Ad Widget

ಜ. 6 ರಂದು ವಳಲಂಬೆಯಲ್ಲಿ ರಾಜ್ಯಮಟ್ಟದ ಜನಪದ ವೈಭವ – ಜ.4 ಮತ್ತು 5 ರಂದು ರಾಜ್ಯ ಮಟ್ಟದ ನಾಯಕತ್ವ ಶಿಬಿರ

ಸುಳ್ಯದ ಕೆ.ವಿ.ಜಿ. ಪಾಲಿಟೆಕ್ನಿಕ್ ನ ಎನ್.ಎಸ್.ಎಸ್. ಹಿರಿಯ ವಿದ್ಯಾರ್ಥಿಗಳ ಸಂಘ, ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ ಇದರ ನೇತ್ರತ್ವದಲ್ಲಿ 2024 ರ ಜನವರಿ 6 ರಂದು ರಾಜ್ಯಮಟ್ಟದ ಜನಪದ ರೂಪಕಗಳ ಸ್ಪರ್ಧೆ 'ಜನಪದ ವೈಭವ -2024' ಗುತ್ತಿಗಾರು ವಳಲಂಬೆ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಸುಳ್ಯದ ಎನ್‌.ಎಸ್.ಎಸ್. ಸೇವಾ ಸಂಘದ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.ಡಿ.1...

ಪ್ರವೀಣ್ ಕೊಲೆ ಪ್ರಕರಣದ- ಸುಳ್ಯದ ಆರೋಪಿ ಓರ್ವನಿಗೆ 2 ದಿನಗಳ ಜಾಮೀನು

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಯಾಗಿರುವ ನಾವೂರು ನಿವಾಸಿ ಇಬ್ರಾಹಿಂ ಶಾ ನಾವೂರುನನ್ನು 15ನೇ ಆರೋಪಿಯಾಗಿ ಪೊಲೀಸರು ಬಂಧಿಸಿದ್ದರು. ಸುಳ್ಯದಲ್ಲಿ ಈತನ ತಂಗಿಯ ಮದುವೆ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಜಾಮೀನು ದೊರೆತಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಈತ ಮೈಸೂರಿನ ಜೈಲಿನಲ್ಲಿದ್ದು ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಜೈಲು ಸೇರಬೇಕಿದೆ.2022 ಜುಲೈ 26ರಂದು...
Ad Widget

ಹೃದಯವನ್ನು ಆರೋಗ್ಯವಂತವಾಗಿಸುತ್ತೆ ಈ ಅಭ್ಯಾಸಗಳು..

ಹೃದಯರಕ್ತನಾಳದ ಕಾಯಿಲೆ, ವಿಶೇಷವಾಗಿ ಹೃದಯಾಘಾತವು ವಿಶ್ವದಲ್ಲೇ ಅತ್ಯಂತ ಮಾರಣಾಂತಿಕ ಕಾಯಿಲೆ ಎನಿಸಿಕೊಂಡಿದೆ. ಭಾರತೀಯರಲ್ಲಿ ಪಾಶ್ಚಿಮಾತ್ಯರಿಗಿಂತ ಸುಮಾರು 10 ರಿಂದ 15 ವರ್ಷಗಳಷ್ಟು ಮುಂಚೆಯೇ ಹೃದಯಾಘಾತ ಅಭಿವೃದ್ಧಿಗೊಳ್ಳುವ ಅಪಾಯ ಹೆಚ್ಚಿದೆ. ಈಗಿನ ಅಂಕಿಅಂಶಗಳ ಪ್ರಕಾರ 4೦ ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾದವರ ಪ್ರಮಾಣ ಶೇ 4೦ ರಷ್ಟಿದೆ. ಹೃದಯಾಘಾತವು ಜೀವನಶೈಲಿಯಿಂದ ಉಂಟಾಗುತ್ತಿರುವ ಕಾಯಿಲೆಯಾಗಿದೆ. ಮುಖ್ಯವಾಗಿ ಹೃದಯ...

ಸುಳ್ಯ : ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡವರಿಗೆ ಸಿಹಿ ಸುದ್ದಿ- ಆದೇಶ ಹಿಂಪಡೆದ ಕಾಂಗ್ರೆಸ್ ಶಿಸ್ತುಕ್ರಮ ಸಮಿತಿ

ಕರ್ನಾಟಕ ವಿಧಾನ ಸಭಾ ಚುನಾವಣೆ ಬಳಿಕ ನಡೆದ ಬೆಳವಣಿಗೆಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಕೆಲವು ಮುಖಂಡರನ್ನು ಕಾಂಗ್ರೆಸ್ ಶಿಸ್ತುಕ್ರಮ ಸಮಿತಿ ದಿನಾಂಕ 08-06-2023 ರಂದು ಪಕ್ಷ ವಿರೋಧಿ ಚಟುವಟಿಕೆಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಮರುಆದೇಶ ಮಾಡಿ ಉಚ್ಛಾಟಿತರಾಗಿರುವ ಶ್ರೀ ಉಷಾ ಅಂಚನ್, ಶ್ರೀಮತಿ ಆಶಾ ಲಕ್ಷ್ಮಣ್, ಗುಂಡ್ಯ, ಪ್ರವೀಣ್ ಕೆಡಂಜಿ, ರವಿ...

ಅರಂಬೂರು ಹೊಳೆಯಲ್ಲಿ ಬಿದ್ದು ವ್ಯಕ್ತಿ ಸಾವು ಪ್ರಕರಣ ಅಯ್ಯಪ್ಪ ಮಾಲಾಧಾರಿಗಳ ಸ್ಪಷ್ಟನೆ.

ಸುಳ್ಯ ಆಲೆಟ್ಟಿ ಗ್ರಾಮದ ಅರಂಬೂರು ಸೇತುವೆ ಬಳಿಯಲ್ಲಿ ಕೊಡಗು ಜಿಲ್ಲೆಯ ಮಣ್ಣಂಗೇರಿ ನಿವಾಸಿ ಒಬ್ಬರು ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿತ್ತು. ಈ ಘಟನೆ ವರದಿಯಾಗುತ್ತಿದ್ದಂತೆ ನಾನಾ ಊಹ ಪೋಹಗಳು ಹರಿದಾಡುತ್ತಿದ್ದಂತೆ ಅಯ್ಯಪ್ಪ ಮಾಲಾಧಾರಿಗಳು ಮೃತ ವ್ಯಕ್ತಿಯು ನಮ್ಮ ಜೊತೆಗೆ ಬಂದವರಲ್ಲ ಅಲ್ಲದೇ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮಕ್ಕು ಬಂದವರಲ್ಲ ಎಂದು ಸ್ಪಸ್ಟನೆ ನೀಡಿದ್ದು ಎಲ್ಲಾ ಊಹಪೋಹಗಳಿಗೆ...

ನಡುಗಲ್ಲು : ಶಾಲಾ ವಾರ್ಷಿಕೋತ್ಸವ – ಶಾಸಕಿ ಕು. ಭಾಗೀರಥಿ ಮುರುಳ್ಯ ಉಪಸ್ಥಿತಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಮತ್ತು ಹಿರಿಯ ವಿದ್ಯಾರ್ಥಿ ಸಂಘ ನಡುಗಲ್ಲು ಹಾಗೂ ಊರ ವಿದ್ಯಾಭಿಮಾನಿಗಳ ಸಹಭಾಗಿತ್ವದಲ್ಲಿ ನ.29 ರಂದುವಾರ್ಷಿಕೋತ್ಸವ ಸಮಾರಂಭ ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ, ಲೀಡರ್ ಶಿಪ್...

ಅರಂಬೂರು: ಹೊಳೆಯಲ್ಲಿ ಮುಳುಗಿದ ವ್ಯಕ್ತಿ ಮೃತ್ಯು ಶವ ಹೊರತೆಗೆದ ಪೈಚಾರ್ ಮುಳುಗು ತಜ್ಞರ ತಂಡ

ಅರಂಬೂರು ಬಳಿ ಪಯಸ್ವಿನಿ ನದಿಗೆ ಸ್ನಾನಕ್ಕೆ ಇಳಿದ ಎರಡನೇ ಮಣ್ಣಗೇರಿಯ ನಿವಾಸಿಯಾಗಿರುವ ವೆಂಕಟರಮಣ ಎಂಬವರು ಹೊಳೆಯಲ್ಲಿ ನಾಪತ್ತೆಯಾಗಿದ್ದರು. ಇದೀಗ ಅಗ್ನಿಶಾಮಕ ದಳ ಹಾಗೂ ಪೈಚಾರ್ ಮುಳುಗು ತಜ್ಞರ ತಂಡ ಆಗಮಿಸಿ ಮುಳುಗಿದ ವ್ಯಕ್ತಿಯ ದೇಹವನ್ನು ಹೊರೆತೆಗೆದಿದ್ದಾರೆ.

ಅರಂಬೂರು: ಹೊಳೆಯಲ್ಲಿ ವ್ಯಕ್ತಿ ನಾಪತ್ತೆ

ಎರಡನೇ ಮಣ್ಣಗೇರಿಯ ನಿವಾಸಿಯಾಗಿರುವ ವೆಂಕಟರಮಣ ಎಂಬವರು ಅರಂಬೂರು ಹೊಳೆಯಲ್ಲಿ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಅರಂಬೂರು ಅಯ್ಯಪ್ಪ ಮಾಲಾಧಾರಿಗಳ ಜೊತೆಯಲ್ಲಿ ಸ್ನಾನಕ್ಕೆ ಇಳಿದಿದ್ದು ಮಾಲಾಧಾರಿಗಳು ಹೊಳೆಯಿಂದ ಮೇಲೆ ಬಂದು ಹಿಂತಿರುಗಿ ನೋಡಿದಾಗ ನಾಪತ್ತೆಯಾದ ವ್ಯಕ್ತಿಯು ಕಾಣಿಸದೇ ಇದ್ದು ಸ್ಥಳೀಯರು ಹೇಳುವ ಪ್ರಕಾರ ಅವರು ಮಧ್ಯ ಸೇವಿಸಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ನಾಪತ್ತೆಯಾದ ವ್ಯಕ್ತಿಯ ಹುಡುಕಾಟ ನಡೆಸಲಾಗುತ್ತಿದೆ. ಈಗಾಗಲೆ...

ಮೈಸೂರು : ದ.ಕ.ಜಿಲ್ಲಾ ಗೌಡ ಸಂಘದ ವತಿಯಿಂದ ದೀಪಾವಳಿ ಆಚರಣೆ

ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ ಇದರ ವತಿಯಿಂದ ಮೈಸೂರಿನಲ್ಲಿ ಸಾಂಕೇತಿಕ ದೀಪಾವಳಿ ಆಚರಣೆ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಿಶ್ವನಾಥ್ ದೇವಶ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಕುಲಪತಿಗಳಾದ ಚಿದಾನಂದ ಕೊಳಂಬೆ ಹಾಗೂ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ (ರಿ) ಇದರ ಕಾರ್ಯದರ್ಶಿಯಾದ ತೇಜಸ್ವಿ ನಾಯಕ್ ವಹಿಸಿದ್ದರು. ಸಂಘದ ಕಾರ್ಯದರ್ಶಿಯಾದ...

ಡಿ.03 : ಮಡಪ್ಪಾಡಿಯಲ್ಲಿ ಕ್ರಿಕೆಟ್ ಪಂದ್ಯಾಟ

ಯುವಕ ಮಂಡಲ ಮಡಪ್ಪಾಡಿ ಇದರ ವತಿಯಿಂದ ಡಿ. 03 ರಂದು ಎಂ.ಪಿ.ಎಲ್. ಸೀಸನ್ 2 ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಬೆಳಿಗ್ಗೆ ಗಂಟೆ 7.30 ಕ್ಕೆ ಉದ್ಘಾಟನಾ ಸಮಾರಂಭದ ನಂತರ ಪಂದ್ಯಾಟ ಪ್ರಾರಂಭವಾಗಲಿದ್ದು, ಸಂಜೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Loading posts...

All posts loaded

No more posts

error: Content is protected !!