ಇಂದು ಮುಗಿಯುವವರೆಗೂ ನಾಳೆ ನಮ್ಮದಲ್ಲ, ಬದುಕು ಕೊನೆಯಾಗುವವರೆಗೂ ಆಸೆ-ದುರಾಸೆಗಳು ಕೊನೆಯಾಗುವುದಿಲ್ಲ…
ಮನುಷ್ಯನ ಮನಸ್ಸಿನ ಆಸೆಗಳಿಗೆ ಮಿತಿಯೇ ಇಲ್ಲ, ಅತಿಯಾಸೆಯೇ ದುಃಖಕ್ಕೆ ಮೂಲ ಎಂಬ ಮಾತು ಇಂದು ಯಾರಿಗೂ ನೆನಪೇ ಇಲ್ಲ…
ಇನ್ನಷ್ಟು ಬೇಕು-ಮತ್ತಷ್ಟು ಬೇಕು ಎನ್ನುವ ಮನುಷ್ಯನ ಮನಸ್ಥಿತಿ ಬದಲಾಗಲೇ ಇಲ್ಲ, ಎಷ್ಟೇ ದೊರೆತರೂ ಮನುಷ್ಯನ ಮನಸ್ಸಿಗೆ ತೃಪ್ತಿಯೇ ಇಲ್ಲ…
ಹಿರಿಯರ ಬದುಕಿನ ರೀತಿಯನ್ನು ನಾವು ಪಾಲಿಸುವುದೇ ಕಡಿಮೆ, ಹಾಗಾಗಿ ಆಗಿನ ಬದುಕಿಗೆ ಹೋಲಿಸಿಕೊಂಡರೆ ಈಗಿನ ಬದುಕಿನಲ್ಲಿ ಖುಷಿ-ಸಂತೋಷ ತುಂಬಾ ಕಡಿಮೆ…
ಏನೂ ಇಲ್ಲದೆ ಇದ್ದರೂ ಅಂದು ಬದುಕಿಗೆ ನೆಮ್ಮದಿಯಿತ್ತು-ಮನಸ್ಸಿಗೆ ತೃಪ್ತಿಯಿತ್ತು, ಇಂದು ಎಲ್ಲವೂ ಇದ್ದರೂ ಕೂಡ ಬದುಕಿಗೆ ನೆಮ್ಮದಿಯಿಲ್ಲ-ಮನಸ್ಸಿಗೆ ತೃಪ್ತಿಯಿಲ್ಲ…
ಇವೆಲ್ಲವೂ ತಿಳಿದಿದ್ದರೂ ಹಿರಿಯರ ಬದುಕಿನ ರೀತಿಯನ್ನು ಇಂದು ಮರೆಯುತ್ತಿಹರು ಎಲ್ಲಾ, ಆಧುನಿಕತೆಯ ಗುಂಗಿನಲ್ಲಿ ಮರೆಯುತ್ತಿಹರು ಎಲ್ಲಾ…
ಮರವೆಷ್ಟೇ ಎತ್ತರ ಬೆಳೆದರೂ ಬೇರು ಭೂಮಿಯ ಬಿಡುವುದೇ ಇಲ್ಲ, ಬಿಟ್ಟರೆ ಮರಕ್ಕೆ ಉಳಿಗಾಲವೇ ಇಲ್ಲ…
ಅಂತೆಯೇ ನಾವೆಷ್ಟೇ ಮುಂದುವರಿದರೂ ಹಿರಿಯರ ಬದುಕಿನ ರೀತಿಯನ್ನು ಮರೆಯುವಂತೆ ಇಲ್ಲ, ಮರೆತರೆ ನಮ್ಮಯ ಬದುಕಿಗೆ ಅರ್ಥವೇ ಇಲ್ಲ…
ಇಂದಿನ ಬದುಕಿಗೂ, ಅಂದಿನ ಬದುಕಿಗೂ ಹೋಲಿಕೆಯೇ ಇಲ್ಲ, ಹೋಲಿಸಿಕೊಂಡರೆ ಹಿರಿಯರ ಬದುಕಿನ ಮುಂದೆ ನಮ್ಮಯ ಬದುಕು ಏನೇನೂ ಅಲ್ಲ…
✍️ಉಲ್ಲಾಸ್ ಕಜ್ಜೋಡಿ
- Tuesday
- December 3rd, 2024