
ಮಡಪ್ಪಾಡಿ:ಯುವಕ ಮಂಡಲ ( ರಿ.) ಮಡಪ್ಪಾಡಿ ಆಶ್ರಯದಲ್ಲಿ ಫೆಬ್ರವರಿ 12ರಿಂದ ಫೆಬ್ರವರಿ 18ರವರೆಗೆ ಏಳು ದಿನಗಳ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ ಯುವಕ ಮಂಡಲ ಸಭಾಭವನ ಮಡಪ್ಪಾಡಿಯಲ್ಲಿ ನಡೆಯಲಿದೆ.ಶಿವಮೊಗ್ಗದ ಶ್ರೀ ಚಂದನ್. ಜಿ. ಮತ್ತು ಶ್ರೀ. ಮಂಜುನಾಥ್. ಎನ್.ರವರು ಚಿಕಿತ್ಸೆ ನೀಡಲಿದ್ದಾರೆ.ಈ ಶಿಬಿರದಲ್ಲಿ ಮೊಣಕಾಲು ನೋವು, ಸೊಂಟ ನೋವು, ಬೆನ್ನು ನೋವು, ಕೈಕಾಲು ಸೆಳೆತ, ಮಲಬದ್ಧತೆ, ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್, ಕೊಲೆಸ್ಟ್ರಾಲ್, ದೇಹದ ಅತಿಭಾರ, ಸ್ತ್ರೀಯರ ಸಮಸ್ಯೆಗಳು, ಜೀರ್ಣ ಸಮಸ್ಯೆ, ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 814 7870 814 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.
