ಮೇನಾಲ ಮೇದಿನಡ್ಕದಲ್ಲಿ ಧರ್ಮರಸು ಇರ್ವೇರು ಉಳ್ಳಾಕುಲು ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ




ಅಜ್ಜಾವರ ಗ್ರಾಮದ ಮೇನಾಲ ಗ್ರಾಮ ದೈವ ಮೇನಾಲ ಉಳ್ಳಾಕುಲು ಮಾಡ ಚಾವಡಿ ಪರಿವಾರ ಮತ್ತು ನಾಗದೇವರು ಇಲ್ಲಿ ಶ್ರೀ ಧರ್ಮರಸು ಇರ್ವೇರು ಉಳ್ಳಾಕುಲು ದೈವ ಮತ್ತು ಪರಿವಾರ ದೈವಗಳ ನೇಮೋತ್ಸವವು ಮೇದಿನಡ್ಕದಲ್ಲಿ ನಡೆಯುವುತ್ತಿದೆ.

. . . . . . . . .


ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ನೇಮೋತ್ಸವ ನಡೆಯಲಿದ್ದು, ಫೆ.1ರಂದು ಬೆಳಗ್ಗೆ ನಾಗತಂಬಿಲ ಮೇದಿನಡ್ಕದಲ್ಲಿ ನಡೆದು ಬಳಿಕ ಶ್ರೀ ಉಳ್ಳಾಕುಲು ಚಾವಡಿಯಲ್ಲಿ ಗಣಪತಿ ಹವನ, ಶುದ್ಧಿ ಕಲಶ ಮತ್ತು ದೈವಗಳಿಗೆ ತಂಬಿಲ. ಬೆಳಗ್ಗೆ 11 ಗಂಟೆಗೆ ಮೇದಿನಡ್ಕದಲ್ಲಿ ಉಗ್ರಾಣ ತುಂಬಿಸಲಾಯಿತು. ಸಂಜೆ ಮೇನಾಲ ಉಳ್ಳಾಕುಲ ಚಾವಡಿಯಿಂದ ಭಂಡಾರ ತೆಗೆದು ದೈಯರ ಮಂಟಪ, ರುದ್ರಚಾಮುಂಡಿ ಕಟ್ಟೆ, ಉಳ್ಳಾಕುಲ ಮಾಡಕ್ಕೆ ಹೋಗಿ ಮೇದಿನಡ್ಕ (ಕೊಡಿಯಡಿ) ದೈವ ನಡೆಯುವ ಸ್ಥಳಕ್ಕೆ ಬಂಡಾರದ ಆಗಮನವಾಯಿತು. ಇಂದು ಮೇದಿನಡ್ಕದಲ್ಲಿ ಮುಂಜಾನೆ 6 ಗಂಟೆಗೆ ಇರ್ವೆರು ಉಳ್ಳಾಕುಲು ದೈವದ ನೇಮ ಆರಂಭವಾಗಿ, ಪ್ರಸಾದ ವಿತರಣೆ ನಡೆಯಿತು. 10 ಗಂಟೆಯಿಂದ ನಾಯರ್ ದೈವ ಮತ್ತು ಪುರುಷ ದೈವ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ. ಮಧ್ಯಾಹ್ನ ರುದ್ರಚಾಮುಂಡಿ ದೈವದ ನೇಮೋತ್ಸವ ನಡೆಯುವುದು. ಪ್ರಸಾದ ವಿತರಣೆ ಬಳಿಕ ವರ್ಣರ ಪಂಜುರ್ಲಿ ದೈವದ ನೇಮೋತ್ಸವ. ಸಾಯಂಕಾಲ ಮೇದಿನಡ್ಕದಿಂದ ಉಳ್ಳಾಕುಲು ಚಾವಡಿಗೆ ಭಂಡಾರ ತರಲಾಗುವುದು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading