಾಗೂ ಲಕ್ಷ್ಮೀಶ ಬೆಳ್ಳಾರೆ ಮಾಲಕತ್ವದಲ್ಲಿ ಶ್ರೀ ಮಹಾಲಕ್ಷ್ಮೀ ಸ್ಪೋರ್ಟ್ಸ್ ಆಂಡ್ ಸೈನ್ಸ್ ಮಳಿಗೆ ಫೆ.18ರಂದು ಶುಭಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಕಡಬದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ , ಪುತ್ತೂರು ವಲಯಾರಣ್ಯಾಧಿಕಾರಿ ಶ್ರೀ ಕಿರಣ್ ಬಿ ಎಮ್, ಲೋಕಾಯುಕ್ತ ಡಿವೈಎಸ್ಪಿ ಪ್ರಮೋದ್ ಜೈನ್ ನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಾಲಕರಾದ ಮಹೇಶ್ ಎಣ್ಮೂರು ಮತ್ತು ಲಕ್ಷ್ಮೀಶ ಬೆಳ್ಳಾರೆ, ಅತಿಥಿಗಳು ಹಾಗೂ ಗುರು ಹಿರಿಯರು ದೀಪ ಪ್ರಜ್ವಲನೆ ಮಾಡುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು.
