
ಹರಿಹರ ಪಲ್ಲತ್ತಡ್ಕ ಸಮೀಪ ಮಲ್ಲಾರ ಎಂಬಲ್ಲಿ ಸ್ಕೂಟರ್ ಅಪಘಾತದಲ್ಲಿ ಗಾಯಗೊಂಡ
ಪಂಜದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ಘಟನೆ ಜ.31 ರಂದು ವರದಿಯಾಗಿದೆ.
ಪಂಜ ಸಮೀಪದ ಕೂತ್ಕುಂಜ ಗ್ರಾಮದ ಕಲ್ಕ ಗೋಪಾಲ ಮತ್ತು ದೇವಕಿ ದಂಪತಿಗಳ ಪುತ್ರ
ಚಿದಾನಂದ (37ವ) ಮೃತ ಯುವಕ.
ಘಟನೆಯ ವಿವರ
ಜ.30 ರಾತ್ರಿ ಹರಿಹರದ ಕಡೆ ಕಾರ್ಯಕ್ರಮವೊಂದಕ್ಕೆ ಹೋಗಿ ಮನೆಗೆ ಹಿಂತುರುಗುತ್ತಿದ್ದ ವೇಳೆ ಹರಿಹರ ಸಮೀಪ ಮಲ್ಲಾರ ಎಂಬಲ್ಲಿ ಸ್ಕೂಟರ್ ಅಪಘಾತ ಸಂಭವಿಸಿದೆ. ಇದೇ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ವಾಹನದವರು ಆಂಬ್ಯುಲೆನ್ಸ್ ನಲ್ಲಿ
ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ
ಬಳಿಕ ಅವರ ಮನೆಯವರಿಗೆ ತಿಳಿಸಿದರು ಎನ್ನಲಾಗಿದೆ. ರಾತ್ರಿ ಮನೆಯವರು ಆಸ್ಪತ್ರೆಗೆ ತೆರಳಿ
ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ .ಮೃತರು ತಂದೆ, ತಾಯಿ,ಪತ್ನಿ ಶ್ರೀಮತಿ ಪಲ್ಲವಿ, ಪುತ್ರ ದ್ರುವನ್, ಸಹೋದರಿಯರಾದ ಶ್ರೀಮತಿ ಪಾರ್ವತಿ ದೇಜಪ್ಪ ಕಲ್ಲಾಜೆ, ಶ್ರೀಮತಿ ಹೇಮಾ ಪ್ರವೀಣ್ ಕಲ್ಕ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ. ಈ ಕುರಿತಂತೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.